Tablets:ಮೆಡಿಕಲ್ ಶಾಪ್‌ನಲ್ಲಿ ಡ್ರಗ್ಸ್ ಮಾರಾಟ:ಸ್ಟಿಂಗ್‌ಆಪರೇಷನ್ ಮಾಡಿದ ದುನಿಯಾ ವಿಜಯ್
ಮಾತ್ರೆ ಮಾರಾಟ ಮಾಡುತ್ತಿರುವ ಜಾಲ ಬಯಲಿಗೆಳೆದ ನಟ; ವೀಡಿಯೋ ಮೂಲಕ ಮಾಹಿತಿ ಹಂಚಿಕೆ
Team Udayavani, Aug 16, 2024, 1:00 PM IST
ಬೆಂಗಳೂರು: ಡ್ರಗ್ಸ್ ದಂಧೆಯ ಕರಾಳ ಮುಖವನ್ನು ನಟ ದುನಿಯಾ ವಿಜಯ್ ಬೆಳಕಿಗೆ ತಂದಿದ್ದು, ಬೆಂಗಳೂರಿನ ವಿವಿಧೆಡೆ ಮೆಡಿಕಲ್ ಅಂಗಡಿಯಲ್ಲಿ ನೋವು ನಿವಾರಕ ಮಾತ್ರೆ, ಮಾದಕ ವಸ್ತುವಿಗೆ ಸಂಬಂಧಿಸಿದ ಮಾತ್ರೆ ಮಾರಾಟ ಮಾಡುತ್ತಿರುವ ಜಾಲವನ್ನು ಬಯಲಿಗೆ ಎಳೆದಿದ್ದಾರೆ. ಇದೀಗ ದುನಿಯಾ ವಿಜಯ್ ಮಾಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ವಿಜಯ್ ತಮ್ಮ ಸ್ನೇಹಿತರ ಜತೆಗೆ ಕಾರಿನಲ್ಲಿ ತೆರಳಿ ಮೆಡಿಕಲ್ ಸ್ಟೋರ್‌ವೊಂದಕ್ಕೆ ತಮ್ಮ ಜತೆಗಿದ್ದ ಬಾಲಕನನ್ನು ಕಳುಹಿಸಿ ಡ್ರಗ್ಸ್‌ಗೆ ಸಂಬಂಧಿಸಿದ (ಟೈಡಲ್) ಮಾತ್ರೆಯನ್ನು ಕೇಳುವಂತೆ ಸೂಚಿಸಿದ್ದರು. ಅದರಂತೆ ಮೆಡಿಕಲ್‌ನಲ್ಲಿದ್ದ ಮಹಿಳೆಯೊಬ್ಬರು ಆತನಿಗೆ ಮಾತ್ರೆಯೊಂದನ್ನು ನೀಡುತ್ತಾರೆ. ಇದನ್ನು ಮಾದಕ ವ್ಯಸನಿಗಳು ತೆಗೆದುಕೊಳ್ಳುವುದಾಗಿ ವೀಡಿಯೋದಲ್ಲಿ ದುನಿಯಾ ವಿಜಯ್ ವಿವರಿಸುತ್ತಾರೆ. 2 ಮೆಡಿಕಲ್‌ಗಳಲ್ಲಿ ಡೈಡಲ್ ಮಾತ್ರೆಯನ್ನು ವೈದ್ಯರ ಚೀಟಿ ಇಲ್ಲದೆಯೇ ನೀಡಲಾಗಿದೆ. ಈ ವೀಡಿಯೋ ವೈರಲ್ ಆಗಿದೆ.
ಏನಿದು ಟೈಡಾಲ್ ಟ್ಯಾಬ್ಲೆಟ್?:
ಟೈಡಾಲ್ ಟ್ಯಾಬ್ಲೆಟ್ ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರು ರೋಗಿಗಳಿಗೆ ನಿಯಮಿತವಾಗಿ ನೀಡಲಿದ್ದಾರೆ. ಆದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಇದನ್ನು ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.
ಟೈಡಲ್ ಮಾತ್ರೆ ಮಾರಾಟ
ಬೆಂಗಳೂರು ಸೇರಿದಂತೆ ವಿವಿಧ ಕಡೆಯಲ್ಲಿ ಟೈಡಲ್ (ಟಾಪಾಲು) ಮಾತ್ರೆ ವ್ಯಾಪಕವಾಗಿ ಮಾರಾಟವಾಗುತ್ತಿದ್ದು, ಇದು ಯುವಜನತೆಯನ್ನು ಹಲವು ರೋಗಗಳಿಗೆ ನೂಕುತ್ತಿದೆ ಎಂದು ಚಿತ್ರನಟ ದುನಿಯಾ ವಿಜಯ್ ತಿಳಿಸಿದ್ದಾರೆ. ಅಲ್ಲದೆ, ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದ್ದಾರೆ.
ಭೀಮಾ ಬಿಡುಗಡೆ ಬೆನ್ನಲ್ಲೇ ಸ್ಟಿಂಗ್ ಆಪರೇಷನ್
ಡ್ರಗ್ಸ್ ಕರಾಳ ದಂಧೆಯ ಕುರಿತ ಕಥಾ ಹಂದರವುಳ್ಳ ಭೀಮಾ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೆ ದುನಿಯಾ ವಿಜಯ್ ಬೆಂಗಳೂರಿನ ವಿವಿಧೆಡೆ ಸುತ್ತಾಡಿ ಸ್ಟಿಂಗ್ ಆಪರೇಷನ್ ನಡೆಸಿ ಯಾರಿಗೆ ಬೇಕಾದರೂ ಡ್ರಗ್ಸ್ ಸುಲಭವಾಗಿ ಸಿಗಲಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನೋವು ನಿವಾರಕ ಮಾತ್ರೆಗಳನ್ನೂ ಕೆಲವರು ಡ್ರಗ್ಸ್ ರೂಪದಲ್ಲಿ ತೆಗೆದುಕೊಳ್ಳುವ ಅಂಶಗಳನ್ನು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.