Viral: ರೋಡಲೀ ಸಾಗುತಾ… ಹೊಂಡವ ದಾಟಲು: ರಸ್ತೆ ಹೊಂಡಗಳ ವೈರಲ್ ಸಾಂಗ್ ಹುಟ್ಟಿದ್ದು ಹೇಗೆ?
ರೋಡಲೀ ಸಾಗುತಾ... ಹೊಂಡವ ದಾಟಲು ಜೀವವೇ ಬಾಯಿಗೆ ಬಂದಂತಿದೆ!
Team Udayavani, Aug 16, 2024, 11:34 AM IST
ಕಟಪಾಡಿ: ಕರಾವಳಿಯ ರಸ್ತೆಗಳ ಹೊಂಡಗುಂಡಿಯ ವಿಡಿಯೊ ಜತೆಗೆ ಆಕರ್ಷಕ ಹಾಡೊಂದು ವೈರಲ್ ಆಗುತ್ತಿರುವುದನ್ನು ನೀವು ಕೇಳಿರಬಹುದು. ರಸ್ತೆ ಹೊಂಡಗಳ ಅವ್ಯವಸ್ಥೆ ವಿರುದ್ಧ ಮೂಡಿಬಂದ ಹಾಡಿನ ಹಿಂದೆ ಕುತೂಹಲಕಾರಿ ಕಥೆ ಇದೆ!
ರೋಡಲೀ ಸಾಗುತಾ.. ಹೊಂಡವ ದಾಟಲು ಜೀವವೇ ಬಾಯಿಗೆ ಬಂದಂತಿದೆ ಎಂದು ಆರಂಭಗೊಳ್ಳುವ ಈ ಹಾಡಿನ ನಡುವೆ ಅಯ್ಯೋ ಅಯ್ಯೋ ನಮಗ್ಯಾರ್ಗತಿ, ಹೇಳ್ಳೋರ್ ಕೇಳ್ಳೋರ್ ಇಲ್ಲ ಈ ಸರ್ತೀ ಅಯ್ಯೋ…. ಉಂದು ಎಂಚಿ ಸಾವುಯೇ ಎಂಬ ಆಕ್ರೋಶವೂ ಇದೆ.
ಹಾಡು ಹುಟ್ಟಿದ್ದು ಹೇಗೆ? ಹಾಡುಗಾರ ಯಾರು?
ಅಂದ ಹಾಗೆ ಈ ಹಾಡನ್ನು ಬರೆದು ಹಾಡಿದವರು ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಕುರ್ಕಾಲು ಜಯನಗರ ನಿವಾಸಿಯಾಗಿರುವ ಮದನ್ ಮಣಿಪಾಲ. ಇವರು ಮೂಲತಃ ಒಬ್ಬ ಹಾಡುಗಾರ. ಆದರೆ ಈ ರಸ್ತೆಗಳನ್ನು ನೋಡಿ ಹಾಡೊಂದು ಹಾಗೇ ಹುಟ್ಟಿಕೊಂಡು ಈಗ ಜಾಲತಾಣಗಳಲ್ಲಿ ವೈರಲ್ ಆಗುವಂತಾಗಿದೆ.
ವಯೋ ವೃದ್ಧ ದಂಪತಿ ತಮ್ಮ ದ್ವಿಚಕ್ರ ವಾಹನದಿಂದ ಇಳಿದು ನಡೆದು ಹೊಂಡ ಗುಂಡಿ ದಾಟಿ ಬಳಿಕ ದ್ವಿಚಕ್ರ ವಾಹನ ಹತ್ತಿ ಪ್ರಯಾಣ ಬೆಳೆಸಿದ ಪರಿಯನ್ನು ಕಂಡು ಮನಕಲಕಿ ಸಾಹಿತ್ಯವನ್ನು ರಚಿಸಿದ್ದಾಗಿ ಸಂಗೀತ ಕಲಾವಿದ ಮದನ್ ಮಣಿಪಾಲ ಅವರು ಉದಯವಾಣಿ ಜತೆ ಮಾತನಾಡುತ್ತಾ ಹೇಳಿದರು.
ಹೊಂಡ ಗುಂಡಿಯ ಸಂಕಷ್ಟವನ್ನು ಸ್ವತಃ ಅನುಭವಿಸಿದ ಅವರಿಗೆ ವೃದ್ಧ ದಂಪತಿಯ ನೋವು ಇನ್ನಷ್ಟು ಕಾಡಿತು. ಹೀಗಾಗಿ ಸಾಹಿತ್ಯ ರಚನೆಯಾಯಿತು. ಹಾಡನ್ನು ಅವರೇ ಹಾಡಿದರು. ಇಷ್ಟೇ ಇದ್ದರೂ ಸಾಲದು ಎಂಬಂತೆ ಗುಂಡಿಗಳ ಚಿತ್ರಣ, ಜನರು ಪಡುತ್ತಿರುವ ಪಾಡನ್ನು ವಿಡಿಯೊ ಚಿತ್ರೀಕರಣ ನಡೆಸಿ ವಿಡಿಯೊ ಸಾಂಗ್ ಆಗಿ ಪರಿವರ್ತಿಸಿದರು. ಅದು ಜಾಲತಾಣದಲ್ಲಿ ಹರಿದಾಡಿ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಮದನ್ ಗೋಪಾಲ್ ಅವರು ಮೂಲತಃ ಕಟಪಾಡಿ, ಸುಭಾಷ್ ನಗರ, ಬಂಟಕಲ್ ಭಾಗದ ರಸ್ತೆ ಹೊಂಡಗಳನ್ನು ಉಲ್ಲೇಖೀಸಿದ್ದಾರೆ. ಆದರೆ, ಈಗ ಅವರ ವೀಡಿಯೋದ ಹಾಡಿನ ಭಾಗವನ್ನಷ್ಟೇ ತೆಗೆದು ಜನರು ತಮ್ಮ ಊರಿನ ಹೊಂಡಗಳ ಚಿತ್ರಣವನ್ನು ಸೇರಿಸಿ ಹೊಸ ಹೊಸ ವೀಡಿಯೊ ಮಾಡುತ್ತಿದ್ದಾರೆ.
ಮೂಲ ಹಾಡು ಯಾವುದು ಗೊತ್ತೇ?
ಮದನ್ ಮಣಿಪಾಲ್ ಅವರು ಸಾಹಿತ್ಯ ರಚಿಸಿ ಹಾಡಿರುವ ಹಾಡಿನ ಮೂಲ ಸಾಹಿತ್ಯ ಆಗಸ್ಟ್ 15ರಂದು ತೆರೆ ಕಂಡ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಾಯ ಕ ನಾ ಗಿರುವ “ಕೃಷ್ಣಂ ಪ್ರಣಯ ಸಖೀ’ ಚಿತ್ರದ ಜನ ಪ್ರಿಯ ಹಾಡಿನದ್ದು. “ದ್ವಾಪರಾ ದಾಟುತಾ ನನ್ನನೇ ನೋಡಲು, ನನ್ನನೇ ಸೇರಲು ಬಂದ ರಾಧಿಕೆ….’ ಹಾಡಿನ ಧಾಟಿಯಲ್ಲಿ ಮೂಡಿಬಂದ ರೋಡಲೀ ಸಾಗುತಾ.. ಹೊಂಡವ ದಾಟಲು ಜೀವವೇ ಬಾಯಿಗೆ ಬಂದಂತಿದೆ’ ಎಂಬ ಹಾಡು ಇದೀಗ ಸಾಕಷ್ಟು ರೀಲ್ಸ್ ಆಗುತ್ತಿದೆ.
ಕುಂಟುತಾ ಸಾಗಿ ಹೊಂಡ ತಪ್ಪಿಸಲು ಜೀವ ಝಲ್ ಎಂದಿದೆ. ಬೇರೆ ದಾರೀನು ಇಲ್ಲ ನಮಗಿನ್ನು, ಹೊಂಡವೇ ಉಳಿದಿದೇ.. ನಾವು ಹಾಕಿದ್ದ ಓಟಿನ ಬೆಲೆಯು ಈಗ ಗೊತ್ತಾಗಿದೆ ಎಂಬ ಹಾಡಿನ ಸಾಲುಗಳು ಜನರ ಆಕ್ರೋಶಕ್ಕೆ ಜೀವ ನೀಡಿವೆ.
ಬಸ್ ಚಾಲಕ ಗುಂಡಿಗೆ ಬಿದ್ದ ಬೇಸರದಲ್ಲಿ ಮೂಡಿದ ವೀಡಿಯೋ
ದಿನಂಪ್ರತಿ ಮೂರು ಟ್ರಿಪ್ ಇದೇ ರಸ್ತೆಯಲ್ಲಿ ಬಸ್ ಚಲಾಯಿಸುವ ಡ್ರೈವರ್ ಕರ್ತವ್ಯ ಬಿಟ್ಟು ದ್ವಿಚಕ್ರ ವಾಹನದಲ್ಲಿ ಸಾಗುವಾಗ ಇಲ್ಲಿನ ಗುಂಡಿಗೆ ಬಿದ್ದು ಏಟಾಗಿದ್ದು, ಇದೀಗ ಮನೆಯಲ್ಲಿ ರೆಸ್ಟ್ ನಲ್ಲಿರುವುದು ರಸ್ತೆಯ ದುಃಸ್ಥಿತಿಗೆ ಸಾಕ್ಷಿ. ನನ್ನ ಮನೆಗೆ ಸಾಗುವ ಹಾದಿಯಲ್ಲಿ ನಿತ್ಯ ಐದು ನಿಮಿಷ ನಿಂತು ಇತರೇ ವಾಹನಗಳು ಸಾಗುವ ನಿತ್ಯ ಬವಣೆಯನ್ನು ಕಂಡು ಸಾಹಿತ್ಯ ರಚಿಸಿ, ವೀಡಿಯೋ ಚಿತ್ರೀಕರಿಸಿ, ಹಾಡು ರೆಕಾರ್ಡಿಂಗ್ ಪೂರೈಸಿದ್ದೇನೆ. ಸುಮಾರು ಮೂರೂವರೆ ಸಾವಿರ ರೂ. ಖರ್ಚಾ ಗಿದೆ. ಯಾವುದೇ ಪಕ್ಷಗಳ ವಿರುದ್ಧದ ಹಾಡಲ್ಲ. ರಸ್ತೆಯ ಹೊಂಡ-ಗುಂಡಿಗಳ ಪರಿಸ್ಥಿತಿಯ ಕರಾಳ ಮುಖವನ್ನು ವಿಡಿಯೋ ಸಾಂಗ್ ಮೂಲಕ ತೆರೆದಿಟ್ಟಿದ್ದೇನೆ. –ಮದನ್ ಮಣಿಪಾಲ, ಸಾಹಿತ್ಯ ಬರೆದ ಹಾಡುಗಾರ
-ವಿಜಯ ಆಚಾರ್ಯ ಉಚ್ಚಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.