Padubidri: ಕೈಗಾರಿಕಾ ಕೇಂದ್ರವಾಗಿ ಬೆಳೆಯುತ್ತಿದೆ ಪಡುಬಿದ್ರಿ

ಸಾವಿರಾರು ಉದ್ಯೋಗ ಸೃಷ್ಟಿ  ಸಾಧ್ಯತೆ | ಸ್ಥಳೀಯರಿಗೆ ಭೂಸ್ವಾಧೀನ ಭೀತಿ  |  ಸ್ಥಳೀಯಾಡಳಿತಕ್ಕೆ ಮೂಲ ಸೌಕರ್ಯ ಹೆಚ್ಚಿಸುವ ಒತ್ತಡ

Team Udayavani, Aug 14, 2024, 2:35 PM IST

Padubidri is growing as an industrial hub

ಪಡುಬಿದ್ರಿ:  ನಂದಿಕೂರು, ಪಡುಬಿದ್ರಿ, ಎಲ್ಲೂರು, ಸಾಂತೂರು, ಬೆಳಪು ಪ್ರದೇಶಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು ಕೈಗಾರಿಕೆಗಳು ಸ್ಥಾಪನೆಯಾಗುವ ಸಾಧ್ಯತೆಗಳು ಕಂಡುಬಂದಿವೆ. ಈ ಮೂಲಕ ಪಡುಬಿದ್ರಿ ಪರಿಸರ ಔದ್ಯೋಗಿಕ ಮತ್ತು ಕೈಗಾರಿಕಾ ಕೇಂದ್ರವಾಗಿ ಮಾರ್ಪಡಲಿದೆ. ಹೊಸ ಯೋಜನೆಗಳಿಂದ  4,000ದಷ್ಟು ಹೊಸ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದರ ನಡುವೆಯೇ ಜನರಿಗೆ ಭೂಸ್ವಾಧೀನದ ಭೂತವೂ ಕಾಡುತ್ತಿದೆ, ಜತೆಗೆ  ಸ್ಥಳೀಯಾಡಳಿತಗಳಿಗೆ ಮೂಲ ಸೌಕರ್ಯ ಒದಗಿಸುವ ಅನಿವಾರ್ಯತೆಯೂ ಹೆಚ್ಚಾಗಿದೆ.

ಪಡುಬಿದ್ರಿಯ ಕಾರ್ಕಳ ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಈ ಜಾಗದಲ್ಲಿ ಮುಂದಿನ 2-3 ವರ್ಷಗಳಲ್ಲಿ ಸಹಸ್ರಾರು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ. ಇಲ್ಲೇ ಟೋಲ್‌ಗೇಟ್‌ ಕೂಡಾ ನಿರ್ಮಾಣವಾಗುವ ನಿಖರ ಸುದ್ದಿಯೂ ಹರಿದಾಡಿದೆ.

ಪಡುಬಿದ್ರಿ, ಪಲಿಮಾರು ಗ್ರಾ.ಪಂ. ವ್ಯಾಪ್ತಿಯ ಸುಮಾರು 642 ಎಕ್ರೆ ಜಾಗದಲ್ಲಿ 2007ರಲ್ಲಿ ವಿಶೇಷ ಆರ್ಥಿಕ ವಲಯ (ಎಸ್‌ಇಝೆಡ್‌) ಸ್ಥಾಪನೆಯಾಗಿತ್ತು. ಇದರಲ್ಲಿ ಸುಜ್ಲಾನ್‌ ಕಂಪನಿಯು ಗಾಳಿ ಯಂತದ ಬ್ಲೇಡ್‌ ಮತ್ತು ಟರ್ಬೈನ್‌ ಉತ್ಪಾದನಾ ಘಟಕವನ್ನು ಸ್ಥಾಪಿಸಿತ್ತು. ಆರಂಭದಲ್ಲಿ ಸುಮಾರು 3000 – 4000 ಯುವಕರಿಗೆ ಉದ್ಯೋಗ ಸೃಷ್ಟಿಯಾಗುವ ಆಶಯವಿದ್ದರೂ ಅಂತಿಮವಾಗಿ 1000 – 1500ಕ್ಕೆ ಇಳಿಯಿತು. ಸುಜ್ಲಾನ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯು ಅಸ್ಪಿನ್‌ ಇನ್‌ಫ್ರಾ ಪಡುಬಿದ್ರಿ(ಪ್ರೈ) ಲಿಮಿಟೆಡ್‌ ಎಂದು ಸದ್ಯ 242.5ಎಕ್ರೆ ಭೂಮಿಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುಮತಿಯೊಂದಿಗಿನ ಎಸ್‌ಇಝೆಡ್‌ ಆಗಿದೆ. ಉಳಿದ ಭೂಮಿಗಳು ಸರಕಾರಗಳ ಅನುಮತಿಯೊಂದಿಗೆ ನಾನ್‌ ಎಸ್‌ಇಝಡ್‌ ಆಗಿ ಪರಿವರ್ತನೆಯಾಗಿವೆ.

ಮೂಲ ಸೌಕರ್ಯಗಳು ಬೇಕು

ಜ ಹೆದ್ದಾರಿ ಪಕ್ಕದಲ್ಲೇ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್‌ ಗೊತ್ತುಗುರಿ ಇಲ್ಲದಂತೆ ಸಾಗಿದೆ. ಸರಿಯಾದ ಪಾರ್ಕಿಂಗ್‌ ಬೇಕು.

ಜ  ಪಾರ್ಕಿಂಗ್‌ ಸಹಿತ ಉತ್ತಮ ಜೀನಸಿ ಮಾಲುಗಳು, ಸೊಪ್ಪುಗಳು, ತರಕಾರಿಗಳು ಏಕಗವಾಕ್ಷಿ ಯೋಜನೆಯಡಿ ಸಿಗುವಂತೆ ಆಗಬೇಕಾಗಿದೆ.

ಜ. ಉತ್ತಮ ರಸ್ತೆ ಸಂಪರ್ಕ, ಕೈಗಾರಿಕಾ ಪಾರ್ಕ್‌ಗೆ ಸಮೀಪದಲ್ಲೇ ವಾಸ್ತವ್ಯದ ತಾಣಗಳ ಬೇಡಿಕೆ ಇದೆ.

ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿ

ಎಲ್ಲೂರು ಮತ್ತು ಸಾಂತೂರು ಗ್ರಾಮಗಳಲ್ಲಿ ಇದೀಗ ಯೋಜನಾ ಪ್ರಸ್ತಾವವು ಸ್ಥಗಿತಗೊಂಡಿರುವ ಅದಾನಿ ಯುಪಿಸಿಎಲ್‌ಗಾಗಿ ಕೆಐಎಡಿಬಿಯು  ಸುಮಾರು 600 ಎಕ್ರೆಗಳಷ್ಟು ಭೂಮಿಯಲ್ಲಿ  ಭೂಸ್ವಾಧೀನತೆಯ ಹಂತದಲ್ಲಿದೆ. ಇಲ್ಲಿ ಕೆಐಎಡಿಬಿ ಮೂಲಕ ಯಾವುದಾರೂ ಕೈಗಾರಿಕಾ ಸ್ಥಾವರ ಅಥವಾ ಸಣ್ಣ ಕೈಗಾರಿಕಾಗಳ ಪಾರ್ಕ್‌ ಬರಬಹುದೆಂಬ ನಿರೀಕ್ಷೆಯಿದೆ. ಪಲಿಮಾರು ಸಮೀಪದ ಬಳ್ಕುಂಜೆ, ಕೊಲ್ಲೂರು ಭಾಗಗಳಲ್ಲೂ ಸುಮಾರು 900ಎಕ್ರೆ ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಕೆ. ರಾಜು ತಿಳಿಸಿದ್ದಾರೆ.

ನಾನ್‌ ಎಸ್‌ಇಝಡ್‌ ವಲಯದ ಕಂಪೆ‌ನಿ, ಉದ್ಯೋಗ

ಪ್ರಜ್‌ ಜೆನೆಕ್ಸ್‌ ಎಂಬ ಕಂಪನಿಯ ಸ್ಥಾವರ ಸ್ಥಾಪನೆ ನಡೆಯುತ್ತಿದೆ. 300 – 400 ಕಾರ್ಮಿಕರು ಕಾಮಗಾರಿ ನಡೆಸುತ್ತಿದ್ದಾರೆ. 50ರಷ್ಟು ಕಂಪೆನಿ ಮ್ಯಾನೇಜರ್, ಎಂಜಿನಿಯರ್‌ಗಳು, ತಾಂತ್ರಿಕ ಪರಿಣಿತರು ನಿಯೋಜಿತಗೊಂಡಿದ್ದಾರೆ. ಪೂರ್ಣಗೊಂಡಾಗ ಇಲ್ಲಿನ ಉದ್ಯೋಗಿಗಳ ಸಂಖ್ಯೆ  2000 ಆಗಬಹುದು ಎಂದು ಅಂದಾಜಿಸಲಾಗಿದೆ. ಪ್ರಜ್‌ ಜೆನೆಕ್ಸ್‌ ಕಂಪೆನಿಯು ಭಾರೀ ಯಂತ್ರೋಪಕರಣಗಳ ಉತ್ಪಾದನಾ ಘಟಕವಾಗಿದ್ದು, ರಫ್ತನ್ನೂ ನಿರ್ವಹಿಸಲಿದೆ. ಪ್ರಥಮ ಹಂತದಲ್ಲಿ ಸುಮಾರು 450ಕೋಟಿ ರೂ. ಗಳ ಹೂಡಿಕೆ ಆಗಿದ್ದು,  2ನೇ ಹಂತದಲ್ಲಿ ಇನ್ನೂ 450 ಕೋಟಿ ರೂ. ಹೂಡಿಕೆ ನಿರೀಕ್ಷೆ ಇದೆ.

ತ್ರಿಶೂಲ್‌ ಇನ್‌ಫ್ರಾಟೆಕ್‌ ಜಾಗದಲ್ಲಿ ಆರಂಭವಾಗಿರುವ ಜೈ ಹಿಂದ್‌ ಸ್ಟೀಲ್‌ ಟ್ಯೂಬ್‌ ತಯಾರಿಕೆ ಕಂಪನಿಯು ಈಗಾಗಲೇ ಸ್ಟೀಲ್‌ ಟ್ಯೂಬ್‌, ಪೈಪ್‌ ತಯಾರಿಕೆ ಯನ್ನು ಆರಂಭಿಸಿದೆ. 250 ಮಂದಿಗೆ ಉದ್ಯೋಗಾವಕಾಶಗಳ ನಿರೀಕ್ಷೆ ಇದೆ.

ನ್ಯಾಚುರಲ್‌ ಫಿಶ್‌ ಪೌಡರ್‌ ಘಟಕದಲ್ಲಿ 100 ಮಂದಿಗೆ ಉದ್ಯೋಗ ಅವಕಾಶಗಳಿವೆ.

ತ್ರಿಶೂಲ್‌ ಇನ್‌ಫ್ರಾಟೆಕ್‌ ಕಂಪೆನಿಯು  ಸದ್ಯವೇ ಇಂಡಸ್ಟ್ರಿಯಲ್‌ ಪಾರ್ಕ್‌ ಹೊಂದಲಿದ್ದು 1000ದಷ್ಟು ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ.

ನಂದಿಕೂರಿನಲ್ಲಿ ಎಂಕೆ ಗ್ರೂಪ್‌ನ ಎಂ11 ಇಂಡಸ್ಟ್ರೀಸ್‌ ಪ್ರೈ. ಲಿ. ಕಂಪೆನಿಯು  100 ಎಕ್ರೆ ನಾನ್‌ ಎಸ್‌ಇಝಡ್‌ ಜಾಗಕ್ಕೆ ಪ್ರವೇಶ ಮಾಡಿದೆ. ಬಯೋ ಡೀಸೆಲ್‌, ಪಾಮ್‌ ಆಯಿಲ್‌ ಕಂಪೆನಿ, ಸನ್‌ ಫ್ಲವರ್‌ ಆಯಿಲ್‌ ಘಟಕಗಳೂ ಆರಂಭವಾಗಲಿದ್ದು  300ರಿಂದ 500 ಉದ್ಯೋಗ ಸೃಷ್ಟಿಯ ಅವಕಾಶಗಳಿವೆ. ಇದು  ಪರಿಸರವಾದಿಗಳ ಪ್ರತಿಭಟನೆಗೂ ಸಿಲುಕಿದೆ.

ಹೈಡ್ರೋಜನ್‌ ಮತ್ತು ನೈಟ್ರೋಜನ್‌ ಉತ್ಪಾದನಾ ಘಟಕಗಳೂ ಜಿಲ್ಲೆಗೆ ಅಡಿಯಿಡುವ ಸಾಧ್ಯತೆ ಇದೆ.

ನಂದಿಕೂರಿನಲ್ಲಿನ ಸ್ಟೀಲ್‌ ಸ್ಟ್ರಾಂಗ್ ಕಂಪೆನಿ ಕಾಮಗಾರಿ ಪ್ರಾರಂಭಗೊಂಡಿದೆ.  250 ಮಂದಿಗೆ ಉದ್ಯೋಗ ಅವಕಾಶಗಳಿವೆ.

– ಆರಾಮ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.