Canada Tennis Tournament: ಪಾಪಿರಿನ್, ಪೆಗುಲಾ ಚಾಂಪಿಯನ್ಸ್
Team Udayavani, Aug 13, 2024, 11:24 PM IST
ಮಾಂಟ್ರಿಯಲ್ : ಕೆನಡಾದಲ್ಲಿ ನಡೆದ ನ್ಯಾಶನಲ್ ಬ್ಯಾಂಕ್ ಓಪನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಆಸ್ಟ್ರೇಲಿಯದ ಅಲೆಕ್ಸಿ ಪಾಪಿರಿನ್ ಪಾಲಾಗಿದೆ. ವಿಶ್ವದ 62ನೇ ರ್‍ಯಾಂಕ್‌ನ ಅವರು ತಮಗಿಂತ ಉನ್ನತ ದರ್ಜೆಯ ಆಟಗಾರ, ರಷ್ಯಾದ ಆ್ಯಂಡ್ರೆ ರುಬ್ಲೇವ್ ವಿರುದ್ಧ 6-2, 6-4 ಅಂತರದ ಗೆಲುವು ಸಾಧಿಸಿ ಮೊದಲ ಎಟಿಪಿ 1000 ಪ್ರಶಸ್ತಿಯನ್ನೆತ್ತಿದರು.
ಪ್ರಶಸ್ತಿಯ ಹಾದಿಯಲ್ಲಿ ಅಲೆಕ್ಸಿ ಪಾಪಿರಿನ್ 11ನೇ ಶ್ರೇಯಾಂಕದ ಬೆನ್ ಶೆಲ್ಟನ್, 7ನೇ ಶ್ರೇಯಾಂಕದ ಗ್ರಿಗರ್ ಡಿಮಿಟ್ರೋವ್, 4ನೇ ಶ್ರೇಯಾಂಕದ ಹ್ಯೂಬರ್ಟ್ ಹುರ್ಕಾಜ್, ಬಳಿಕ ಅಮೆರಿಕದ ಸೆಬಾಸ್ಟಿಯನ್ ಕೋರ್ಡ ಅವರನ್ನು ಮಣಿಸಿದ್ದರು.
ಈ ಜಯದಿಂದಾಗಿ ಪಾಪಿರಿನ್ ಅವರ ಟೆನಿಸ್ ರ್‍ಯಾಂಕ್ 62ರಿಂದ 23ಕ್ಕೆ ಏರಿಕೆಯಾಗಲಿದೆ.
ಆಲ್ ಅಮೆರಿಕನ್ ಫೈನಲ್
ವನಿತಾ ಫೈನಲ್‌ನಲ್ಲಿ ಜೆಸ್ಸಿಕಾ ಪೆಗುಲಾ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆಲ್ ಅಮೆರಿಕನ್ ಸೆಣಸಾಟದಲ್ಲಿ ಅವರು ಅಮಂಡಾ ಅನಿಸಿಮೋವಾ ವಿರುದ್ಧ 6-3, 2-6, 6-1 ಅಂತರದ ಜಯ ಒಲಿಸಿಕೊಂಡರು. ಇದು ಅವರ ಟೆನಿಸ್ ಬಾಳ್ವೆಯ
6ನೇ ಪ್ರಶಸ್ತಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.