Holalkere: ತಾಲೂಕಿನಾದ್ಯಾಂತ ರಣಭೀಕರ ಮಳೆ; ರೈತರ ಮುಖದಲ್ಲಿ ಮಂದಹಾಸ
ಹಲವೆಡೆ ಬೆಳೆ ಮುಳುಗಡೆ-ಒಂದಿಷ್ಟು ಬೆಳೆ ಹಾನಿ
Team Udayavani, Aug 14, 2024, 4:31 PM IST
ಹೊಳಲ್ಕೆರೆ: ತಾಲೂಕಿನಾದ್ಯಾಂತ ಆ.14ರ ಬುಧವಾರ ಮುಂಜಾನೆ ಸುರಿದ ರಣಭೀಕರ ಮಳೆಗೆ ಹಲವಾರು ಕೆರೆಕಟ್ಟೆಗಳಿಗೆ, ಹೊಲಗದ್ದೆಗಳಲ್ಲಿ ನೀರು ಸಂಗ್ರಹವಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ 3-4 ವರ್ಷಗಳಿಂದ ಸಮರ್ಪಕ ಮಳೆಯಿಲ್ಲದೆ ಕಂಗಾಲಾಗಿದ್ದ ಅಡಿಕೆ ಬೆಳೆಗಾರರು ಬುಧವಾರ ಮುಂಜಾನೆ ಸುರಿದ ಮಳೆಯಿಂದಾಗಿ ತೋಟ ಹೊಲಗದ್ದೆಗಳಲ್ಲಿ ನೀರು ಸಂಗ್ರಹವಾದ ಬೆನ್ನಲ್ಲೇ ರೈತರಲ್ಲಿ ಖುಷಿ ಇಮ್ಮಡಿಗೊಳಿಸಿದೆ.
ಭಾರೀ ಮಳೆಯಿಂದಾಗಿ ಹಲವಾರು ಹಳ್ಳಿಗಳಲ್ಲಿ ಕೆರೆಕಟ್ಟೆಗಳಿಗೆ ನೀರು ಹರಿದು ಬಂದಿದ್ದು, ಹೊಲ-ಗದ್ದೆಗಳಲ್ಲಿ ನಿರ್ಮಾಣ ಮಾಡಿದ್ದ ಕೃಷಿ ಹೊಂಡಗಳು, ಚೆಕ್ ಡ್ಯಾಮ್ ಗಳು ನೀರಿನಿಂದ ಭರ್ತಿಯಾಗಿ ತುಂಬಿ ಹರಿಯಲಾರಂಭಿಸಿವೆ.
ಹಲವಾರು ತೋಟಗಳಲ್ಲಿ ನೀರು ನಿಂತು ತೋಟವನ್ನು ಇನ್ನಷ್ಟು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವಂತೆ ಆಗಿರುವುದು ತೋಟಗಾರಿಕೆ ಕೃಷಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.
ಕಳೆದ 10 ವರ್ಷಗಳ ಬಳಿಕ ಸುರಿದ ರಣಭೀಕರಣ ಮಳೆ ಹಿನ್ನೆಲೆ ಕೇವಲ ಅರ್ಧ ತಾಸಿನಲ್ಲೇ ಕೆರೆಕಟ್ಟೆಗಳು, ಹಳ್ಳ ಕೊಳ್ಳಗಳು ನೀರಿನಿಂದ ಭರ್ತಿಯಾಗಿ ಹೊರ ಚೆಲ್ಲಿವೆ. ಬಹುತೇಕ ಹೊಲ-ಗದ್ದೆಗಳಲ್ಲಿ ತೋಟಗಳಲ್ಲಿ ಸುಮಾರು 1-2 ಅಡಿಯಷ್ಟು ನೀರು ಸಂಗ್ರಹವಾಗಿ ನಿಂತಿದೆ.
ಇದರಿಂದಾಗಿ ಕಳೆದ ಹತ್ತಾರು ವರ್ಷಗಳಿಂದ ಅಂತರ್ಜಲ ಕುಸಿತದಿಂದ ಬೆಂಡಾಗಿದ್ದ ಭೂಮಿಗೆ ಒಂದಿಷ್ಟು ಜೀವಕಳೆ ಬಂದಂತಾಗಿದೆ. ನೀರು ನಿಂತಿರುವ ಪರಿಣಾಮ ಕೊಳವೆ ಬಾವಿಗಳ ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿದೆ.
ಹಲವಾರು ಕಡೆ ಬೆಳೆಗಳು ಮುಳುಗಡೆಯಾಗಿದ್ದು, ಒಂದಿಷ್ಟು ಬೆಳೆ ಹಾನಿ ಸಂಭವಿಸಿದೆ.
ಬುಧವಾರ ಮುಂಜಾನೆ 4.30 ರಿಂದ 6 ಗಂಟೆಯ ತನಕ ಸುರಿದ ರಣಭೀಕರ ಮಳೆ, ಕಳೆದ 20 ವರ್ಷಗಳಿಂದ ಬಂದಿಲ್ಲ. ಕೇವಲ ಅರ್ಧ ತಾಸಿನಲ್ಲಿ ಕೆರೆಕಟ್ಟೆಗಳು, ಕೃಷಿ ಹೊಂಡಗಳು ಭರ್ತಿಯಾಗಿರುವುದು ರೈತ ಸಮೂಹದಲ್ಲಿ ಸಂತಸ ಮೂಡಿಸಿದೆ. – ಈಚಘಟ್ಟ ಸಿದ್ದವೀರಪ್ಪ, ರೈತ ನಾಯಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.