Malpe: ಮೀನುಗಾರಿಕೆ ಕೆಲಸಕ್ಕೆ ಬಂದ ವ್ಯಕ್ತಿ ನಾಪತ್ತೆ; ಕೇಸು ದಾಖಲು
Team Udayavani, Aug 15, 2024, 7:56 PM IST
ಮಲ್ಪೆ: ಮೀನುಗಾರಿಕೆ ಕೆಲಸಕ್ಕೆಂದು ಬಂದಿದ್ದ ರಾಜೇಂದ್ರ (37) ಅವರು ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮಲ್ಪೆಯ ಸುಬ್ರಹ್ಮಣ್ಯ ಎಂಬ ಹೆಸರಿನ ಬೋಟಿನಲ್ಲಿ ಕೆಲಸ ಮಾಡುವ ನಿಮಿತ್ತ ಗ್ರ್ಯಾಬಿಯಲ್ ಜಾಟೆ ಅವರ ಜತೆ ಒಡಿಶಾದಿಂದ 24 ಮಂದಿ ಬಂದಿದ್ದರು. ರಾತ್ರಿ ಮಲ್ಪೆಯ ಹೊಟೇಲು ಒಂದರಲ್ಲಿ ಊಟ ಮುಗಿಸಿ ವಾಪಸ್ ಬರುವಾಗ ಅವರಲ್ಲಿ ರಾಜೇಂದ್ರ ಅವರು ನಾಪತ್ತೆಯಾಗಿದ್ದರು. ಅವರನ್ನು ಮಲ್ಪೆ-ಉಡುಪಿ ಪರಿಸರದ ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.