Domestic tournament: ಬುಚ್ಚಿಬಾಬು ಕ್ರಿಕೆಟ್‌ನಲ್ಲಿ ಅಯ್ಯರ್, ಸೂರ್ಯ ಆಟ
ತಮಿಳುನಾಡಿನ 4 ಕೇಂದ್ರಗಳಲ್ಲಿ ಗುರುವಾರ ಈ ಪಂದ್ಯಾವಳಿ ಆರಂಭ
Team Udayavani, Aug 13, 2024, 11:14 PM IST
ಮುಂಬಯಿ: ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ, ಬಿಸಿಸಿಐ ಒಪ್ಪಂದ ವ್ಯಾಪ್ತಿಯಲ್ಲಿರುವ ಕ್ರಿಕೆಟಿಗರು ದೇಶಿ ಪಂದ್ಯಾವಳಿಯಲ್ಲಿ ಆಡಲು ಸಾಲುಗಟ್ಟಿದಂತಿದೆ. ಬಹುತೇಕ ಕ್ರಿಕೆಟಿಗರು ದುಲೀಪ್ ಟ್ರೋಫಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಈ ನಡುವೆ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಅವರೆಲ್ಲ “ಬುಚ್ಚಿಬಾಬು ಟ್ರೋಫಿ’ ಆಹ್ವಾನಿತ ಪಂದ್ಯಾವಳಿಯಲ್ಲಿ ಆಡುವ ನಿರ್ಧಾರಕ್ಕೆ ಬಂದಿದ್ದಾರೆ.
ತಮಿಳುನಾಡಿನ 4 ಕೇಂದ್ರಗಳಲ್ಲಿ ಗುರುವಾರ ಈ ಪಂದ್ಯಾವಳಿ ಆರಂಭವಾಗಲಿದೆ. ಇಲ್ಲಿನ ಒಂದು ಪಂದ್ಯದಲ್ಲಿ ಶ್ರೇಯಸ್ ಅಯ್ಯರ್, ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮುಂಬಯಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಜತೆಗೆ ಇಶಾನ್ ಕಿಶನ್ ಕೂಡ ಆಡಲಿದ್ದು, ಅವರು ಜಾರ್ಖಂಡ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಅ. 27ರಿಂದ ನಡೆಯುವ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಎಂಸಿಎ ಜಂಟಿ ಕಾರ್ಯದರ್ಶಿ ದೀಪಕ್ ಪಾಟೀಲ್ ಹೇಳಿದ್ದಾರೆ.
ಇಶಾನ್ ಕಿಶನ್ ಆಗಮನ
2023ರಲ್ಲಿ ಭಾರತ ತಂಡದಿಂದ ಹೊರಬಿದ್ದ ಬಳಿಕ ಇಶಾನ್ ಕಿಶನ್ ಅವರಿಗೆ ರಣಜಿ ಪಂದ್ಯಾವಳಿಯಲ್ಲಿ ಆಡುವಂತೆ ಬಿಸಿಸಿಐ ಸೂಚಿಸಿತ್ತು. ಆದರೆ ಅವರು ಇದನ್ನು ನಿರ್ಲಕ್ಷಿಸಿದರು. ಇದರಿಂದ ಅವರನ್ನು ಕೇಂದ್ರೀಯ ಒಪ್ಪಂದದಿಂದ ಕೈಬಿಡಲಾಯಿತು. ಅನಂತರ ಇಶಾನ್ ಕಿಶನ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಆಡಿರಲಿಲ್ಲ.
ಪಂದ್ಯಾವಳಿಯಲ್ಲಿ 12 ತಂಡಗಳು ಪಾಲ್ಗೊಳ್ಳಲಿವೆ. ಇವುಗಳೆಂದರೆ ಮಧ್ಯಪ್ರದೇಶ, ದಿಲ್ಲಿ, ಹರಿಯಾಣ, ಹೈದರಾಬಾದ್, ಬಂಗಾಲ, ಮುಂಬಯಿ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಛತ್ತೀಸ್‌ಗಢ, ಗುಜರಾತ್, ತಮಿಳುನಾಡು ಕ್ರಿಕೆಟ್ ಮಂಡಳಿ ಇಲೆವೆನ್ ಮತ್ತು ತಮಿಳುನಾಡು ಕ್ರಿಕೆಟ್ ಮಂಡಳಿ ಅಧ್ಯಕ್ಷರ ಬಳಗ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.