Thangalaan Movie: ಆ್ಯಕ್ಟಿಂಗ್,‌ ಮ್ಯೂಸಿಕ್‌ ಓಕೆ ಆದರೆ.. ಸಿನಿಮಾ ನೋಡಿದವರು ಏನಂತಾರೆ?


Team Udayavani, Aug 15, 2024, 5:15 PM IST

7

ಚೆನ್ನೈ: ಚಿಯಾನ್ ವಿಕ್ರಮ್ (Chiyaan Vikram) ಅವರ ಬಹುನಿರೀಕ್ಷಿತ ʼತಂಗಲಾನ್‌ʼ (Thangalaan) ಗುರುವಾರ(ಆ.15ರಂದು) ವರ್ಲ್ಡ್‌ ವೈಡ್‌ ರಿಲೀಸ್‌ ಆಗಿದೆ.

ಮಾರ್ನಿಂಗ್‌ ಶೋನಿಂದಲೇ ಪ್ರೇಕ್ಷಕರು ಸಿನಿಮಾ ನೋಡಲು ಸರತಿ ಸಾಲಿನಲ್ಲಿ ನಿಂತಿದ್ದ  ದೃಶ್ಯಗಳು ಕೆಲ ಸಿನಿಮಾ ಮಂದಿರದ ಮುಂದೆ ನೋಡಲು ಸಿಕ್ಕಿತು. ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಟ್ವಿಟರ್(ಎಕ್ಸ್)‌ ನಲ್ಲಿ ತನ್ನ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ʼಕೆಜಿಎಫ್‌ʼ ಪೂರ್ವಜರ ಕಥೆ ಇದಾಗಿದ್ದು, ಚಿನ್ನದ ಹುಡುಕಾಟ ಹಾಗೂ ಕಾಡು ಜನಾಂಗದ ಅಳಿವು – ಉಳಿವಿನ ಹೋರಾಟದ ಕಥೆಯನ್ನು ರೋಚಕವಾಗಿ ಸಿನಿಮಾದಲ್ಲಿ ತೋರಿಸಲಾಗಿದೆ.

ಹೇಗಿದೆ ಸಿನಿಮಾ, ಸಿನಿಮಾ ನೋಡಿದವರು ಏನಂತಾರೆ ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ..

ಇಲ್ಲಿದೆ ಟ್ವಿಟರ್‌ ರಿವ್ಯೂ..

1st ಹಾಗೂ 2nd ಹಾಫ್‌ ಅದ್ಭುತವಾಗಿದೆ. ವಿಕ್ರಮ್‌ – ಮಾಳವಿಕಾ ಚೆನ್ನಾಗಿ ಅಭಿನಯಿಸಿದ್ದಾರೆ. ​​ಬಿಜಿಎಂ, ಮೇಕಿಂಗ್ ಚೆನ್ನಾಗಿದೆ. 1st ಹಾಫ್‌ ನಲ್ಲಿನ ಕೆಲ ಡೈಲಾಗ್ಸ್‌ ಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಯಿತು. ಭಾವನಾತ್ಮಕವಾಗಿ ಸಿನಿಮಾ ಕನೆಕ್ಟ್‌” ಆಗುತ್ತದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಸಿನಿಮಾ ಚೆನ್ನಾಗಿದೆ. ಸಿನಿಮಾದಲ್ಲಿನ ವಿಕ್ರಮ್‌, ಪಾರ್ವತಿ ಹಾಗೂ ಮಾಳವಿಕ ಅವರ ಅಭಿನಯವೂ ಉತ್ತಮವಾಗಿದೆ. ಜಿವಿ ಪ್ರಕಾಶ್‌ ಅವರ ಮ್ಯೂಸಿಕ್‌ ಹಾಗೂ ಬಿಜಿಎಂ ತುಂಬಾ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಸೆಕೆಂಡ್‌ ಹಾಫ್‌ ಸ್ವಲ್ಪ ಲ್ಯಾಗ್‌ ಆಗಿದೆ ಆದರೂ ಡಿಸೆಂಟ್‌ ಆಗಿದೆ ಎಂದು ಪ್ರೇಕ್ಷಕರೊಬ್ಬರು ಬರೆದುಕೊಂಡಿದ್ದಾರೆ.

2024ರಲ್ಲಿ ಇದುವರೆಗೆ ಕಾಲಿವುಡ್‌ನಲ್ಲಿ ಬಂದ ಉತ್ತಮ ಸಿನಿಮಾ ಇದು. ವಿಕ್ರಮ್‌ ಅವರ ಅಭಿನಯ ಪ್ರಶಸ್ತಿಗೆ ಅರ್ಹವಾಗಿದೆ. ಜಿವಿ ಪ್ರಕಾಶ್‌ ಮ್ಯೂಸಿಕ್‌ ಗಮನ ಸೆಳೆಯುತ್ತದೆ. ದ್ವಿತೀಯಾರ್ಧವು ಚೆನ್ನಾಗಿ ಕೆಲಸ ಮಾಡಿದೆ ಎಂದು ಒಬ್ಬರು ಹೇಳಿದ್ದಾರೆ.

ನಿರ್ದೇಶಕ ಪಾ ರಂಜಿತ್‌ ಸಿನಿಮೀಯ, ಸಾಕ್ಷ್ಯಚಿತ್ರ , ರಾಜಕೀಯ ಕ್ಯಾಂಪೇನ್‌ ಹೀಗೆ ಮೂರು ಥೀಮ್‌ಗಳನ್ನು ಒಂದೇ ಸಿನಿಮಾದಲ್ಲಿ ಬೆರೆಸಲು ಪ್ರಯತ್ನಿಸಿದ್ದಾರೆ. ಇದು  ಕೆಲಸ ಮಾಡಲಿಲ್ಲ ಮತ್ತು ಚಿತ್ರದ ಉದ್ದಕ್ಕೂ ನಮ್ಮನ್ನು ಇದು ಗೊಂದಲದ ಸ್ಥಿತಿಯಲ್ಲಿ ಇರಿಸುತ್ತದೆ. ಚಿಯಾನ್ ವಿಕ್ರಮ್ ಒಬ್ಬರೇ ರಕ್ಷಕ ಮತ್ತು ಎಂದಿನಂತೆ ಅವರು ತನ್ನ ಪಾತ್ರದಲ್ಲಿ ಬದುಕಿದ್ದಾರೆ ಎಂದು ಸಿನಿಮಾ ನೋಡಿ ಒಬ್ಬರು ಬರೆದುಕೊಂಡಿದ್ದಾರೆ.

ಟ್ವಿಸ್ಟ್ ಸಂಪೂರ್ಣವಾಗಿ ಅನಿರೀಕ್ಷಿತವಾಗಿತ್ತು. ಸಿನಿಮಾದಲ್ಲಿ ರೋಮಾಂಚಕವಾಗಿಸುವ ದೃಶ್ಯಗಳಿವೆ. ಚಿತ್ರಕಥೆ ಚೆನ್ನಾಗಿದೆ. ವಿಕ್ರಮ್‌ ಅಭಿನಯ ನೆಕ್ಸ್ಟ್‌ ಲೆವೆಲ್‌ ಎಂದು ನೆಟ್ಟಿರೊಬ್ಬರು ಹೇಳಿದ್ದಾರೆ.

ಮತ್ತೊಬ್ಬರು, “ನಿಮ್ಮ ಹಣವನ್ನು ವ್ಯರ್ಥ ಮಾಡಬೇಡಿ! ಒಂದು ಪದದಲ್ಲಿ ವಿಮರ್ಶೆ ಮಾಡಬೇಕೆಂದರೆ ಇದೊಂದು ಪ್ಲಾಫ್‌ ಸಿನಿಮಾವೆಂದು” ಹೇಳಿದ್ದಾರೆ.

ವಿಕ್ರಮ್‌ ಜತೆಗೆ ಸಿನಿಮಾದಲ್ಲಿ  ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನನ್ ಮತ್ತು ಪಶುಪತಿ ಮುಂತಾದವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

ಟಾಪ್ ನ್ಯೂಸ್

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್‌ ಹೇಳಿದ್ದೇನು?

Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್‌ ಹೇಳಿದ್ದೇನು?

Rashmika Mandanna gave hint of Pushpa 3

Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ

Dansuh-aiswarya

Chennai: ಐಶ್ವರ್ಯ ರಜನಿಕಾಂತ್‌, ಧನುಷ್‌ಗೆ ವಿಚ್ಛೇದನ ನೀಡಿದ ಕೋರ್ಟ್‌

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

1-qeqwewq

Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.