Viral video: ಅಬ್ಬಬ್ಭಾ…! ಸಿಂಹಗಳೊಂದಿಗೆ ಕಾಳಗಕ್ಕಿಳಿದ ಶ್ವಾನಗಳು!


Team Udayavani, Aug 14, 2024, 4:39 PM IST

1-simha

ಸೂರತ್:‌ ಮೃಗ ರಾಜ ಸಿಂಹವನ್ನು ಕೆಣಕಲು ಯಾವ ಪ್ರಾಣಿಯೂ ಧೈರ್ಯ ತೋರುವುದಿಲ್ಲ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಸಿಂಹಗಳೊಂದಿಗೆ ನಾಯಿಗಳೆರಡು ಹೋರಾಟಕ್ಕಿಳಿದ ವಿಡಿಯೋ ಸಧ್ಯ ವೈರಲ್‌ ಆಗುತ್ತಿದೆ.

2 ನಾಯಿಗಳು ಮತ್ತು 2 ಸಿಂಹಗಳು ಪರಸ್ಪರ ಜಗಳವಾಡುತ್ತಿರುವ ವಿಡಿಯೋ  ಗುಜರಾತ್‌ನಲ್ಲಿ ಏಷ್ಯಾಟಿಕ್‌ ಲಯನ್ಸ್‌ ಪ್ರದೇಶವೆಂದೆ ಖ್ಯಾತಿ ಹೊಂದಿದ ಗಿರ್‌ ನ್ಯಾಶನಲ್‌ ಪಾರ್ಕ್‌ನ ಸುಮಾರು 70 ಕಿಲೋ ಮೀಟರ್‌ ದೂರದಲ್ಲಿನ ಸಾವರ್‌ಕುಂಡ್ಲ ಎಂಬಲ್ಲಿನ ಗೋಶಾಲೆಯೊಂದರಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಆದಿತ್ಯವಾರ (ಆ.10) ಮಧ್ಯರಾತ್ರಿ 4 ಪ್ರಾಣಿಗಳು ಮುಖಾಮುಖಿಯಾಗಿದ್ದು, ಅತ್ಯಪರೂಪದ ದೃಶ್ಯವು ಗೇಟ್‌ಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಎರಡು ಸಿಂಹಗಳು ಗೇಟಿನ ಮೂಲಕ ಗೋಶಾಲೆಯೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಒಳಗಿದ್ದ ಎರಡು ನಾಯಿಗಳು ನೀಯತ್ತು ತೋರಿ ಸಿಂಹಗಳು ಒಳಬರದಂತೆ ಬಲವಾದ ಪ್ರತಿರೋಧ ತೋರಿ ಕಾಳಗಕ್ಕೆ ಮುಂದಾಗಿದೆ. ಸಿಂಹಗಳು ಗೇಟನ್ನು ಬಲವಾಗಿ ಗುದ್ದಿದಾಗ ಚಿಲಕ ಕಳಚಿಕೊಂಡಿತಾದರೂ ಅವುಗಳಿಗೆ ಒಳಗೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ ಒಳಗಿದ್ದ ನಾಯಿಗಳಿಗಾಗಲೀ, ಗೋವುಗಳಿಗಾಗಲೀ ಯಾವುದೇ ರೀತಿಯ ಹಾನಿ ಉಂಟಾಗಲಿಲ್ಲ.

ಆ ಬಳಿಕ ಸಿಂಹಗಳು ಸಮೀಪದ ಪೊದೆಯೊಳಗೆ ಓಡಿದ್ದು, ಸೆಕೆಂಡುಗಳ ಅಂತರದಲ್ಲಿ ಗೇಟಿನ ಬಳಿ ಭಾರೀ ಶಬ್ದ ಉಂಟಾದ ಕಾರಣ ಒಳಗಿದ್ದ ವ್ಯಕ್ತಿಯು ಹೊರಗೋಡಿ ಬಂದಿದ್ದಾನೆ. ವ್ಯಕ್ತಿಯು ತನ್ನ ಬಳಿ ಇದ್ದ ಟಾರ್ಚ್‌ ಉಪಯೋಗಿಸಿಕೊಂಡು ಪೊದೆಯನ್ನು ಪರೀಕ್ಷಿಸಿದನಾದರೂ ಏನೂ ಕಾಣದ ಕಾರಣ ಗೇಟಿನ ಚಿಲಕ ಹಾಕಿ ಮರಳಿ ಗೋಶಾಲೆಯೊಳಗೆ ಹೋಗಿದ್ದಾನೆ.

ಮೀಸಲು ಅರಣ್ಯದ ಪ್ರದೇಶದಿಂದ ಸಿಂಹಗಳು ಹೊರಬಂದಿದ್ದು ಈ ವಿಡಿಯೋದಿಂದಾಗಿ ತಿಳಿದುಬಂದಿದೆ. ಆದರೂ ಈ ಘಟನೆಯ ಕುರಿತು ಅಧಿಕಾರಿಗಳ ವಲಯದಿಂದ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.

ಸಿಂಹಗಳ ಸಂರಕ್ಷಣೆ ಮತ್ತು ರಕ್ಷಣೆಯ ಸಲುವಾಗಿ ಗುಜರಾತ್ ನಲ್ಲಿ ವಿಶ್ವ ಸಿಂಹ ದಿನವನ್ನು ಆಚರಿಸಿದ ಮರುದಿನವೇ ಈ ಘಟನೆ ನಡೆದಿದೆ.ರಾಜ್ಯ ಅರಣ್ಯ ಇಲಾಖೆಯು ಎಸ್‌ಎಂಎಸ್‌ ಹಾಗೂ ಈಮೇಲ್‌ಗಳ ಮೂಲಕ ವಿಶ್ವ ಸಿಂಹ ದಿನದ ಜಾಗೃತಿಯನ್ನು ಮೂಡಿಸಿದೆ. ಜತೆಗೆ ರಾಜ್ಯಾದ್ಯಂತ 11 ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದು, ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.2020 ರ ಗಣತಿಯ ಪ್ರಕಾರ ಗುಜರಾತ್‌ನಲ್ಲಿ ಸಿಂಹಗಳ ಸಂಖ್ಯೆಯು 674 ರಷ್ಟಿರುವುದು ತಿಳಿದು ಬಂದಿದೆ.

ಟಾಪ್ ನ್ಯೂಸ್

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

Viral Video: ನೀರಿನಿಂದ ಜಿಗಿದು ಹಾವನ್ನೇ ಬೇಟೆಯಾಡಲು ಹೋದ ಮೀನು… ಕೊನೆಗೆ ಆಗಿದ್ದೇನು?

Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.