Indian Railway: 100 ವಂದೇಭಾರತ್ ರೈಲು ಖರೀದಿ ಟೆಂಡರ್ ರದ್ದು!
ಹೆಚ್ಚು ಬೆಲೆ ಬಿಡ್ ಮಾಡಿದ್ದಕ್ಕೆ ರೈಲ್ವೇ ನಿರ್ಣಯ
Team Udayavani, Aug 14, 2024, 11:14 PM IST
ಹೊಸದಿಲ್ಲಿ: 100 ವಂದೇ ಭಾರತ್ ರೈಲುಗಳ ಉತ್ಪಾದನೆ ಮತ್ತು ನಿರ್ವಹಣೆ ಗಾಗಿ ಭಾರತೀಯ ರೈಲ್ವೇ ನೀಡಿದ್ದ 30,000 ಕೋಟಿ ರೂ. ಮೌಲ್ಯದ ಟೆಂಡರನ್ನು ರದ್ದು ಮಾಡಿದೆ.
ಇದಕ್ಕೆ ಅಲ್ಸ್ಟೋಮ್ ಇಂಡಿಯಾ ಕೋಟ್ ಮಾಡಿದ್ದ ಮೊತ್ತ ದುಬಾರಿ ಎನಿಸಿದ ಕಾರಣ ಟೆಂಡರನ್ನು ರದ್ದು ಮಾಡಿದೆ. ರೈಲುಗಳ ಉತ್ಪಾದನೆಗೆ ಫ್ರೆಂಚ್ ಮೂಲದ ಕಂಪೆನಿ ಅಲ್ಸ್ಟೋಮ್ ಇಂಡಿಯಾ ಕಡಿಮೆ ಮೊತ್ತದ ಬಿಡ್ ಸಲ್ಲಿಸಿತ್ತು. ಆದರೆ ಇದು ಗರಿಷ್ಠ ಎಂದು ರೈಲ್ವೇ ಇಲಾಖೆ ಟೆಂಡರ್ ರದ್ದು ಮಾಡಿದೆ. ಫ್ರೆಂಚ್ ಕಂಪೆನಿ ಪ್ರತೀ ರೈಲಿಗೆ 150.9 ಕೋಟಿ ರೂ. ನಿಗದಿ ಮಾಡಿತ್ತು. ಆದರೆ ಭಾರತೀಯ ರೈಲ್ವೇ 140 ಕೋಟಿ ರೂ. ಅಂತಿಮಗೊಳಿಸಲು ಮುಂದಾಗಿತ್ತು.
ರೈಲ್ವೇ ಕರೆದಿದ್ದ ಟೆಂಡ ರ್ಗೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಡ್ಡರ್ಗಳು ಆಗಮಿಸಿರಲಿಲ್ಲ. ಹೀಗಾಗಿ ಮತ್ತೂಮ್ಮೆ ಇಲಾಖೆ ಈ ಟೆಂಡರ್ ಕರೆಯುವ ನಿರೀಕ್ಷೆ ಇದೆ. ಟೆಂಡರ್ ರದ್ದತಿಯನ್ನು ಅಲ್ಸ್ಟೋಮ್ ಇಂಡಿಯಾ ಕಂಪೆನಿ ಒಪ್ಪಿಕೊಂಡಿದ್ದು, ರೈಲ್ವೇ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಕೇಂದ್ರ ಸರಕಾರವು ವಿವಿಧ ನಗರಗಳ ಮಧ್ಯೆ ಅತ್ಯಾಧುನಿಕ ರೈಲ್ವೇ ಸಂಪರ್ಕ ಸಾಧಿಸಲು ವಂದೇ ಭಾರತ್ ರೈಲುಗಳನ್ನು ಪರಿಚಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.