NIRF ರ್‍ಯಾಂಕಿಂಗ್: ಮಾಹೆ ವಿಶ್ವವಿದ್ಯಾನಿಲಯಕ್ಕೆ 4ನೇ ಸ್ಥಾನ
Team Udayavani, Aug 14, 2024, 10:39 PM IST
ಮಣಿಪಾಲ: ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್‌ಐಆರ್‌ಎಫ್) ವಿಶ್ವವಿದ್ಯಾನಿಲಯ ವಿಭಾಗದಲ್ಲಿ ಮಾಹೆ ವಿ.ವಿ. ರಾಷ್ಟ್ರೀಯ ಮಟ್ಟದಲ್ಲಿ 4ನೇ ಶ್ರೇಯಾಂಕ ಪಡೆದಿದೆ.
ಇದು ದೇಶದ ಅಗ್ರ 10 ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಕಳೆದ ವರ್ಷ 6ನೇ ಸ್ಥಾನದಲ್ಲಿದ್ದ ಮಾಹೆ ಈ ಬಾರಿ 4ನೇ ಸ್ಥಾನಕ್ಕೇರಿದ್ದು, ಇದು ಮಾಹೆಯ ಗುಣಮಟ್ಟದ ಶಿಕ್ಷಣ ಹಾಗೂ ಬದ್ಧತೆಯನ್ನು ಪ್ರತಿಪಾದಿಸುತ್ತದೆ.
ಒಟ್ಟಾರೆ ಭಾರತದ ಶ್ರೇಯಾಂಕ ದಲ್ಲಿ ಮಾಹೆಯು ಅಗ್ರ 20 ವಿಶ್ವವಿದ್ಯಾ ನಿಲಯಗಳಲ್ಲಿ 14ನೇ ಸ್ಥಾನವನ್ನು ಪಡೆದುಕೊಂಡಿದೆ. ಮಾಹೆಯ ಅನೇಕ ಅಂಗ ಸಂಸ್ಥೆಗಳು ವಿವಿಧ ವಿಭಾಗಗಳ ಅಡಿಯಲ್ಲಿಅಗ್ರ 10 ಸ್ಥಾನಗಳಲ್ಲಿ ಸೇರಿವೆ. ದಂತ ವಿಭಾಗದಲ್ಲಿ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ 2ನೇ ಸ್ಥಾನ ಗಳಿಸಿದೆ.
ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸುಟಿಕಲ್ ಸೈನ್ಸಸ್ ಫಾರ್ಮಸಿ ವಿಭಾಗದಲ್ಲಿ 8ನೇ ಸ್ಥಾನದಲ್ಲಿದೆ. ವೈದ್ಯಕೀಯ ವಿಭಾಗದಲ್ಲಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು 9ನೇ ಸ್ಥಾನ ಗಳಿಸಿದೆ. ಮಂಗಳೂರಿನ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ದಂತ ವೈದ್ಯಕೀಯ ವಿಭಾಗದಲ್ಲಿ 11ನೇ ಸ್ಥಾನದಲ್ಲಿದೆ. ಮಾಹೆಯು ಸಂಶೋಧನೆಯಲ್ಲಿ 23ನೇ ಸ್ಥಾನ ಪಡೆದುಕೊಂಡಿದೆ. ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆ್ಯಂಡ್ ಪ್ಲಾನಿಂಗ್ ಆರ್ಕಿಟೆಕ್ಚರ್ ವಿಭಾಗದಲ್ಲಿ 28ನೇ ಸ್ಥಾನದಲ್ಲಿದೆ.
9ನೇ ಆವೃತ್ತಿಯ ಶ್ರೇಯಾಂಕವು ಒಟ್ಟು 13 ವಿಭಾಗಗಳನ್ನು ಒಳಗೊಂ ಡಿದೆ. ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು, ನಿರ್ವಹಣೆ, ಫಾರ್ಮಸಿ, ಆರ್ಕಿಟೆಕ್ಚರ್, ಕೃಷಿ ಮತ್ತು ಸಂಬಂಧಿತ ವಲಯದ ಅಡಿಯಲ್ಲಿ ಉನ್ನತ ವಿಶ್ವವಿದ್ಯಾ ಲಯಗಳು ಮತ್ತು ಕಾಲೇಜುಗಳನ್ನು ಒಳಗೊಂಡಂತೆ ಉಪವರ್ಗಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕಗಳ ಪಟ್ಟಿ ಮಾಡಲಾಗಿದೆ. ಬೋಧನೆ, ಕಲಿಕೆ ಮತ್ತು ಸಂಪನ್ಮೂಲಗಳು, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸಗಳು, ಪದವಿ ಫಲಿತಾಂಶಗಳು, ಔಟ್‌ರೀಚ್ ಮತ್ತು ಒಳಗೊಳ್ಳುವಿಕೆ, ಗ್ರಹಿಕೆಗಳಂತಹ ನಿಯತಾಂಕಗಳನ್ನು ಆಧರಿಸಿ ಸಂಸ್ಥೆಗಳನ್ನು ಶ್ರೇಣೀಕರಿಸಲಾಗಿದೆ.
ದೃಢ ಸಮರ್ಪಣೆಗೆ ಸಾಕ್ಷಿ
ಮಾಹೆಯು ಎನ್‌ಐಆರ್‌ಎಫ್ ಶ್ರೇಯಾಂಕದಲ್ಲಿ ಸೇರ್ಪಡೆಗೊಂಡಿರು ವುದು ಶೈಕ್ಷಣಿಕ ಸಾಧನೆ, ಸೃಜನಶೀಲತೆ ಮತ್ತು ಸರ್ವತೋಮುಖ ಬೆಳವಣಿಗೆಗೆ ದೃಢವಾದ ಸಮರ್ಪಣೆಗೆ ಸಾಕ್ಷಿಯಾಗಿದೆ. ಬೆಳವಣಿಗೆ, ಕಲಿಕೆ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸಲು ಬೋಧಕ, ಬೋಧಕೇತರ ಸಿಬಂದಿ ಹಾಗೂ ವಿದ್ಯಾರ್ಥಿಗಳ ಸಂಯೋಜಿತ ಪ್ರಯತ್ನ ಫಲ ನೀಡಿದೆ. ಶಿಕ್ಷಣದ ಗುಣಮಟ್ಟ ಇನ್ನಷ್ಟು ಹೆಚ್ಚಿಸಲು ಮತ್ತು ಸಮಾಜಕ್ಕೆ ಮಹತ್ವದ ಕೊಡುಗೆಗಳನ್ನು ನೀಡಲು ನಾವು ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ತಿಳಿಸಿದ್ದಾರೆ.
ಶ್ರೇಷ್ಠತೆ, ಬದ್ಧತೆಯ ಪ್ರತೀಕ: ಡಾ| ಬಲ್ಲಾಳ್
ಎನ್‌ಐಆರ್‌ಎಫ್ ಶ್ರೇಯಾಂಕದಲ್ಲಿ 6ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿರು ವುದು ಗಮನಾರ್ಹ ಸಾಧನೆಯಾಗಿದೆ. ಇದು ಶ್ರೇಷ್ಠತೆ, ಬದ್ಧತೆಯ ಪ್ರತೀಕ ವಾಗಿದೆ. ಈ ಪ್ರಗತಿಯು ಶೈಕ್ಷಣಿಕ ಕಠಿನತೆ ಮತ್ತು ನಾವೀನ್ಯದ ವಾತಾವರಣವನ್ನು ಬೆಳೆಸುವಲ್ಲಿ ಅಧ್ಯಾಪಕರು, ವಿದ್ಯಾರ್ಥಿ ಗಳು ಮತ್ತು ಸಿಬಂದಿ ಕಠಿನ ಪರಿಶ್ರಮ ಮತ್ತು ಸಮರ್ಪಣೆ ಹೆಚ್ಚಿದೆ. ಇನ್ನೂ ಹೆಚ್ಚಿನ ಎತ್ತರವನ್ನು ಏರಲು ಕಠಿನ ಪರಿಶ್ರಮವನ್ನು ಮುಂದುವರಿಸುತ್ತೇವೆ ಎಂದು ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.