70th National Film Awards; ಮಲಯಾಳದ ಆಟ್ಟಂ ಅತ್ಯುತ್ತಮ ಸಿನೆಮಾ
Team Udayavani, Aug 17, 2024, 6:39 AM IST
ಹೊಸದಿಲ್ಲಿ: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಈ ಬಾರಿ ದಕ್ಷಿಣದ ಚಿತ್ರಗಳು ಹೆಚ್ಚು ಪ್ರಶಸ್ತಿ ಗಳಿಸಿರುವುದು ವಿಶೇಷ. ಮಲಯಾಳದ ಆಟ್ಟಂ, ಕನ್ನಡದ ಕಾಂತಾರ, ಕೆಜಿಎಫ್-2, ತಮಿಳಿನ ತಿರುಚಿತ್ರಂಬಲಂ ಸೇರಿ ಹಲವು ಪ್ರಾದೇಶಿಕ ಚಿತ್ರಗಳೇ ಈ ಬಾರಿ ಪ್ರಶಸ್ತಿ ಗಳಿಸಿಕೊಂಡಿವೆ.
ಆನಂದ್ ಏಕರ್ಷಿ ನಿರ್ದೇಶನದ “ಆಟ್ಟಂ’ ಮಲಯಾಳದ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನು ಹಿಂದಿಯ “ಊಂಚಾಯಿ’ ಚಿತ್ರಕ್ಕಾಗಿ ಸೂರಜ್ ಬರ್ಜತ್ಯ ಪಡೆದಿದ್ದಾರೆ. ಅತ್ಯುತ್ತಮ ನಟ ಕನ್ನಡದ ರಿಷಬ್ ಶೆಟ್ಟಿಯಾದರೆ, ಅತ್ಯುತ್ತಮ ನಟಿ ವಿಭಾಗದಲ್ಲಿ ತಮಿಳಿನ ‘ತಿರುಚಿತ್ರಂಬಲಂ’ಗಾಗಿ ನಿತ್ಯಾ ಮೆನನ್ ಹಾಗೂ ಗುಜರಾತಿ ಚಿತ್ರ “ಕಛ್ ಎಕ್ಸ್‌ಪ್ರೆಸ್’ ಗಾಗಿ ಮಾನಸಿ ಪರೇಖ್ ಜಂಟಿಯಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಅತ್ಯುತ್ತಮ ಹಿನ್ನಲೆ ಗಾಯಕ ವಿಭಾಗದಲ್ಲಿ ಹಿಂದಿಯ ಬ್ರಹ್ಮಾಸ-1 ಚಿತ್ರದ “ಕೇಸರಿಯಾ’ ಹಾಡಿಗೆ ಅರಿಜಿತ್ ಸಿಂಗ್‌ಗೆ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಹಿನ್ನಲೆ ಗಾಯಕಿ ವಿಭಾಗದಲ್ಲಿ ಮಲಯಾಳದ ಸೌದಿ ವೆಲ್ಲಕ್ಕ ಚಿತ್ರದ “ಚಾಯುಂ ವೇಯಿಲ್’ ಹಾಡಿಗೆ ಬಾಂಬೆ ಜಯಶ್ರೀ ಅವರಿಗೆ ಲಭಿಸಿದೆ. ತಮಿಳಿನ ಪೊನ್ನಿ ಯಿನ್ ಸೆಲ್ವನ್-1ರ ಅತ್ಯುತ್ತಮ ಛಾಯಾಗ್ರಹಣಕ್ಕೆ ರವಿ ವರ್ಮನ್, ಅತ್ಯುತ್ತಮ ಚಿತ್ರಕಥಗೆ ಮಲಯಾಳದ ಆಟ್ಟಂ ಚಿತ್ರದ ಆನಂದ್ ಏಕರ್ಷಿ, ಅತ್ಯುತ್ತಮ ಸಂಗೀತ ನಿರ್ದೇಶನಕ್ಕೆ ಹಿಂದಿಯ ಬ್ರಹ್ಮಾಸ್ತ್ರ-1 ಪ್ರಶಸ್ತಿಗೆ ಪಾತ್ರವಾ ಗಿದೆ. ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಹರಿಯಾಣ ಚಿತ್ರ ಫೌಜಾದ ಪವನ್ ರಾಜ್ ಮಲ್ಹೋತ್ರಾಗೆ ಲಭಿಸಿದ್ದು, ಪೋಷಕ ನಟಿ ಹಿಂದಿಯ ಊಂಚಾಯಿ ಚಿತ್ರಕ್ಕೆ ನೀನಾ ಗುಪ್ತಾ ಅವರಿಗೆ ದೊರಕಿದೆ. ಮನೋಜ್ ಬಾಜಪೇಯಿ ಅಭಿನಯದ ಹಿಂದಿಯ ಗುಲ್‌ಮೊಹರ್ ಚಿತ್ರ ವಿಶೇಷ ಉಲ್ಲೇಖಿತ ಚಿತ್ರವಾಗಿದೆ.
ಫೀಚರ್ ವಿಭಾಗ
ಅತ್ಯುತ್ತಮ ಚಲನಚಿತ್ರ: ಆಟ್ಟಂ(ಮಲಯಾಳ)
ಜನಪ್ರಿಯ ಚಿತ್ರ: ಕಾಂತಾರ(ಕನ್ನಡ)
ಅತ್ಯುತ್ತಮ ನಿರ್ದೇಶಕ: ಸೂರಜ್ ಭರ್ಜತ್ಯ(ಊಂಚಾಯಿ-ಹಿಂದಿ)
ಪೋಷಕ ನಟಿ- ನೀನಾ ಗುಪ್ತಾ
ಅತ್ಯುತ್ತಮ ನಟಿ: ನಿತ್ಯ ಮೆನನ್(ತಿರುಚಿತ್ರಂಬಲಂ-ತಮಿಳು), ಮಾನಸಿ ಪರೇಖ್(ಕಛ್ ಎಕ್ಸ್‌ಪ್ರೆಸ್-ಗುಜರಾತಿ)
ಅತ್ಯುತ್ತಮ ಚೊಚ್ಚಲ ನಿರ್ದೇಶನ:
ಪ್ರಮೋದ್ ಕುಮಾರ್(ಫೌಜಾ-ಹರಿಯಾಯಣ್ವಿ)
ನಾನ್ ಫೀಚರ್ ವಿಭಾಗ
ಅತ್ಯುತ್ತಮ ಚಿತ್ರ: ಆಯೆನಾ(ಹಿಂದಿ)
ಅತ್ಯುತ್ತಮ ಸಾಕ್ಷ್ಯಚಿತ್ರ: ಮರ್ಮರ್ಸ್ ಆಫ್ ದಿ ಜಂಗಲ್(ಮರಾಠಿ)
ಅತ್ಯುತ್ತಮ ಜೀವನಚರಿತ್ರೆ: ಆಣಖೀ ಏಕ್ ಮೊಹೆಂಜೋದಾರೊ(ಮರಾಠಿ)
ಅತ್ಯುತ್ತಮ ಸಂಗೀತ ನಿರ್ದೇಶನ: ವಿಶಾಲ್ ಭಾರಧ್ವಾಜ್ (ಫುರ್ಸತ್-ಹಿಂದಿ)
ಅತ್ಯುತ್ತಮ ನಿರೂಪಣೆ: ಮರ್ಮರ್ಸ್ ಆಫ್ ದಿ ಜಂಗಲ್(ಮರಾಠಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.