MUDA Case: ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಮೇಯವೇ ಇಲ್ಲ..: ಲಕ್ಷ್ಮೀ ಹೆಬ್ಬಾಳ್ಕರ್
Team Udayavani, Aug 17, 2024, 11:52 AM IST
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ರಾಜಕೀಯ ಪಿತೂರಿ ಅಜೆಂಡಾ. ಸಿದ್ದರಾಮಯ್ಯ ಸಾಹೇಬರು ರಾಜೀನಾಮೆ ಕೊಡುವ ಪ್ರಮೇಯವೇ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ (Lakshmi Hebbalkar) ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಇನ್ನೂ ರಿಸಲ್ಟ್ ಬಂದಿಲ್ಲ, ಅಷ್ಟರಲ್ಲಿ ಇದನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ರಾಜ್ಯದ ರಾಜ್ಯಪಾಲರ ಮೇಲೆ ನಂಬಿಕೆ ಇತ್ತು. ಸಾಂವಿಧಾನಿಕ ಸ್ಥಾನದಲ್ಲಿ ಕುಳಿತ, ಸಂವಿಧಾನ ಎತ್ತಿ ಹಿಡಯಬೇಕಾದ ರಾಜ್ಯಪಾಲರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯೇತರ ರಾಜ್ಯಗಳಿಗೆ ಬಿಜೆಪಿಯವರು ತೊಂದರೆ ಕೊಡುತ್ತಿದ್ದಾರೆ. ಬಿಜೆಪಿ ಇಲ್ಲದ ರಾಜ್ಯಗಳಲ್ಲಿ ಇಡಿ, ಐಟಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ರಾಜೀನಾಮೆ ಕೊಡುವ ಪ್ರಮೇಯ ಇಲ್ಲ, ಅವಶ್ಯಕತೆಯೂ ಇಲ್ಲ. ಇದರಿಂದ ಸರ್ಕಾರದ ಮೇಲೆ ಏನೂ ತೊಂದರೆಯಾಗಲ್ಲ. ಇದು ರಾಜಕೀಯ ಎಂದು ಗೊತ್ತು, ನಾವು ರಾಜಕೀಯವಾಗಿ ಹೇಳುತ್ತೇವೆ. ಕರ್ನಾಟಕದಿಂದ ಈ ಪ್ರಕರಣದಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದರು.
ಯಡಿಯೂರಪ್ಪ ವಿಷಯದಲ್ಲಿ ಬಿಜೆಪಿಯವರು ಚೂರಿ ಹಾಕಿದ್ದಾರೆ. ಮೂರು ಬಾರಿ ಅವರಿಗೆ ಚೂರಿ ಹಾಕಿದ್ದು ನಾವಲ್ಲ. ಯಡಿಯೂರಪ್ಪ ಅವರನ್ನು ಬಿಜೆಪಿಯವರೇ ಜೈಲಿಗೆ ಕಳುಹಿಸಿದ್ದು. ಸಿದ್ದರಾಮಯ್ಯ ಸಾಹೇಬರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಅವರ ಕೈಗೆ ಮೊದಲು ಮಸಿ ಬಳಿದಿದ್ದನ್ನು ನೋಡಿಕೊಳ್ಳಬೇಕು ಎಂದು ಹೆಬ್ಬಾಳ್ಕರ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.