Independence Day Special ಸ್ವಾತಂತ್ರ್ಯೋತ್ಸವದ ಸ್ವಗತ


Team Udayavani, Aug 15, 2024, 6:33 AM IST

Independence Day Special ಸ್ವಾತಂತ್ರ್ಯೋತ್ಸವದ ಸ್ವಗತ

ಸೂಕ್ಷ್ಮವಾಗಿ ಅನ್ನಮಯ, ಪ್ರಾಣ ಮಯ, ಮನೋಮಯ, ಜ್ಞಾನ- ವಿಜ್ಞಾನಮಯ ಹಾಗೂ ಆನಂದಮಯ ಕೋಶ ಎಂಬುದಾಗಿ ಮನುಷ್ಯನ ಬಗೆಗೆ ವರ್ತುಲಗಳನ್ನು ಗುರುತಿಸುತ್ತಾರೆ. ಅದೇ ತೆರನಾಗಿ 1947 ಆಗಸ್ಟ್‌ 14ರಂದು ಮಧ್ಯ ರಾತ್ರಿ ನಮ್ಮ ಸ್ವತಂತ್ರ ಭಾರತಕ್ಕೆ ಅದರದೇ ಆದ “ಜೀವ-ಸ್ತರ’, “ಜೀವಕೋಶ’ಗಳ ಪದರಗಳಿವೆ. ಹರಿಯುವ ವಿಶಾಲ ಸಿಂಧುವಿನ ಬಿಂದುಗಳೆನಿಸಿದ “ಭಾರತದ ಪೌರರಾದ ನಾವು’ ಎನ್ನುವ “ಜಂಗಮ’ತೆಗೆ ಸಾಕ್ಷಿಯಾಗಿ ಈ ರಾಷ್ಟ್ರದ ಸಾರ್ವಭೌಮತೆಗೆ ನಾವೆಲ್ಲರೂ ಸಮಭಾಗಿಗಳೆನಿಸಿದ್ದೇವೆ. ನಾವಿಂದು ಆಚರಿಸುವ “ಸ್ವಾತಂತ್ರ್ಯ’ದ ಉತ್ಸವ ಎಂಬುದು ನಮ್ಮಿà ನಾಡಿನ ಇತಿ ಹಾಸದ ಸುದೀರ್ಘ‌ ಪಥದ ಒಂದು ನಿರ್ದಿಷ್ಟ ಮೈಲುಗಲ್ಲು.

“ವಿಕಸಿತ ಭಾರತ’ದ ಕನಸು 2047ರಲ್ಲಿ ಪಕ್ವಗೊಳ್ಳುವಲ್ಲಿ ಸಾಂವಿಧಾನಿಕ ನೆಲೆಗಟ್ಟು, ಸಮಗ್ರ ರಾಷ್ಟ್ರೀಯ ಸಾಂಸ್ಥಿಕ ವ್ಯವಸ್ಥೆ ಹಾಗೂ ಭಾರತೀಯರೆನಿಸಿದ “ನಾವು’-ಈ ತ್ರಿವೇಣಿ ಸಂಗಮವೇ ಮೂಲಭೂಮಿಕೆ. ನಮ್ಮ ನೆರೆಹೊರೆಯ ರಾಷ್ಟ್ರಗಳೆಲ್ಲ ಸಾಂವಿ ಧಾನಿಕ ಅಸ್ಥಿರತೆ, ಸಾಂಸ್ಥಿಕ ಸ್ಥಿತ್ಯಂತರಗಳ ಕಂಪನಗಳಿಗೆ ತುತ್ತಾಗುತ್ತಲೇ ಇರುವುದು ಪ್ರಚಲಿತ ಇತಿಹಾಸ. ಆದರೆ ನಮ್ಮ ಭಾರತ ಭದ್ರ ಸಾಂವಿಧಾನಿಕ ನೆಲೆಗಟ್ಟು ಹೊಂದಿದೆ ಎಂಬುದು ನೆಮ್ಮದಿಯ ಅಂಶ. ಅದಕ್ಕೆ ಅನುಗುಣವಾದ ಕೇಂದ್ರ, ರಾಜ್ಯ ಹಾಗೂ ಸ್ಥಳಿಯ ಸರಕಾರಗಳು, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ತಂತಮ್ಮ ನಿರ್ದಿಷ್ಟ ಅಧಿಕಾರ ಹಾಗೂ ಕರ್ತ ವ್ಯಗಳ ಪರಿಧಿಯಲ್ಲಿ ಕಾರ್ಯ ನಿರ್ವ ಹಿಸುತ್ತಿವೆ. ಇಲ್ಲಿ ಅಧಿಕಾರಸ್ಥ ವರ್ಗ ಹಾಗೂ ಜನಸಾಮಾನ್ಯರ ಪರಸ್ಪರ ಸಂಬಂಧ ಬಹಳ ಪ್ರಾಮುಖ್ಯ. ಪರಸ್ಪರ ಸಹಕಾರದ ರಾಷ್ಟ್ರೀಯ ಭೂಮಿಕೆಗೆ ನಾಡ ಬಿಡುಗಡೆಯ ಈ ಉತ್ಸವ ಕಂಪು ತುಂಬುವಂತಾಗಬೇಕು.

“ಕಟ್ಟುವೆವು ನಾವು ಹೊಸ ನಾಡೊಂ ದನು; ರಸದ ಬೀಡೊಂದನು’ ಎಂಬ ಕವಿ ವಾಣಿಗೆ ಈ ನಮ್ಮ ಸ್ವತಂತ್ರ ಭಾರತ ತೆರೆದು ಕೊಂಡು 77 ಸಂವತ್ಸರಗಳು ಸಂದಿವೆ. ನಮ್ಮ ಅಶೋಕ ಚಕ್ರ ಪ್ರಗತಿಯ ಪಥದಲ್ಲಿ ಆರ್ಥಿಕ ಗತಿ-ಸ್ಥಿತಿಯ ಬಗೆಗೆ ಏರು ಸ್ತರ ದೆಡೆಗೆ ನಿಜಕ್ಕೂ ಚಲಿಸಿದೆ. ನಮ್ಮ ಸಂವಿ ಧಾನ ಜನಕರು ಸ್ವಾತಂತ್ರ್ಯೋತ್ತರದ ಹೊಸತಿನಲ್ಲೇ ರಾಜ್ಯಾಂಗ ಘಟನೆಯ ಪುಟ ಪುಟಗಳಲ್ಲಿ “ಭವ್ಯ ಭಾರತದ’ ಕನಸನ್ನು ಹೆಣೆದಿದ್ದಾರೆ. ತ್ರಿವರ್ಣ ಧ್ವಜ ದಡಿಯ ನಾಡ ಬಿಡುಗಡೆಯ ತಂಪು ಗಾಳಿ ಪ್ರತೀ ಮನೆಗೂ ಪ್ರತೀ ಮನಕ್ಕೂ ಸೋಂಕಲಿ ಎಂಬ ಆಶಯವನ್ನು ನಮ್ಮ ಸಂವಿಧಾನ ತುಂಬಿ ನಿಂತಿದೆ. ಯಾವುದೇ ರಾಜಕೀಯ ಪಕ್ಷ, ಯಾವುದೇ ಸರಕಾರ- ಕೇಂದ್ರ, ರಾಜ್ಯ ಹಾಗೂ ಸ್ಥಳೀಯವಾಗಿ ಅಧಿಕಾರದ ಚುಕ್ಕಾಣಿ ಹಿಡಿದರೂ ಯಾವ ತೆರನಾಗಿ ಸಾಧನೆಯ ಪಥಗಾಮಿ ಯಾಗಬೇಕು ಎಂಬ ಬೋಧನೆಯ “ಗೊಂಚಲು’ ತೊನೆದಾಡುತ್ತಿದೆ.

ಮೂಲಭೂತ ಹಕ್ಕುಗಳ ಮುಖ ಒಂದಾದರೆ, ಪ್ರತಿಯೋರ್ವ ಪ್ರಜೆಯ “ಕರ್ತವ್ಯ’ಗಳ ಎತ್ತರ ಬಿತ್ತರನ್ನು ನಮ್ಮ ಸಂವಿ ಧಾನ ಪಡಿನುಡಿಯುತ್ತಿದೆ. ಪ್ರಕೃತಿಯನ್ನು ಸಂರಕ್ಷಿಸುವ, ರಾಷ್ಟ್ರ ಗೌರವವನ್ನು ಸದಾ ಎತ್ತಿ ಹಿಡಿಯುವ, ವ್ಯಕ್ತಿಗತ ಹಾಗೂ ಸಾಮೂಹಿಕ ಬದುಕಿನಲ್ಲಿ ಸೌಹಾರ್ದ ತೆಯನ್ನು, ಕೌಶಲವನ್ನು, ವೈಜ್ಞಾನಿಕ ಅನು ಸಂಧಾನವನ್ನು ರಾಷ್ಟ್ರೀಯ ಚಿಂತನೆಯನ್ನು ಬಿಂಬಿಸುವಲ್ಲಿ “ಕರ್ತವ್ಯದ ಕಹಳೆ’ಯೇ ಧ್ವನಿಸುತ್ತದೆ.

“ಸ್ವಾತಂತ್ರ್ಯೋತ್ಸವದ ಮಹತ್ವವೇನು?’ ಎಂಬ ಸ್ವಗತದ ಪ್ರಶ್ನೆಗೆ ಪುಂಖಾನುಪುಂಖ ವಾಗಿ ಸದುತ್ತರವನ್ನು ಸಮರ್ಪಕವಾಗಿ ಶೋಧಿಸುವ ಕಾರ್ಯ ಇಂದು “ಭಾರತೀ ಯರಾದ ನಾವು’ ಮಾಡಬೇಕಾಗಿದೆ. ವಿಶ್ವ ಕುಟುಂಬದಲ್ಲಿ ಭಾರತದ ತ್ರಿವರ್ಣ ಧ್ವಜದ ಮಹತ್ವವನ್ನು ಪ್ರಚುರ ಪಡಿಸುವಲ್ಲಿ ರಕ್ಷಣ ಸಾಮರ್ಥ್ಯದಿಂದ ಹಿಡಿದು ಆರ್ಥಿಕತೆ, ಶಿಕ್ಷಣ, ಕೈಗಾರಿಕೆ ಹಾಗೆ ಎಲ್ಲ ಕ್ಷೇತ್ರಗಳಲ್ಲಿ ಯೂ ನಮ್ಮ ಮುನ್ನಡೆಗೆ ಮುನ್ನುಡಿ ಬರೆಯಬೇಕಾಗಿದೆ. ಉನ್ನತ ಆದರ್ಶದ ಗಗನದಲ್ಲೇ ಸಂಚರಿಸುತ್ತಾ ನಾಡ ಬಿಡು ಗಡೆಯ ಹಬ್ಬದ ಮೆರುಗು ತುಂಬಲಾರೆವು. ಬದಲಾಗಿ ವಾಸ್ತವಿಕತೆಯ ಗಟ್ಟಿ ನೆಲದಲ್ಲೇ ಸಂಚಲನ ಮೂಡಿಸುವ ಗಟ್ಟಿತನವನ್ನು ಸರಕಾರ ಹಾಗೂ ಮಹಾ ಜನತೆಯ ಸುಯೋಗ್ಯ ಅನುಸಂಧಾನದಲ್ಲಿ ಹೊಂದ ಬೇಕಾಗಿದೆ.

ನಿಸರ್ಗದ ಮುನಿಸು, ಅದೇ ರೀತಿ ಮಾನವ ನಿರ್ಮಿತ ದುರಂತ ಗಳು- ಇವು ಪ್ರತಿಯೊಂದು ರಾಷ್ಟ್ರವೂ ಎದುರಿ ಸುವ ಸವಾಲುಗಳು. ಈ ನಿಟ್ಟಿನಲ್ಲಿ ನಮ್ಮ ಭಾರತದ ಮುಂಬರುವ ಸೂರ್ಯೋ ದಯಗಳಲ್ಲಿ ಮೇರು ಸಾಧನೆಗೆ ನಮ್ಮೆಲ್ಲರ ವೈಯಕ್ತಿಕ ಹಾಗೂ ಸಾಮೂಹಿಕ ಬೆವರ ಹನಿಗಳು ಸಾಕ್ಷಿಯಾಗಬೇಕಾಗಿದೆ. ಬಾಹ್ಯ ಆಚರಣೆಯ, ಅದ್ದೂರಿಯ ಸ್ವಾತಂತ್ರ್ಯೋತ್ಸವ, ಜನಗಣಮನದ ಸಾರ್ವತ್ರಿಕ ಉದ್ಘೋಷ, ತ್ರಿವರ್ಣಮಯ ಲಕ್ಷ್ಯ ಲಕ್ಷ್ಯ ಧ್ವಜಾರೋಹಣದಲ್ಲಿ ಆಂತರಿಕ ಜಾಗೃತಿಯ, ರಾಷ್ಟ್ರ ಪ್ರೇಮದ ಲಕ್ಷ್ಯವೂ ಮೇಳೈಸಬೇಕಾಗಿದೆ.

-ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

ಟಾಪ್ ನ್ಯೂಸ್

SERBIA

Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್‌ ಚೋಲ್‌ಗೆ ಬೇಡಿಕೆ

Puttur: ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್‌ ಚೋಲ್‌ಗೆ ಬೇಡಿಕೆ

Bowler-Siraj

IPL Auction: ಗುಜರಾತ್‌ ಟೈಟಾನ್ಸ್‌ ಪಾಲಾದ ಸಿರಾಜ್‌; ಆರ್‌ಸಿಬಿಗೆ ಹೃದಯಸ್ಪರ್ಶಿ ಸಂದೇಶ

sambit-patra

EVM Issue: ಇವಿಎಂಗೂ ಮುನ್ನ ರಾಹುಲ್‌ರನ್ನು ಬದಲಿಸಿ ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು ?

India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

SERBIA

Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ

court

Kasaragod: 300 ಪವನ್‌ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್‌ ಚೋಲ್‌ಗೆ ಬೇಡಿಕೆ

Puttur: ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್‌ ಚೋಲ್‌ಗೆ ಬೇಡಿಕೆ

Bowler-Siraj

IPL Auction: ಗುಜರಾತ್‌ ಟೈಟಾನ್ಸ್‌ ಪಾಲಾದ ಸಿರಾಜ್‌; ಆರ್‌ಸಿಬಿಗೆ ಹೃದಯಸ್ಪರ್ಶಿ ಸಂದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.