Pyaraolympics: ಡೋಪಿಂಗ್ ನಿಯಮ ಉಲ್ಲಂಘನೆ; ಪ್ಯಾರಾ ಶಟ್ಲರ್ ಭಗತ್ ಅಮಾನತು
ಪ್ಯಾರಾಲಿಂಪಿಕ್ಸ್ ಸಿಂಗಲ್ಸ್ ಚಾಂಪಿಯನ್ , ಪ್ಯಾರಿಸ್ ಕೂಟದಿಂದ ಹೊರಕ್ಕೆ
Team Udayavani, Aug 14, 2024, 6:50 AM IST
ಹೊಸದಿಲ್ಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪ್ಯಾರಾ ಶಟ್ಲರ್ ಪ್ರಮೋದ್ ಭಗತ್ ಬಿಡಬ್ಲ್ಯುಎಫ್ ಡೋಪಿಂಗ್ ನಿಯಮವನ್ನು ಉಲ್ಲಂ ಸಿದ ಹಿನ್ನೆಲೆಯಲ್ಲಿ 18 ತಿಂಗಳು ಅಮಾನತುಗೊಂಡಿದ್ದಾರೆ. ಇದರಿಂದ ಅವರು ಮುಂಬರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದಾರೆ. ಭಾರತಕ್ಕೆ ದೊಡ್ಡ ಪದಕವೊಂದು ಕೈತಪ್ಪಿದೆ.
ಪ್ರಮೋದ್ ಭಗತ್ ಕಳೆದ 12 ತಿಂಗಳ ಅವಧಿಯಲ್ಲಿ 3 ಬಾರಿ ತಮ್ಮ ಇರುವಿಕೆಯ ಬಗ್ಗೆ ಮಾಹಿತಿ ನೀಡಲು ವಿಫಲರಾದ ಕಾರಣ ಬಿಡಬ್ಲ್ಯುಎಫ್ ಡೋಪಿಂಗ್ ನಿಯಮ ವನ್ನು ಉಲ್ಲಂ ಸಿ ದಂತಾಗಿದೆ. ಹೀಗಾಗಿ ಅವರು ತಪ್ಪಿತಸ್ಥರಾಗು ತ್ತಾರೆಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (ಸಿಎಎಸ್) ಮಾರ್ಚ್ ಒಂದರಂದು ಹೇಳಿತ್ತು. ಇದರ ವಿರುದ್ಧ ಭಗತ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಸಿಎಎಸ್ ತನ್ನ ಆದೇಶವನ್ನು ಎತ್ತಿಹಿಡಿದು ಅಮಾನತು ಕ್ರಮವನ್ನು ದೃಢಪಡಿಸಿದೆ.
ಘೋರ ಶಿಕ್ಷೆ: ಪ್ರಮೋದ್ ವಿಷಾದ
“ನನ್ನ ಪಾಲಿಗೆ ಇದೊಂದು ಘೋರ ಶಿಕ್ಷೆ. ಆದರೆ ನಾನು ವಾಡಾ ತೀರ್ಪನ್ನು ಗೌರವಿಸು ತ್ತೇನೆ. ಆದರೆ ತಾಂತ್ರಿಕ ಕಾರಣಗಳಿಗೆ ಈ ರೀತಿ ಅಮಾನತು ಶಿಕ್ಷೆ ವಿಧಿಸುವುದು ಸರಿಯಾದ ಕ್ರಮವಲ್ಲ’ ಎಂಬುದಾಗಿ ಭಗತ್ ಹೇಳಿದ್ದಾರೆ.
“ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದು ಅಮಾನತು ಗೊಂಡರೆ ಅದು ಸಹಜ. ಆದರೆ ಎರಡು ಸಲ ಪರೀಕ್ಷೆಗೆ ಕರೆ ಬಂದಾಗ ನಾನು ಬೇರೊಂದು ಸ್ಥಳದಲ್ಲಿದ್ದೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಮತ್ತು ಸಾಕ್ಷ್ಯಗಳನ್ನು ನಾನು ಮೂರನೇ ಪರೀಕ್ಷೆ ವೇಳೆ ಸಲ್ಲಿಸಿದ್ದೆ. ಆದರೆ ಇದನ್ನು ತಿರಸ್ಕರಿಸಲಾಯಿತು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಸಿದ್ಧತೆಯಲ್ಲಿದ್ದ ನನ್ನ ಪಾಲಿಗೆ ಇದೊಂದು ಭಾರೀ ನಷ್ಟ. ಅಲ್ಲದೇ ನಾನೋರ್ವ ಪದಕ ವಿಜೇತ ಕ್ರೀಡಾಪಟು. ನಿಜಕ್ಕೂ ಹೃದಯ ಬಿರಿದಿದೆ’ ಎಂದು ಪ್ರಮೋದ್ ಭಗತ್ ಅತ್ಯಂತ ನೋವಿನಿಂದ ಹೇಳಿಕೊಂಡಿದ್ದಾರೆ.
2025ರ ಸೆ. ಒಂದರ ತನಕ ಪ್ರಮೋದ್ ಭಗತ್ ಅವರ ಅಮಾನತು ಜಾರಿಯಲ್ಲಿರುತ್ತದೆ. 36 ವರ್ಷದ ಪ್ರಮೋದ್ ಭಗತ್ ಬಿಹಾರದವರಾಗಿದ್ದು, ಕಳೆದ ಥಾಯ್ಲೆಂಡ್ ಟೂರ್ನಿಯಲ್ಲಿ 5ನೇ ಸಲ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿ ಚೀನದ ಲೆಜೆಂಡ್ರಿ ಶಟ್ಲರ್ ಲಿನ್ ಡಾನ್ ಅವರ ದಾಖಲೆಯನ್ನು ಸರಿದೂಗಿಸಿದ್ದರು. ಪ್ರಮೋದ್ ಭಗತ್ 5 ವರ್ಷದವರಿದ್ದಾಗಿ ಎಡಗಾಲಿನ ಪೋಲಿಯೋಗೆ ತುತ್ತಾಗಿದ್ದರು. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಜಾಗತಿಕ ಕ್ರೀಡಾಕೂಟಗಳಲ್ಲಿ ಒಟ್ಟು 11 ಚಿನ್ನ, 3 ಬೆಳ್ಳಿ ಹಾಗೂ 9 ಕಂಚಿನ ಪದಕ ಗೆದ್ದ ಸಾಧನೆ ಇವರದ್ದಾಗಿದೆ.
ಭಾರೀ ನಷ್ಟ: ಕೋಚ್ ಖನ್ನಾ
“ಇದು ಅತ್ಯಂತ ದುಃಖದ ಹಾಗೂ ದುರದೃಷ್ಟಕರ ಸಂಗತಿ. ಪ್ರಮೋದ್ ಭಗತ್ ಮುಂದಿನ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಖಂಡಿತವಾಗಿಯೂ ಪದಕವೊಂದನ್ನು ಗೆದ್ದು ತರುತ್ತಿದ್ದರು. ಆದರೆ ಅವರೋರ್ವ ಹೋರಾಟಗಾರ. ಅತ್ಯಂತ ಬಲಿಷ್ಠರಾಗಿ ಅವರು ಮರಳಲಿದ್ದಾರೆ’ ಎಂಬುದಾಗಿ ಪ್ಯಾರಾ ಬ್ಯಾಡ್ಮಿಂಟನ್ ಕೋಚ್ ಗೌರವ್ ಖನ್ನಾ ಹೇಳಿದ್ದಾರೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಆ. 28ರಿಂದ ಸೆ. 8ರ ತನಕ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.