Krishnam Pranaya Sakhi: ಸರಳ ಕಥೆಯ ವಿರಳ ಪಯಣವಿದು: ಸಖಿಯ ಹುಡುಕಿ ಹೊರಟ ಕೃಷ್ಣ


Team Udayavani, Aug 15, 2024, 1:44 PM IST

Krishnam Pranaya Sakhi: ಸರಳ ಕಥೆಯ ವಿರಳ ಪಯಣವಿದು: ಸಖಿಯ ಹುಡುಕಿ ಹೊರಟ ಕೃಷ್ಣ

“ಕಥೆ ಸಾಗುವ ರೀತಿಯೇ ಮಜವಾಗಿದೆ…’ – ಹೀಗೆ ಹೇಳಿ ನಕ್ಕರು ಗೋಲ್ಡನ್‌ ಸ್ಟಾರ್‌ ಗಣೇಶ್‌. ಅವರ ನಗುವಲ್ಲೊಂದು ವಿಶ್ವಾಸ ಎದ್ದು ಕಾಣುತ್ತಿತ್ತು. ಸಹಜವಾಗಿಯೇ ಯಾವುದೇ ಕಲಾವಿದರಾದರೂ ಅವರಿಗೆ ಹೊಸ ಬಗೆಯ ಕಥೆ ಸಿಕ್ಕಾಗಿ ಅವರಲ್ಲೊಂದು ಹೊಸ ಜೋಶ್‌ ಎದ್ದು ಕಾಣುತ್ತದೆ. ಆ ಜೋಶ್‌ ಗಣೇಶ್‌ ಅವರಲ್ಲಿದೆ. ಅದಕ್ಕೆ ಕಾರಣ “ಕೃಷ್ಣಂ ಪ್ರಣಯ ಸಖಿ’. ಹಾಡುಗಳ ಮೂಲಕ ಭರ್ಜರಿ ಹಿಟ್‌ ಆದ ಈ ಚಿತ್ರ ಇಂದು ತೆರೆಕಾಣುತ್ತಿದೆ.

ಸಹಜವಾಗಿಯೇ ಗಣೇಶ್‌ ಅವರಿಗೆ ಈ ಚಿತ್ರದ ಮೇಲೆ ನಿರೀಕ್ಷೆ ಇದೆ. ಶ್ರೀನಿವಾಸರಾಜು ಈ ಚಿತ್ರದ ನಿರ್ದೇಶಕರು. ಪ್ರಶಾಂತ್‌ ಜಿ ರುದ್ರಪ್ಪ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುವ ಗಣೇಶ್‌, “ನಿರ್ದೇಶಕ ಶ್ರೀನಿವಾಸರಾಜು ಅವರು ಫೋನ್‌ ಮಾಡಿ ಕಥೆ ಹೇಳಬೇಕೆಂದಾಗ ನನಗೆ ಆಶ್ಚರ್ಯವಾಯಿತು. ಅವರು ದಂಡುಪಾಳ್ಯದಂತಹ ಥ್ರಿಲ್ಲರ್‌ ಚಿತ್ರ ಮಾಡಿರುವ ನಿರ್ದೇಶಕರು. ನಾನು ನೋಡಿದರೆ ಪ್ರೇಮಕಥೆಗಳ ನಾಯಕ. ನನಗೆ ಇವರು ಯಾವ ತರಹ ಕಥೆ ಮಾಡಿರಬಹುದು ಅಂದುಕೊಂಡು ಕಥೆ ಕೇಳಿದೆ. ಅವರು ಕಥೆ ಶುರು ಮಾಡಿದ ಕೂಡಲೆ ನೀವು ಮದುವೆ ಗಂಡಿನ ತರಹ ಬರುತ್ತೀರಾ. ಎಂಟು ಜನ ನಾಯಕಿಯರು ಮದುವೆ ಹೆಣ್ಣಿನ ತರಹ ಸಿದ್ಧವಾಗಿರುತ್ತಾರೆ ಎಂದರು. ಆಗ ಇದು ನನ್ನ ಜಾನರ್‌ನ ಚಿತ್ರ ಅಂದು ಕೊಂಡೆ. ಆದರೆ ಚಿತ್ರದಲ್ಲಿ ಬರೀ ಇಷ್ಟೇ ಇಲ್ಲ. ಒಳ್ಳೆಯ ಟ್ವಿಸ್ಟ್‌ ಇಟ್ಟಿದ್ದಾರೆ’ ಎನ್ನುತ್ತಾರೆ.

ಕಥೆಯ ಬಗ್ಗೆ ಮಾತನಾಡುವ ಗಣೇಶ್‌, “ಒಬ್ಬ ಶ್ರೀಮಂತ, ಸುಶಿಕ್ಷಿತ ಯುವಕನಿಗೆ 30 ವರ್ಷ ದಾಟಿದರೂ ಮದುವೆಯಾಗಿರುವುದಿಲ್ಲ. ಸಾಕಷ್ಟು ಹುಡುಗಿಯರನ್ನು ಅವನು ರಿಜೆಕ್ಟ್ ಮಾಡುತ್ತಾನೆ, ಒಂದಷ್ಟು ಹುಡುಗಿಯರು ಅವನನ್ನೂ ರಿಜೆಕ್ಟ್ ಮಾಡುತ್ತಾರೆ. ಇದಕ್ಕೆ ಕಾರಣ ಏನು ಎಂಬುದೇ ಸಿನಿಮಾದ ಹೈಲೈಟ್‌’ ಎನ್ನಲು ಮರೆಯವುದಿಲ್ಲ.

ಸರಳ ಕಥೆಯ ಸೂಪರ್‌ ಜರ್ನಿ: ಗಣೇಶ್‌ “ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೇಲೆ ನಿರೀಕ್ಷೆ ಇಡಲು ಕಾರಣ ಕಥೆ. ಫ್ಯಾಮಿಲಿ ಡ್ರಾಮಾ ಸಿನಿಮಾವನ್ನು ಗಣೇಶ್‌ ಈಗಾಗಲೇ ಸಾಕಷ್ಟು ಮಾಡಿದ್ದಾರೆ. ಆದರೆ, ಇಂತಹ ಕಥೆಯನ್ನು ಮಾಡಿಲ್ಲ. “ಇಂತಹ ಕಥೆ ಸಿಗೋದು ವಿರಳ. ಇದು ಕೇವಲ ಫ್ಯಾಮಿಲಿ ಡ್ರಾಮಾವಲ್ಲ. ಇಲ್ಲೊಂದು ಥ್ರಿಲ್ಲರ್‌ ಅಂಶವಿದೆ. ಅದು ಇಡೀ ಸಿನಿಮಾವನ್ನು ಬೇರೆ ಲೆವೆಲ್‌ಗೆ ಕೊಂಡೊಯ್ಯುತ್ತದೆ. ಸಿನಿಮಾ ಆರಂಭವಾಗಿ 10 ನಿಮಿಷದಿಂದಲೇ ಪ್ರೇಕ್ಷಕರಲ್ಲಿ ಹಲವು ಕುತೂಹಲ, ಪ್ರಶ್ನೆಗಳು ಮೂಡುತ್ತವೆ. ಆ ಮಟ್ಟಿಗೆ ನಿರ್ದೇಶಕ ಶ್ರೀನಿವಾಸರಾಜು ಥ್ರಿಲ್ಲರ್‌ ಅಂಶವನ್ನು ಫ್ಯಾಮಿಲಿ ಕಥೆಗೆ ತುಂಬಾ ಚೆನ್ನಾಗಿ ಬ್ಲೆಂಡ್‌ ಮಾಡಿದ್ದಾರೆ. ಫ‌ಸ್ಟ್‌ಹಾಫ್ ಒಂದು ರೀತಿ ಸಾಗಿದರೆ, ಸೆಕೆಂಡ್‌ ಹಾಫ್ ನ ಮಜನೇ ಬೇರೆ’ ಎಂದು ಖುಷಿಯಿಂದ ಹೇಳುತ್ತಾರೆ.

 

ಟಾಪ್ ನ್ಯೂಸ್

1-pa

Pankaj Advani; ದಾಖಲೆಯ 28ನೇ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪಂಕಜ್

1-wqqwe

Davanagere:ಪ್ರತಿಷ್ಠಿತ ಬಡಾವಣೆಯ ಪಹಣಿಯಲ್ಲಿಯೂ ವಕ್ಫ್ ಹೆಸರು!

covid

Covid scam: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಲು ಸಮಿತಿ ಶಿಫಾರಸು

06

Ullala: ಟ್ಯಾಂಕರ್-ಸ್ಕೂಟರ್ ಅಪಘಾತ; ಮಹಿಳೆ ಸ್ಥಳದಲ್ಲೇ ಮೃತ್ಯು!

Uddav 2

Uddhav; 30 ವರ್ಷ ಮೈತ್ರಿಯಿದ್ದರೂ ಶಿವಸೇನೆ ಬಿಜೆಪಿಯಾಗಲಿಲ್ಲ,ಕಾಂಗ್ರೆಸ್ ಹೇಗಾಗುತ್ತದೆ?

1-kkk

Australia series; ಕೊಹ್ಲಿ ಅವರನ್ನು ಈಗಿನ ಫಾರ್ಮ್ ನಲ್ಲಿ ನಿರ್ಣಯಿಸಬೇಡಿ: ಪಾಂಟಿಂಗ್

Game Changer Teaser: ಬಲ್ಯಾಢ್ಯರ ಮುಂದೆ ತೋಳ್ಬಲ..ಟೀಸರ್‌ನಲ್ಲಿ ಮಿಂಚಿದ ಗ್ಲೋಬಲ್‌ ಸ್ಟಾರ್

Game Changer Teaser: ಬಲ್ಯಾಢ್ಯರ ಮುಂದೆ ತೋಳ್ಬಲ..ಟೀಸರ್‌ನಲ್ಲಿ ಮಿಂಚಿದ ಗ್ಲೋಬಲ್‌ ಸ್ಟಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sangeetha Santhosha Movie: ಸಂತೋಷ ಕೂಟದಲ್ಲಿ ಸಂಗೀತದ ಔತಣ

Sangeetha Santhosha Movie: ಸಂತೋಷ ಕೂಟದಲ್ಲಿ ಸಂಗೀತದ ಔತಣ

11-dolly

Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

19

Kota: ಗೋಪೂಜೆ ಮಾಡಿ ಮೇಯಲು ಬಿಟ್ಟ ಗೋವುಗಳು ಕಳವು

Mangaluru: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

Mangaluru: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

17

Kasargod: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಮತ್ತೆ ಕಲ್ಲು ತೂರಾಟ

16

Kasargod: ಪಟಾಕಿ ದುರಂತ; ಸಾವಿನ ಸಂಖ್ಯೆ 5ಕ್ಕೆ

1-reee

Shikaripur: ಕುತ್ತಿಗೆಗೆ ಟವೆಲ್ ಬಿಗಿದು ಪತ್ನಿಯನ್ನು ಹ*ತ್ಯೆ ಮಾಡಿದ ಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.