New York ಇಂಡಿಯಾ ಡೇ ಪರೇಡ್‌ನಲ್ಲಿ ರಾಮ ಮಂದಿರ ಟ್ಯಾಬ್ಲೋ: ದ್ವೇಷಕ್ಕೆ ಗುರಿ
Team Udayavani, Aug 14, 2024, 11:08 AM IST
ನ್ಯೂಯಾರ್ಕ್: ಅಮೆರಿಕದ ನಗರದಲ್ಲಿ ಆಗಸ್ಟ್ 18 ರಂದು ನಡೆಯಲಿರುವ 42ನೇ ವಾರ್ಷಿಕ ಭಾರತೀಯ ದಿನದ ಪರೇಡ್ ನಲ್ಲಿ ರಾಮಮಂದಿರದ ಟ್ಯಾಬ್ಲೋ ಸೇರಿಸಿರುವುದು ದ್ವೇಷ ತುಂಬಿದ ಮತಾಂಧತೆಗೆ ಗುರಿಯಾಗಿದೆ ಎಂದು ಮೆರವಣಿಗೆಯ ಆಯೋಜಕರು ಹೇಳಿದ್ದಾರೆ.
“ನಮ್ಮ ಸಮರ್ಪಿತ ಸ್ವಯಂಸೇವಕರು ದಣಿವರಿಯಿಲ್ಲದೆ ಶ್ರಮಿಸಿ ತಯಾರು ಮಾಡಿದ ಶಾಂತಿಯುತ ಸಮುದಾಯ ಆಚರಣೆಯನ್ನು ಆಯೋಜಿಸಲು ನಾವು ಭಾರೀ ಪರಿಶೀಲನೆಗೆ ಒಳಗಾಗಿದ್ದೇವೆ’ ಎಂದು ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ NY-NJ-CT-NE ಹೇಳಿಕೆ ನೀಡಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಡಿದ ಈ ದುರುದ್ದೇಶಪೂರಿತ ಮತ್ತು ದ್ವೇಷ ತುಂಬಿದ ವಾತಾವರಣ ಕಾರ್ಯಕ್ರಮದ ಜೀವಾಳವಾಗಿರುವ ಪ್ರಾಯೋಜಕತ್ವಗಳ ನಷ್ಟಕ್ಕೆ ಕಾರಣವಾಗಿದೆ ಮತ್ತು ಭಯ ಹುಟ್ಟಿಸಿದೆ. ಆನ್‌ಲೈನ್‌ನಲ್ಲಿ ಪ್ರಸಾರವಾಗುವ ದ್ವೇಷಪೂರಿತ ಸಂದೇಶಗಳು ಕಾನೂನು-ಪಾಲಿಸುವವರು ಸಂಭಾವ್ಯ ಅಶಿಸ್ತಿನ ನಡವಳಿಕೆಯ ಬಗ್ಗೆ ಚಿಂತಿಸುವಂತೆ ಮಾಡುತ್ತದೆ ಎಂದು ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ಹೇಳಿದೆ.
ಲಕ್ಷಾಂತರ ಹಿಂದೂಗಳನ್ನು ಅವಹೇಳನಕಾರಿ ಹೆಸರಿನಿಂದ ಅವಮಾನಿಸಲಾಗಿದೆ ಮತ್ತು ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆ ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್ (IAMC) ನಂತಹ ಸಂಘಟನೆಗಳು ರಾಮಮಂದಿರದ ಟ್ಯಾಬ್ಲೋ ಅಳವಡಿಸುವುದನ್ನು ಖಂಡಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.