Kejriwal ಮಧ್ಯಾಂತರ ಜಾಮೀನು ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್
ಇನ್ನೊಂದೆಡೆ ಮನೀಶ್ ಸಿಸೋಡಿಯಾ ಪಾದಯಾತ್ರೆ ಮುಂದೂಡಿಕೆ
Team Udayavani, Aug 14, 2024, 2:46 PM IST
ಹೊಸದಿಲ್ಲಿ: ಅಬಕಾರಿ ನೀತಿ ಹಗರಣದಲ್ಲಿ ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಾಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಬುಧವಾರ(ಆಗಸ್ಟ್ 14) ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು, ಸಿಬಿಐ ನಡೆಸಿದ ಬಂಧನವನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಕೇಜ್ರಿವಾಲ್ ಅವರು ಸಲ್ಲಿಸಿದ ಮನವಿಯ ಮೇರೆಗೆ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.
“ನಾವು ಯಾವುದೇ ಮಧ್ಯಾಂತರ ಜಾಮೀನು ನೀಡುತ್ತಿಲ್ಲ. ನಾವು ಸಿಬಿಐಗೆ ನೋಟಿಸ್ ಜಾರಿ ಮಾಡುತ್ತೇವೆ” ಎಂದು ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರಿಗೆ ಪೀಠ ಹೇಳಿ, ಪ್ರಕರಣದ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿದೆ. ಕೇಜ್ರಿವಾಲ್ ಅವರ ಮನವಿಗೆ ಪ್ರತಿಕ್ರಿಯಿಸಲು ಕೇಂದ್ರಿಯ ತನಿಖಾ ಸಂಸ್ಥೆಗೆ(CBI) ಆಗಸ್ಟ್ 23 ರವರೆಗೆ ಸಮಯ ನೀಡಿದೆ.
ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು 17 ತಿಂಗಳ ಜೈಲುವಾಸದ ನಂತರ ಜಾಮೀನು ಪಡೆದ ಕೆಲವು ದಿನಗಳ ನಂತರ ಸುಪ್ರೀಂ ಕೋರ್ಟ್ ನಿಂದ ಈ ಆದೇಶ ಹೊರಬಿದ್ದಿದೆ.
ಸಿಸೋಡಿಯಾ ಪಾದಯಾತ್ರೆ ಮುಂದೂಡಿಕೆ
ಭದ್ರತಾ ಕಾರಣಗಳಿಂದಾಗಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಪೊಲೀಸರ ಸಲಹೆಯ ಮೇರೆಗೆ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರ ದೆಹಲಿಯ ವಿವಿಧ ಪ್ರದೇಶಗಳನ್ನು ಒಳಗೊಂಡ ‘ಪಾದಯಾತ್ರೆ’ಯನ್ನು ಆಮ್ ಆದ್ಮಿ ಪಕ್ಷ ಬುಧವಾರ ಆಗಸ್ಟ್ 16 ಕ್ಕೆ ಮುಂದೂಡಿದೆ.
ಎಎಪಿ ನಾಯಕ ಮತ್ತು ದೆಹಲಿ ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್ ಪತ್ರಿಕಾಗೋಷ್ಠಿಯಲ್ಲಿ ‘ಇಂದು(ಬುಧವಾರ) ಸಂಜೆ 5 ಗಂಟೆಗೆ ಆರಂಭವಾಗಬೇಕಿದ್ದ ಸಿಸೋಡಿಯಾ ಅವರ ಪಾದಯಾತ್ರೆ ದೆಹಲಿ ಪೊಲೀಸರ ಸಲಹೆ ಯ ಮೇರೆಗೆ ಆಗಸ್ಟ್ 16 ಕ್ಕೆ ಮುಂದೂಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅವರ ಜನ್ಮದಿನವಾದ ಆಗಸ್ಟ್ 16 ರಿಂದ ಪಾದಯಾತ್ರೆ ಪ್ರಾರಂಭವಾಗುವುದು ಬಹುಶಃ “ಪ್ರಕೃತಿಯ” ಯೋಜನೆಯಾಗಿದೆ. ಏನು ನಡೆದರೂ ಒಳ್ಳೆಯದಕ್ಕಾಗಿ ನಡೆಯುತ್ತದೆ” ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NEET ಆಕಾಂಕ್ಷಿ ಅಪ್ರಾಪ್ತೆಯನ್ನು ಒತ್ತೆಯಾಳಾಗಿ ಇರಿಸಿ ಆರು ತಿಂಗಳ ಕಾಲ ರೇ*ಪ್!
Uddhav; 30 ವರ್ಷ ಮೈತ್ರಿಯಿದ್ದರೂ ಶಿವಸೇನೆ ಬಿಜೆಪಿಯಾಗಲಿಲ್ಲ,ಕಾಂಗ್ರೆಸ್ ಹೇಗಾಗುತ್ತದೆ?
Hyderabad; ಸಲ್ಮಾನ್ ಖಾನ್ ಚಿತ್ರದ ಚಿತ್ರೀಕರಣ ಸ್ಥಳದಲ್ಲಿ ವ್ಯಾಪಕ ಕಟ್ಟೆಚ್ಚರ
Train Derail: ಬೆಳ್ಳಂಬೆಳಗ್ಗೆ ಹಳಿ ತಪ್ಪಿದ ಶಾಲಿಮಾರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.