Eshwara Khandre; ಅರಣ್ಯ ಭೂಮಿಯನ್ನು ಮಾರಾಟ ಮಾಡಿದ್ದು ನಾವಲ್ಲ; ಎಚ್‌ಎಂಟಿ
ಎಚ್‌ಡಿಕೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ತಿರುಗೇಟು
Team Udayavani, Aug 14, 2024, 6:33 AM IST
ಬೆಂಗಳೂರು: ಎಚ್‌ಎಂಟಿ ಭೂಮಿಯನ್ನು ಮರಳಿ ವಶಕ್ಕೆ ಪಡೆದು ವೃಕ್ಷೋದ್ಯಾನ ನಿರ್ಮಿಸುವ ಉದ್ದೇಶ ಇದೆಯೇ ವಿನಾ ಖಾಸಗಿಯವರಿಗೆ ಮಾರಾಟ ಮಾಡುವ ದುರುದ್ದೇಶವಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, ಅರಣ್ಯ ಭೂಮಿ ಮಾರಾಟ ಮಾಡಿರುವುದು ಈಗ ಕುಮಾರಸ್ವಾಮಿಯವರ ಇಲಾಖಾ ವ್ಯಾಪ್ತಿಯಲ್ಲಿರುವ ಎಚ್‌ಎಂಟಿಯೇ ವಿನಾ ರಾಜ್ಯ ಅರಣ್ಯ ಇಲಾಖೆ ಅಲ್ಲ. ಅರಣ್ಯ ಭೂಮಿಯನ್ನು ಮಾರಾಟ, ದಾನ ಮಾಡಲು ಯಾರಿಗೂ ಅವಕಾಶವಿಲ್ಲ ಎಂದರು.
ಮಹಾರಾಜರ ಆಳ್ವಿಕೆ ಕಾಲದಲ್ಲಿ ಅಂದರೆ, 1896ರ ಜೂ. 11ರಂದೇ ಆ ಜಾಗವು ಅಧಿಸೂಚಿತ ಅರಣ್ಯ ಎಂದು ರಾಜ್ಯಪತ್ರ ಹೊರಡಿಸ ಲಾಗಿದೆ. ಅರಣ್ಯೇತರ ಉದ್ದೇಶಕ್ಕೆ ಭೂಪರಿವರ್ತನೆ ಮಾಡ ದೇ ದಾನಪತ್ರ ಮಾಡಿ ಕೊಟ್ಟಿರುವುದು ಅಕ್ರಮ. ಒಮ್ಮೆ ಅರಣ್ಯ ಎಂದು ಘೋಷಣೆಯಾದ ಮೇಲೆ ಅದನ್ನು ಪರಭಾರೆ ಅಥವಾ ದಾನ ಕೊಡಲು ಕಾನೂನಿ ನಲ್ಲಿ ಅವಕಾಶವಿಲ್ಲ ಎಂದರು.
ಎಚ್‌ಎಂಟಿಯೇ ತನ್ನ ಬಳಿಯಿದ್ದ 313 ಕೋಟಿ ರೂ.ಗೂ ಅಧಿಕ ಮೌಲ್ಯದ 165 ಎಕ್ರೆ ಜಮೀನನ್ನು ಡಾಲರ್ಸ್ ಕನ್‌ಸ್ಟ್ರಕ್ಷನ್ ಆ್ಯಂಡ್ ಎಂಜಿನಿಯರ್ಸ್, ಯು.ಎಸ್. ಸ್ಟೀಲ್ ಕಂಪೆನಿ, ಸಿಲ್ವರ್ ಲೈನ್ ಎಸ್ಟೇಟ್ಸ್, ಮನೆ ಕನ್‌ಸ್ಟ್ರಕ್ಷನ್ಸ್, ಎಂಎಂಆರ್ ಕನ್‌ಸ್ಟ್ರಕ್ಷನ್ಸ್, ಬ್ರಿಗೇಡ್ ಎಂಟರ್‌ಪ್ರೈಸಸ್, ಬಾಗಮನೆ ಡೆವಲಪರ್ಗೆ ಮಾರಾಟ ಮಾಡಿದೆ ಎಂದರು.
ಖಂಡ್ರೆ ವಾದವೇನು?
-ಅರಣ್ಯ ಭೂಮಿ ಮಾರಾಟ ಮಾಡಿರುವುದು ಎಚ್‌ಎಂಟಿ ಸಂಸ್ಥೆಯೇ ವಿನಾ ಅರಣ್ಯ ಇಲಾಖೆ ಅಲ್ಲ. ಆ ಜಾಗವನ್ನು ಮರುವಶಕ್ಕೆ ಪಡೆದು ಶುದ್ಧ ಉಸಿರಾಟಕ್ಕೊಂದು ತಾಣ ಮಾಡುತ್ತೇವೆ.
– 2020ರಲ್ಲಿ ಸಚಿವ ಸಂಪುಟ ಸಭೆಯ ಗಮನಕ್ಕೆ ತಾರದೆ ಸುಪ್ರೀಂ ಕೋರ್ಟ್‌ಗೆ ಮ ಧ್ಯಾಂತರ ಮೇಲ್ಮನವಿ ಹಾಕಲಾಗಿತ್ತು. ಅದನ್ನು ಹಿಂಪಡೆಯಲು ನಾವು ತಯಾರಿ ಮಾಡಿಕೊಂಡಿದ್ದೇವೆ.
– ನನ್ನ ಹಾಗೂ ಕುಮಾರಸ್ವಾಮಿ ನಡುವೆ ಸೌಹಾರ್ದ ಬಾಂಧವ್ಯ ಇದೆ. ಎಂದಿಗೂ ದ್ವೇಷದ ರಾಜಕೀಯ ಮಾಡುವವನಲ್ಲ. ಯಾವುದೇ ಪೂರ್ವಾಗ್ರಹದಿಂದ ಎಚ್‌ಎಂಟಿ ವಿಷಯ ಪ್ರಸ್ತಾವಿಸಿಲ್ಲ. ಜು. 11ರಂದು ಪರಿಸರ ಹೋರಾಟಗಾರರೊಬ್ಬರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಕಡತ ಪರಿಶೀಲಿಸಿದಾಗ ಕಂಡುಬಂದ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.