Aati Celebration; ಆಟಿ ತಿಂಗಳ ಆಚರಣೆ: ಹೀಗಿದ್ದರೆ ಅರ್ಥಪೂರ್ಣ


Team Udayavani, Aug 14, 2024, 6:40 AM IST

aati celebration

ನಾವಿಂದು ತುಳುನಾಡಿನಲ್ಲಿ ಆಟಿ ತಿಂಗಳನ್ನು ಗಮ್ಮತ್ತಿನ ಅವಧಿಯೆಂದು ಪರಿಗಣಿಸಿ ಹಬ್ಬದ ರೀತಿಯಲ್ಲಿ ಆಚರಿಸಿ ಸಂಭ್ರಮ ಪಡುವುದನ್ನು ಕಾಣುತ್ತೇವೆ. ಬಹುಶಃ ಮಳೆಗಾಲ ಮುಗಿಯಿತು, ನೆರೆ ಹಾವಳಿ ಕಡಿಮೆಯಾಯಿತು, ರೋಗರುಜಿನಗಳು ಕಡಿಮೆಯಾದವು ಎಂದು ಹೀಗೆ ಸಂಭ್ರಮ ಪಡುತ್ತಿರಬಹುದು. ಮುಂದೆ ಬರುವ ಹಬ್ಬಗಳನ್ನು ಸ್ವಾಗತಿಸುವ ಒಂದು ಪರಿಯೂ ಆಗಿರಬಹುದು. ಆದರೆ ಆಟಿ ತಿಂಗಳಲ್ಲಿ ಗತಕಾಲದ ನೆನಪುಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಆಯೋಜಿಸುವ ಕಾರ್ಯಕ್ರಮಗಳು ವಿಶಿಷ್ಟವಾಗಿವೆ. ಕೆಲವು ಸಮಾರಂಭಗಳ ಸ್ವರೂಪವನ್ನು ಗಮನಿಸಿದರೆ ಅಚ್ಚರಿಯೂ ಆಗುತ್ತದೆ!

ಆಟಿಯ ಹಬ್ಬ ತಿಂಗಳಿಡೀ ಅಲ್ಲಲ್ಲಿ ನಡೆಯುತ್ತಿರುತ್ತದೆ. ಕಾರ್ಯಕ್ರಮಗಳ ಶೀರ್ಷಿಕೆಗಳಲ್ಲಿ ಈ ವೈಭವೀಕರಣದ ಛಾಯೆಯನ್ನು ಕಾಣಬಹುದು. ಬಹುತೇಕ ಆಚರಣೆಗಳಲ್ಲಿ ವೈಭವ, ಸಂಭ್ರಮಗಳು ತುಂಬಿ ತುಳುಕುತ್ತಿರುತ್ತವೆ. ಹೀಗೆ ವೈಭವ, ತಿಂಡಿ ತಿನಿಸುಗಳ ಭರಾಟೆ, ಭರ್ಜರಿ ಊಟೋಪಚಾರ ಒಂದು ಕಡೆಯಾದರೆ, ಮಳೆಗಾಲದಲ್ಲಿ ಬೇಸಾಯದ ಕಷ್ಟಕಾಲದಲ್ಲಿ ಒಂದು ಹೊತ್ತಿನ ಊಟಕ್ಕೆ ತತ್ವಾರ ಇದ್ದ ಕಾಲದ ನೆನಪುಗಳನ್ನು ಮಾಡಿಕೊಳ್ಳುವುದು ಇನ್ನೊಂದು ಕಡೆ ನಡೆಯುತ್ತದೆ. ಕಷ್ಟಗಳು ಇದ್ದೇ ಇರುತ್ತವೆ, ಅದಕ್ಕೆ ನಿತ್ಯನಿರಂತರ ಮರುಗುವುದರಲ್ಲಿ ಅರ್ಥವಿಲ್ಲ, ಹಾಗಾಗಿ ಸಂಭ್ರಮ ಪಡುವುದು ಸರಿ ಎಂಬ ತರ್ಕವನ್ನು ಮಾಡುವವರೂ ಇರಬಹುದು. ಆದರೆ ಆಟಿಯ ಆಚರಣೆಗಳಲ್ಲಿ ಗತಕಾಲದ ಯಾವ ಅಂಶಗಳು ಮುನ್ನೆಲೆಗೆ ಬರಬೇಕು, ಇಂದಿನ ತಲೆಮಾರಿಗೆ ದಾಟಿಸಬೇಕಾದ ಮಾಹಿತಿಗಳೇನು, ಆಟಿ ಆಚರಣೆಗಳ ಆಶಯಗಳೇನು, ಮಳೆಗಾಲದ ಸಮಸ್ಯೆಗಳು, ಪ್ರಾಕೃತಿಕ ವಿಕೋಪಗಳು, ಆಹಾರದ ಕೊರತೆ, ದೈಹಿಕ ಕಾಯಿಲೆಗಳು ಇವುಗಳ ಕುರಿತಂತೆ ಇಂದಿನ ತಲೆಮಾರಿನ ಜನರಿಗೆ ನೀಡಬೇಕಾದ ತಿಳಿವಳಿಕೆಗಳೇನು? ಹೀಗೆ ಅರಿವು ನೀಡುವ ಕಾರ್ಯಕ್ರಮವಾಗಿ ಆಟಿ ಆಚರಣೆಗೊಳ್ಳಬೇಕಾದುದು ಇಂದಿನ ಅಗತ್ಯವಾಗಿದೆ. ಆಟಿ ತಿಂಗಳ ಒಂದು ಕಾಲಘಟ್ಟದ ಸ್ವರೂಪವನ್ನು ತಿಳಿದುಕೊಂಡು, ಅದಕ್ಕೆ ಹಿರಿಯರು ಪ್ರತಿಕ್ರಿಯಿಸಿದ ಬಗೆಯನ್ನು ನಾವು ಮೊದಲು ಅರಿತುಕೊಳ್ಳಬೇಕು. ಪ್ರಾಕೃತಿಕ ವೈಪರೀತ್ಯಗಳನ್ನು ಹಿರಿಯರು ನಿಭಾಯಿಸಿದ ಕ್ರಮಗಳನ್ನು ಅರಿತುಕೊಂಡು ಇಂದು ಮತ್ತು ಮುಂದಿನ ಕಾಲಘಟ್ಟದಲ್ಲಿ ಪ್ರಕೃತಿಯ ಜತೆ ಸಂತುಲಿತ ಸಂಬಂಧವನ್ನು ಹೊಂದಿರಬೇಕಾದ ಅನಿವಾರ್ಯತೆಯ ಪಾಠವನ್ನು ನಾವು ತಿಳಿದುಕೊಳ್ಳುವ ಆವಶ್ಯಕತೆಯಿದೆ.

ಆಟಿ ತಿಂಗಳ ವಿದ್ಯಮಾನಗಳ ಗ್ರಹಿಕೆಯಲ್ಲಿ ಕೆಲವು ಆಯಾಮಗಳಿವೆ. ಬೇಸಾಯದ ಅವಧಿ ಮುಗಿದ/ಮುಗಿಯುತ್ತಿರುವ ದಿನಗಳು. ಉಣ್ಣಲು, ತಿನ್ನಲು ಬರಗಾಲ ಇತ್ತು. ಹನಿಕಡಿಯದೆ ಧಾರಾಕಾರ ಸುರಿಯುವ ಮಳೆಗೆ ಒದ್ದೆಯಾಗಿ ಕೆಸರುಗದ್ದೆಯಲ್ಲಿ ಉಳುವ, ನೇಜಿ ತೆಗೆಯುವ/ ನೆಡುವ ಕೆಲಸದ ಒತ್ತಡಗಳಿದ್ದವು. ಮಳೆ ಗಾಳಿಯ ಹೊಡೆತಕ್ಕೆ ಚಳಿ, ನೆನೆದು ಒದ್ದೆಯಾದ ಕಾರಣಕ್ಕೆ ಶೀತ, ನೆಗಡಿ, ಜ್ವರ, ಇಡಿಯ ಊರಿಗೆ ಮಾರಿ ಬಡಿದ ಹಾಗೆ ರೋಗರುಜಿನಗಳ ಹಾವಳಿ. ಒಟ್ಟಿನಲ್ಲಿ ಆಟಿ ತಿಂಗಳು ಅಂದರೆ ಹವಾಮಾನದ ವೈಪರೀತ್ಯದ ಕಾಲ. ಇದು ಆಟಿ ತಿಂಗಳ ಕೆಟ್ಟ ಹವಾಮಾನದ ಆಯಾಮ. ಮಲಗಲು ಬೆಚ್ಚನೆಯ ಮನೆಯಿಲ್ಲ, ತಿನ್ನಲು ಆಹಾರವಿಲ್ಲ. ಹೊಟ್ಟೆ ತುಂಬ ತಿನ್ನಲು ಲಭ್ಯವಿದ್ದುದು ಹಲಸಿನ ಕಾಯಿ, ಹಲಸಿನ ಹಣ್ಣು. ಬೈತರಿ(ಬೈಹುಲ್ಲಿನ ಅಕ್ಕಿ) ಇದರ ಅನ್ನ, ಕಡುಬು. ತುಂಡು ಕಜೆ ಅಕ್ಕಿಯ ಗಂಜಿ. ಗೇಣಿ ಕೊಡುವುದನ್ನೇ ಬಾಕಿ ಮಾಡಿದ ರೈತ ಮಳೆಗಾಲಕ್ಕೆ ಅಂತ ಕಾಪಿಡುವುದೆಲ್ಲಿಂದ? ಬಡತನ ಮುಕ್ಕಿ ತಿನ್ನುವ ಹೊತ್ತಿನಲ್ಲಿ ಇರಲೆಂದು ಸಂರಕ್ಷಿಸಿಕೊಂಡು ಬಂದ ಕೆಲವು ಆಹಾರ ಪದಾರ್ಥಗಳಿರುತ್ತಿದ್ದುವು. ಚಾವಡಿಯ ಪಕ್ಕಾಸು, ರೀಪುಗಳಿಗೆ ತೆಂಗಿನಗರಿಯಲ್ಲಿ ಸಿಕ್ಕಿಸಿ ನೇತುಹಾಕಿದ ಸೌತೆಕಾಯಿ, ಹಾಗೂಹೀಗೂ ಒಣಗಿಸಿದ/ಹಸಿ ಹಲಸಿನ ಬೀಜ, ಉಪ್ಪು ನೀರಲ್ಲಿ ನೆನೆ ಹಾಕಿದ ಹಲಸಿನ ಸೋಳೆ, ಕೇನೆ ಕೆಸುವಿನ ಗೆಡ್ಡೆ, ಬಾಳೆಯ ಬೊಂಬೆ, ತಜಂಕಿನ  ಸೊಪ್ಪು,  ತಿಮರೆ ಇವುಗಳ ಪದಾರ್ಥ, ಚಟ್ನಿ ತಯಾರಿಸಿ ಕುಂಬಕ್ಕಿಯನ್ನು ಬೇಯಿಸಿ ಊಟ ಮಾಡುತ್ತಿದ್ದ ಕಾಲ. ಹೀಗೆ ಕುಕ್ಕಿ ತಿನ್ನುವ ಬಡತನ ಆಟಿ ತಿಂಗಳ ಇನ್ನೊಂದು ಆಯಾಮ. ಆಟಿ  ತಿಂಗಳಲ್ಲಿ ಬರುವ  ಒಂದೆರಡು ಬಿಸಿಲಿಗೆ ಮನೆಯ  ವಸ್ತುಗಳನ್ನು ಒಣಗಿಸುವ ಕ್ರಮವಿದೆ. ಮುಖ್ಯವಾಗಿ ಮರ, ಬೇರು, ಬಿಳಲುಗಳ ವಸ್ತುಗಳು, ಒದ್ದೆ ಬಟ್ಟೆ ಬರೆಗಳನ್ನು ಒಣಗಿಸುವ ಕೆಲಸ. ಇದು “ಇಲ್‌É ಪಿದಯಿಪಾಡುನೆ’ ಮನೆ ಹೊರಗೆ ಹಾಕುವ ಕೆಲಸ. ಮನೆಯ ಅಟ್ಟ, ದೆಂಗ ಇತ್ಯಾದಿ ಸ್ಥಳಗಳ ಮಸಿ ಕಸ ತೆಗೆದು ಸ್ವತ್ಛ ಮಾಡುವ ಕೆಲಸ. ಮನೆಯನ್ನು ಸ್ವತ್ಛಗೊಳಿಸುವುದು, ದುರಸ್ತಿ ಮಾಡುವುದು ಆಟಿ ತಿಂಗಳ ಮತ್ತೂಂದು ಮುಖ.

ಆಟಿ ತಿಂಗಳಲ್ಲಿ ನಡೆಸುವ ಮುಖ್ಯ ಆಚರಣೆ “ಆಟಿ ಬಳಸುನೆ’ ಅಂದರೆ ಆಟಿ ಬಡಿಸುವುದು. ಸಂದುಹೋದ ಹಿರಿಯರನ್ನು ಬರಮಾಡಿ ಅವರಿಗೆ ಅಗೆಲು/ ಎಡೆ ಬಡಿಸುತ್ತಾರೆ. ಕಷ್ಟಕಾಲ ಇದ್ದರೂ ಹಿರಿಯರನ್ನು   ಬರಮಾಡಿಕೊಂಡು ಸತ್ಕರಿಸುವ ಮನೋಧರ್ಮವನ್ನು ಇದರಲ್ಲಿ ಕಾಣಬಹುದು. ನಮ್ಮ ಬಡತನ ಇದ್ದದ್ದೇ, ಹೀಗಿದ್ದರೂ ಕುಲೆಗಳಿಗೆ (ಅಗೋಚರ ಲೋಕದಲ್ಲಿ ವಾಸಿಸುವ ಜೀವಾತ್ಮ) ಒಂದು ಒಳ್ಳೆಯ ಊಟ ಹಾಕಿ ಸತ್ಕರಿಸಿ ಉಪಕಾರ ಸ್ಮರಣೆ ಮಾಡಿ ಅವರಿಗೆ ಆಭಾರ ಸಲ್ಲಿಸುವ ಮನೋಭಾವ ಈ ಅಚರಣೆಯಲ್ಲಿದೆ ಅಂತ ಕಾಣುತ್ತದೆ. ತಲೆಮಾರುಗಳ ಸಂಬಂಧವನ್ನು ಪುನರ್‌ ನವೀಕರಿಸುವ ಆಶಯವು ಆಟಿ ಆಚರಣೆಯ ಮಗದೊಂದು ಆಯಾಮ.

ಆಟಿ ಕಳೆಂಜ ಮನೆ ಮನೆಗೆ ಬಂದು ಹಾಡಿ, ಕುಣಿಯುವ ಆಚರಣೆಯನ್ನು ಈಗಲೂ ಅಲ್ಲಲ್ಲಿ ಕಾಣಬಹುದು. ಕಳೆಂಜ, ಮನುಷ್ಯರು, ಜಾನುವಾರುಗಳು, ಭತ್ತದ ಪೈರು, ಫ‌ಲ ನೀಡುವ ಮರಗಳು ಇವುಗಳಿಗೆ  ಬರುವ  ಮಾರಕ ರೋಗಗಳನ್ನು ಊರಾಚೆ/ಕಡಲಾಚೆ  ಓಡಿಸುತ್ತಾನೆ  ಎಂಬ  ನಂಬಿಕೆ ತುಳುವರಲ್ಲಿದೆ. ಕಳೆಂಜನ ವೇಷಭೂಷಣ  ಮತ್ತು ಕುಣಿತದಲ್ಲಿ ಬಡತನದ ಚಿತ್ರಣವಿದೆ. ಆಹಾರ ಪದಾರ್ಥಗಳನ್ನು ಹಂಚಿ ಬದುಕುವ ಆಶಯಗಳು ಕಳೆಂಜನ ಹಾಡು, ಕುಣಿತದಲ್ಲಿ ಸ್ಪಷ್ಟವಾಗಿವೆ. ಮಾಂತ್ರಿಕ ಕಳೆಂಜನ ಕುಣಿತದಲ್ಲಿ ಆಟಿ ತಿಂಗಳ ಸ್ವರೂಪವನ್ನು ಸಾದರಪಡಿಸುವ ಆಶಯವಿದೆ. ಇದು ಆಟಿ ಆಚರಣೆಯ ಸಾಂಸ್ಕೃತಿಕ ಆಯಾಮವಾಗಿದೆ.

ಆಟಿ ತಿಂಗಳಲ್ಲಿ ಔಷಧ ರೂಪದ ಆಹಾರ ಪದಾರ್ಥಗಳನ್ನು ಬಳಸುವ ಸಂಪ್ರದಾಯವಿತ್ತು. ಈಗಲೂ ಈ ಪದ್ಧತಿ ಚಾಲ್ತಿಯಲ್ಲಿದೆ. ಅದರಲ್ಲಿ ಮುಖ್ಯವಾದುದು ಆಟಿ ಅಮಾವಾಸ್ಯೆಯ ದಿನ ಹಾಲೆ ಮರದ ಹಾಲನ್ನು ತುಳುನಾಡಿನಾದ್ಯಂತ ಜನರು ಸೇವಿಸುತ್ತಾರೆ. ಅಂದು ಬೆಳಗ್ಗೆ ಹಾಲೆ ಮರದ ಹಾಲು ಕುಡಿದರೆ ಅಥವಾ ಗುಳಿಗೆ ಮಾಡಿ ಸೇವಿಸಿದರೆ ಮಧ್ಯಾಹ್ನ ಮೆಂತೆಯ ಗಂಜಿ ಮಾಡಿ ತಿನ್ನುವ ಕ್ರಮ ಇತ್ತು. ದೇಹದ ಉಷ್ಣ ಮತ್ತು ತಂಪಿನ ಸಮತೋಲನ ಕಾಪಾಡಲು ಹೀಗೆ ಮಾಡುತ್ತಿದ್ದರು ಎಂಬುದು ಗ್ರಾಮೀಣರ ನಂಬಿಕೆ. ಕೇಪುಳ, ತರೊಳಿ ಮೊದಲಾದ ಗಿಡಗಳ ಚಿಗುರನ್ನು ಕಿತ್ತು ತಂದು ಕಷಾಯ ಮಾಡಿ ಆಟಿ ತಿಂಗಳಲ್ಲಿ ಕುಡಿಯುವ ಪರಿಪಾಠ ಇತ್ತು. ಇದನ್ನು ನೋಡಿದರೆ ಕಾಲಮಾನಕ್ಕೆ ಬರುವ ರೋಗಗಳನ್ನು ತಡೆಯಲು ಮತ್ತು ಕಾಯಿಲೆ ಬಂದರೆ ಉಪಶಮನಗೊಳಿಸಲು ಸೂಕ್ತ ಔಷಧಗಳನ್ನು ತಯಾರಿಸಿ ಸೇವಿಸುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಆದರೆ ಇವತ್ತು ಆಟಿ ತಿಂಗಳ ಹೆಸರಿನಲ್ಲಿ ಏನು ಆಚರಣೆಗಳನ್ನು ಮಾಡುತ್ತಿದ್ದೇವೆ? ಸಂಕಷ್ಟಗಳೇ ತುಂಬಿದ್ದ ಕಾಲಘಟ್ಟದ ಬದುಕನ್ನು ವೈಭವೀಕರಿಸಿ ಕಟ್ಟಿಕೊಡುತ್ತಿದ್ದೇವೆ. ಆಟಿಯನ್ನು ಮುಂದಿಟ್ಟುಕೊಂಡು ನಾವು  ಎಳೆಯರಿಗೆ ತಿಳಿಸಬಹುದಾದ ಕೆಲವು ಆದರ್ಶಗಳಿವೆ. ಹಿರಿಯರ ಬದುಕಿನಲ್ಲಿ ಕಷ್ಟಗಳಿದ್ದುವು, ಬಡತನ ಇತ್ತು ನಿಜ, ಹಾಗಿದ್ದೂ ಅವರು ಹೋರಾಟದ ಬದುಕನ್ನು ನಡೆಸಿದ್ದರು. ಪ್ರಕೃತಿಯ ಮೇಲೆ ದಬ್ಟಾಳಿಕೆ ಮಾಡದೆಯೂ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುತ್ತಿದ್ದರು. ಹಾಗಿದ್ದೂ ಪ್ರಕೃತಿಯನ್ನು ದೇವರಂತೆ  ಪೂಜಿಸುತ್ತಿದ್ದರು. ನಾಗನಿಗೆ ಬದುಕಲು ಮರಮಟ್ಟುಗಳನ್ನು ಕಡಿಯದೆ ಬನಗಳನ್ನು ನಿರ್ಮಿಸುತ್ತಿದ್ದರು. ವಿಷದ ನಾಗನಿಗೂ ಹಾಲೆರೆದು ಕೈಮುಗಿಯುತ್ತಿದ್ದರು. ನಾವು ಗುಡ್ಡ-ಬೆಟ್ಟಗಳನ್ನು ಅಗೆದು ಬಗೆದು ಕಾಡು-ಗುಡ್ಡಗಳ ಕುಸಿತಕ್ಕೆ ಕಾರಣರಾಗುತ್ತಿದ್ದೇವೆ. ತೋಡುಗಳು ಮಾಯವಾಗಿವೆ. ನದಿಗಳು ಬತ್ತುತ್ತಿವೆ. ಬಯಲು ಗದ್ದೆಗಳು ಕಣ್ಮರೆಯಾಗುತ್ತಿವೆ. ನಿಭಾಯಿಸಲಾಗದ ಮಟ್ಟದಲ್ಲಿ ನಗರಗಳನ್ನು ಕಟ್ಟುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಎಂತಹ ದುರಂತಗಳಿಗೆ ನಾವು ಬಲಿಯಾಗಬೇಕೋ ಗೊತ್ತಿಲ್ಲ. ನಿಸರ್ಗವನ್ನು ಒಪ್ಪಿ ಬದುಕಿದ ನಮ್ಮ ಹಿರಿಯರೇ ಸಾಕಷ್ಟು ಪಾಡು ಪಟ್ಟಿ¨ªಾರೆ. ಹಾಗಾದರೆ ನಮ್ಮ ಬದುಕಿನ ದಾರಿ ಯಾವುದಿರಬೇಕು? ಹೇಗಿರಬೇಕು? ಎಂಬುದನ್ನು ಇಂದಿನ ಯುವ ತಲೆಮಾರಿಗೆ ತಿಳಿಹೇಳುವುದಕ್ಕೆ ಆಟಿ ತಿಂಗಳ ಆಚರಣೆಗಳು ವೇದಿಕೆಯಾಗಬೇಕು, ಸಮಾರಂಭಗಳು ಆಯೋಜನೆಗೊಳ್ಳಬೇಕು. “ಆಟಿ ಆಡ ಆಡ, ಸೋಣ ಓಡ ಓಡ’ ಎಂಬ ಗಾದೆಯ ಮಾತಿದೆ. ಕಷ್ಟದ ಆಟಿ ತಿಂಗಳ ನಡೆ ಬಹಳ ನಿಧಾನ. ಯಾಕಪ್ಪಾ ಆಟಿ ತಿಂಗಳ ದಿನಗಳೇ ಕಳೆಯುವುದಿಲ್ಲ. ಕಷ್ಟದ ಕಾರಣದಿಂದಾಗಿ ಸಮಯವೇ ಹೋಗುವುದಿಲ್ಲ ಎಂದು ಚಡಪಡಿಸುತ್ತಿದ್ದರು. ಯಾವಾಗ ಒಮ್ಮೆ ಆಟಿ ತಿಂಗಳು ಯಾವಾಗ ಮುಗಿಯುತ್ತದೋ ಎಂದು ಕಾಯವಂತಹ ದುಃಸ್ಥಿತಿ ಹಿರಿಯರದಾಗಿತ್ತು. ಸೋಣ ತಿಂಗಳು ಬಂದರೆ ಸಾಲು ಸಾಲು ಹಬ್ಬಗಳು. ದಿನಗಳು ಹೋದದ್ದೇ ಗೊತ್ತಾಗುವುದಿಲ್ಲ. ಸದ್ಯ ನಮ್ಮ ಆಟಿ ತಿಂಗಳ ಸಂಭ್ರಮಾಚರಣೆಗಳನ್ನು ನೋಡಿ ನಮ್ಮ ಎಳೆಯರು ಹೇಳಿಯಾರು “ಆಟಿ ಓಡ ಓಡ, ಸೋಣ ನೋಡ ನೋಡ’!

ಕೆ. ಚಿನ್ನಪ್ಪ ಗೌಡ, ಮಂಗಳೂರು

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.