Raksha Bandhan 2024: ಅಣ್ಣ-ತಂಗಿಯರ ಬಾಂಧವ್ಯ ಬಂಧನದ ಹಬ್ಬಗಳು

ರಕ್ಷಿಸುವವರಿಗೆ ರಾಖಿಯ ಬಂಧನ

Team Udayavani, Aug 18, 2024, 8:03 AM IST

Raksha Bandhan 2024: ಅಣ್ಣ-ತಂಗಿಯರ ಬಾಂಧವ್ಯ ಬಂಧನದ ಹಬ್ಬಗಳು

ಶ್ರಾವಣ ಮಾಸದ ಹಬ್ಬಗಳ ಸಾಲು ಪ್ರತೀ ವರ್ಷವೂ ಮಾಸದ ಹೊಸ ಹೊಸ ನೆನಪುಗಳನ್ನು ಹೊತ್ತು ಬರುತ್ತದೆ, ಹೊತ್ತು ಸಾಗುತ್ತದೆ. ನಾನಾ ಹಬ್ಬಗಳೇ ಈ ಸಾಲಿನಲ್ಲಿ ಬಂದರೂ ಸಹೋದರ-ಸಹೋದರಿಯರ ಬಾಂಧವ್ಯದ ಕುರುಹಾದ ಹಬ್ಬಗಳು ಸಂಬಂಧಗಳನ್ನು ಗಟ್ಟಿಯಾಗಿ ಇರಿಸಲು ಸಾಂಕೇತಿಕವಾಗಿ ಇರುವ ಹಬ್ಬಗಳು. ಎಲ್ಲಕ್ಕೂ ಒಂದು ಧಾರ್ಮಿಕ ಹಿನ್ನೆಲೆಯಿಟ್ಟುಕೊಂಡೇ ಹಬ್ಬಗಳನ್ನು ರೂಪಿಸಿದ್ದರೂ, ಅದರ ಹಿಂದಿನ ಒಂದು ಗೂಡಾರ್ಥ ಮತ್ತು ಗಾಢವಾದ ಅರ್ಥವನ್ನು ಪಾಲಿಸಿದರೆ, ಅದು ಧಾರ್ಮಿಕಕ್ಕಿಂತ ಮಾನವೀಯತೆ ಮೌಲ್ಯ ಉಳ್ಳದ್ದಾಗಿದೆ ಎಂದು ಅರಿಯಲು ಹೆಚ್ಚು ಶ್ರಮಪಡಬೇಕಿಲ್ಲ.

ಕರ್ನಾಟಕದ ಪ್ರಾಂತದಲ್ಲಿ ನಾಗರಪಂಚಮಿ ಎಂದು ಆಚರಿಸುವ ಹಬ್ಬದ ದಿನ ಹುತ್ತಕ್ಕೆ ಹಾಲೆರೆದು ಬರುವ ಪದ್ಧತಿ ಇದೆ. ಕಾಲ ಬದಲಾಗಿದೆ ಎಂಬ ಸಬೂಬು ಹೇಳುತ್ತಾ, ನಾಗರಿಕತೆ ಹೆಚ್ಚಾಗಿರುವ ಈ ಕಾಲದಲ್ಲಿ ಹುತ್ತವನ್ನು ಹುಡುಕಿಕೊಂಡು ಹೋಗುವುದೆಲ್ಲಿ ಎಂಬ ನಗ್ನಸತ್ಯವನ್ನೇ ಮನದಲ್ಲಿ ಇಟ್ಟುಕೊಂಡು, ಸಂಪ್ರದಾಯ ಮುರಿಯದವರು, ನಾಗಪ್ಪನ ವಿಗ್ರಹಕ್ಕೋ ಅಥವಾ ಮಣ್ಣಿನಿಂದ ಮಾಡಿದ ಮೂರ್ತಿಗೂ ತನು ಎರೆಯುವ ಶಾಸ್ತ್ರ ಮಾಡುತ್ತಾರೆ. ಪ್ರಮುಖವಾಗಿ ಬೆನ್ನಲ್ಲಿ ಬಿದ್ದ ಅಣ್ಣ-ತಮ್ಮಂದಿರು ಸದಾ ತಣ್ಣಗಿರಲಿ ಎಂದು ಅವರ ಬೆನ್ನಿಗೆ ಹಾಲು ಹಚ್ಚುವ ಶಾಸ್ತ್ರವಿದೆ.

ಕೆಲವೆಡೆ ಹಾಲು-ತುಪ್ಪ, ಕೆಲವೆಡೆ ಹಾಲು ಮತ್ತು ಹುತ್ತದ ಮಣ್ಣು ಹೀಗೆ ಆಚರಣೆಗಳೂ ಇವೆ. ಮುಖ್ಯವಾಗಿ ಸೋದರಿಯರ ತುಂಬು ಹೃದಯದ ಹಾರೈಕೆಯನ್ನು ಅಕ್ಷರಶಃ ನಿಜವಾಗಿಸುವ ಹಬ್ಬ. ಕರ್ನಾಟಕದಲ್ಲಿ ಹುತ್ತಕ್ಕೆ ಹಾಲನ್ನು ತನು ಎರೆಯುವ ಪದ್ಧತಿಯಂತೆಯೇ ಮಹಾರಾಷ್ಟ್ರದ “ಬತ್ತೀಸ ಶಿರಾಳ’ ಎಂಬ ಊರಿನಲ್ಲಿ ನಿಜ ನಾಗರವನ್ನೇ ಪೂಜಿಸುತ್ತಾರೆ.

ಮೇಲೆ ಒಂದು ವಿಷಯ ಹೇಳಿದೆ. ಅದು ತಪ್ಪು ಅಂತ ನನಗೆ ಗೊತ್ತಿದ್ದೂ ಹೇಳಿದ್ದು ಯಾಕೆ ಅಂದ್ರೆ ನನಗೆ ಗೊತ್ತಿರುವುದನ್ನು ಹಂಚಿಕೊಳ್ಳಲು ಮತ್ತು ತಪ್ಪೋ, ಸರಿಯೋ ತಿಳಿದುಕೊಳ್ಳಲು. “ಬೆನ್ನಲ್ಲಿ ಬಿದ್ದ ಅಣ್ಣ-ತಮ್ಮ’ ಎಂಬ ಪ್ರಯೋಗ ಸರಿಯಲ್ಲ ಎಂಬುದೇ ಈ ವಿಷಯ.

ಒಡಹುಟ್ಟಿದವರು ಎಂದಾಗ ಅದು ಅಣ್ಣ, ತಮ್ಮ, ಅಕ್ಕ, ತಂಗಿ ಹೀಗೆ ತಂದೆ-ತಾಯಿಯ ಸಂತತಿಯ ಯಾವುದೇ ಸಂಬಂಧ ಆಗಿರಬಹುದು. ಒಬ್ಬರ ಅನಂತರ ಹುಟ್ಟಿದವರು ಬೆನ್ನಲ್ಲಿ ಬಿದ್ದವರು ಎಂದರ್ಥ. ಸಾಲಿನಲ್ಲಿ ನಿಂತಾಗ ನಮ್ಮ ಹಿಂದಿರುವವರು ಒಂದರ್ಥದಲ್ಲಿ ಬೆನ್ನಲ್ಲಿ ಬಿದ್ದವರು. ನಮ್ಮ ಅನಂತರದವರು ಬೆನ್ನಲ್ಲಿ ಬಿದ್ದವರು ಆದರೆ ಅಣ್ಣ ಅಥವಾ ಅಕ್ಕ ಹೇಗೆ ಬೆನ್ನಲ್ಲಿ ಬಿದ್ದವರಾಗುತ್ತಾರೆ? ಅವರ ಬೆನ್ನ ಹಿಂದೆ ನಾವು ಬಿದ್ದವರು ಎಂಬುದು ಸರಿ. ವಿಕ್ರಮನ ಬೆನ್ನಲ್ಲಿ ಬಿದ್ದವನು ಬೇತಾಳಾ ಎಂಬುದು ಸುಮ್ಮನೆ ಹಾಗೆಯೇ ಹೇಳಿದ ಮಾತು ಆಯ್ತಾ?

ನಾಗರಪಂಚಮಿಯ ದಿನ ಮಗದೊಂದು ವಿಶೇಷವಿದೆ. ಕೆಲವರು ಉಪವಾಸ ಮಾಡುತ್ತಾರೆ. ಪ್ರಮುಖವಾಗಿ ಹಲವು ವಿಷಯಗಳು ಅಂದು ನಿಷೇಧ. ಹೆಚ್ಚುವುದು, ಕೊಯ್ಯುವುದು, ಪದಾರ್ಥಗಳನ್ನು ಕರಿಯುವುದು, ಕುದಿಸುವುದು ಇತ್ಯಾದಿಗಳನ್ನು ಮಾಡಕೂಡದು ಎಂಬ ನಿಯಮವಿದೆ. ಕಾಲ ಒಂದಿತ್ತು. ಗ್ರಾಮೀಣ ಪ್ರದೇಶ ಎಂದರೆ ಹಾವುಗಳು ಎಲ್ಲೆಲ್ಲಿಯೂ ಇರಬಹುದು. ಯಾವುದೇ ರೀತಿಯಲ್ಲಿ ಆಹಾರ ತಯಾರಿಸುವ ಪದ್ಧತಿಯನ್ನು ಅನುಸರಿಸಿದರೂ ಹಾವುಗಳಿಗೆ ಅಪಾಯವಾಗಬಹುದು ಎಂಬುದು ಉಪವಾಸದ ಒಂದು ಕಾರಣ. ಹಲವು ರೀತಿಯನ್ನು ಅನುಸರಿಸಿ ಆಹಾರ ತಯಾರಿಸುವಾಗಲೂ ಅರಿಯದೇ ಆದ ತಪ್ಪಿನಿಂದ ಎಲ್ಲೋ ಸೇರಿದ ಹಾವುಗಳಿಗೆ ಅಪಾಯ ಒದಗಬಹುದು ಎಂಬುದೂ ಅನಾಹುತ ತಪ್ಪಿಸಲು ಅನುಸರಿಸುವ ಮಾರ್ಗ.

ಈ ಅಣ್ಣ-ತಂಗಿಯರ ಹಬ್ಬವು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರವೇ? ಇಲ್ಲ ಬಿಡಿ, ಭಾರತಾದ್ಯಂತ ಯಾವುದೇ ಪ್ರಾಂತವಾದರೂ ಸಹೋದರ-ಸಹೋದರಿಯರು ಇದ್ದೇ ಇರುವರು ತಾನೇ? ಉತ್ತರ ಭಾರತದ ಈ ಹಬ್ಬವನ್ನು “ರಕ್ಷಾಬಂಧನ’ ಎಂದು ಕರೆಯುತ್ತಾರೆ.

ರಕ್ಷಾ ಬಂಧನ ಎಂಬುದು ರಕ್ಷಣೆಗಾಗಿ ಇರುವ ಬಂಧನ. ತನ್ನನ್ನು ಸದಾ ರಕ್ಷಿಸುವ ಅಣ್ಣ ಅಥವಾ ತಮ್ಮನ ಮುಂಗೈಗೆ ಒಡಹುಟ್ಟಿದ ಹೆಂಗಳು ಕಟ್ಟುವ ಪವಿತ್ರ ಬಂಧನವೇ ಈ ರಕ್ಷಾಬಂಧನ. ಕೈಗೆ ಕಟ್ಟುವ ಈ ದಾರವನ್ನು ಪೂಜಿಸಿ, ಸಹೋದರರಿಗೆ ಕಟ್ಟಿ, ಹಿರಿಯರಾದರೆ ಆಶೀರ್ವಾದ ಪಡೆದು ಅಥವಾ ಕಿರಿಯಾರಾದರೆ ಪ್ರೀತಿಯಿಂದ ಬೆನ್ನಿಗೆ ಗುದ್ದಿ, ಒಟ್ಟಾರೆ ಅವರಿಂದ ಉಡುಗೊರೆಯ ಹಣ ಅಥವಾ ಉಡುಗೊರೆಯ ರೂಪದಲ್ಲಿ ಏನಾದರೂ ಪಡೆಯುತ್ತಾರೆ.

ಯಾವುದೇ ಹಬ್ಬವಾಗಲಿ ಕಾಲ ಕಳೆದಂತೆ ಅದಕ್ಕೊಂದು ಭಿನ್ನ ರೂಪ ತಳೆಯೋದು ಸಹಜ. ಒಂದು ಹಂತದಲ್ಲಿ ಬರೀ ದಾರವನ್ನೇಕೆ ಕಟ್ಟೋದು ಎಂದು ಕೊಂಚ ಅದಕ್ಕೊಂದು ಭಿನ್ನ ರೂಪ ಕೊಟ್ಟಿದ್ದೇ ಇಂದು ಬಗೆಬಗೆಯ, ವಿವಿಧ ರಂಗಿನ, ಅತ್ಯಾಕರ್ಷಕವಾದ ಮತ್ತು ಹಲವೊಮ್ಮೆ ಪ್ರತಿಷ್ಠೆಯ ಸಂಕೇತವೂ ಆಗುವಷ್ಟು ಬೆಲೆಯುಳ್ಳ ರಾಖಿಯಾಗಿದೆ. ಸಹೋದರಿಯರು ಸಹೋದರರಿಗೆ ಕಟ್ಟುವುದು ಈ ರಾಖಿ ಎಂಬುದೇ ಶಾಸ್ತ್ರವಾಗಿರುವಾಗ ರಾಖಿ ಎಂಬುದು ಮಗದೊಂದು ರೂಪವೂ ತಾಳಿತು.

ಬಾಂಧವ್ಯದಲ್ಲಿ ಸಂಬಂಧವೇ ಇಲ್ಲದಿದ್ದರೂ ಒಂದು ಹೆಣ್ಣು ಮಗದೊಬ್ಬ ಗಂಡಿನ ಕೈಗೆ ರಾಖಿ ಕಟ್ಟಿದಳು ಎಂದರೆ ಅವರ ಸಹೋದರ-ಸಹೋದರಿಯಾಗುತ್ತಾರೆ. ಕಾಲೇಜು ದಿನಗಳಲ್ಲಂತೂ ಗಂಡು ಮಕ್ಕಳಿಗೆ ಇದೊಂದು ಕರಾಳದಿನ ಎನ್ನಬಹುದು. ಕಾಲೇಜಿಗೆ ಅಂತ ಹೊರಟರೂ ಕಾಲೇಜಿನ ಕಾಂಪೌಂಡ್‌ ಒಳಗೂ ಬಾರದಂತೆ ಎಲ್ಲಿಗೋ ಹೋಗಿಬಿಡೋದು ಇರುತ್ತಿತ್ತು. ಕಾಲೇಜಿನ ಬ್ಯೂಟಿ ಕ್ವೀನ್‌ ಅಂತ ರೇಗಿಸುವುದು ಅಥವಾ ಮನಸ್ಸಿನಲ್ಲೇ ಮಂಡಿಗೆ ಹಾಕುತ್ತಿದ್ದವರಿಗೆ ಅವಳು ರಾಖಿ ಕಟ್ಟಿದಳು ಎಂದರೆ ಮುಗೀತು ಅಥವಾ ಕಟ್ಟಬಹುದು ಎಂಬ ಭೀತಿಯಲ್ಲೇ ದಿನ ಕಳೆಯುವವರೂ ಉಂಟು.

ಶ್ರೀಕೃಷ್ಣ ಪರಮಾತ್ಮ ಮತ್ತು ದ್ರೌಪದಿಯರು ಸಖ ಮತ್ತು ಸಖಿಯರು. ಇವರ ಸಖ್ಯ ಅಥವಾ ಸ್ನೇಹದ ಕುರಿತಾದ ಒಂದು ವಿಶೇಷ ಕಥೆಯಿದೆ. ಒಮ್ಮೆ ಕೃಷ್ಣನು ಗಾಳಿಪಟ ಹಾರಿಸುತ್ತಿರಲು ಗಾಳಿಪಟದ ಆ ದಾರ ಅವನ ಬೆರಳನ್ನು ಕುಯ್ದಿದಂತೆ. ರಕ್ತವು ದಳದಳ ಅಂತ ಸುರೀತು. ಆ ಸಮಯದಲ್ಲಿ ಅಲ್ಲೇ ಇದ್ದ ದ್ರೌಪದಿಯು ಥಟ್ಟನೆ ತನ್ನ ವಸ್ತ್ರವನ್ನೇ ಹರಿದು ಬೆರಳಿಗೆ ಕಟ್ಟಿದಳು. ವಸ್ತ್ರವನ್ನು ಹರಿಯುವಾಗ ಆ ವಸ್ತ್ರದ ಬೆಲೆ ಏನು? ಎತ್ತ? ಎಂದು ಒಂದಿನಿತೂ ಆಲೋಚಿಸದೇ ಕೇವಲ ತನ್ನ ಸ್ನೇಹಿತನ ಕ್ಷೇಮದ ಬಗ್ಗೆ ಆಲೋಚಿಸಿದಳು. ಇಂಥಾ ನಿಸ್ವಾರ್ಥ ಸೇವೆಗೆ ಮೆಚ್ಚಿದ ಪರಮಾತ್ಮ ಅವಳಿಗೆ ವಾಗ್ಧಾನ ನೀಡುತ್ತಾನೆ. ನಿನ್ನ ಕಷ್ಟ ಕಾಲದಲ್ಲಿ ಒಮ್ಮೆ ನನ್ನನ್ನು ಕೂಗಿದರೆ ಸಾಕು, ಆ ಕ್ಷಣದಲ್ಲಿ ಅಲ್ಲಿದ್ದು ನಿನ್ನ ಯೋಗಕ್ಷೇಮ ನೋಡಿಕೊಳ್ಳುವೆ ಅಂತ. ಒಂದು ತುಂಡು ವಸ್ತ್ರ ಕೊಟ್ಟವಳ ಮಾನವನ್ನು ರಾಜಸಭೆಯಲ್ಲಿ ವಸ್ತ್ರಾಪಹರಣ ಸಮಯದಲ್ಲಿ ವಸ್ತ್ರದ ಮೇಲೆ ವಸ್ತ್ರಗಳನ್ನು ನೀಡಿ ಅವಳ ಮಾನವನ್ನು ಕಾಪಾಡಿದ. ತಂಗಿಯ ಸಂಕಷ್ಟದ ಸಮಯದಲ್ಲಿ ಅಣ್ಣನಾಗಿ ಬಂದು ಕಾಪಾಡಿದ ಈ ಸಂದರ್ಭವೇ ಮುಂದೆ ಅಣ್ಣ-ತಂಗಿಯರ ಬಾಂಧವ್ಯದ ಹಬ್ಬವಾಯಿತು ಎಂಬ ಕಥೆ ಇದೆ.

ಶ್ರಾವಣ ಮಾಸದ ಈ ಹಬ್ಬಗಳನ್ನು ದಾಟಿ ಕಾರ್ತಿಕ ಮಾಸಕ್ಕೆ ಅಡಿಯಿಟ್ಟಾಗಲೂ ಈ ಅಣ್ಣ-ತಂಗಿಯರ ಹಬ್ಬ ಮುಗಿದಿರುವುದಿಲ್ಲ ಎಂಬುದು ಸಂತಸದ ವಿಷಯ. ನರಕಾಸುರನ ವಧೆಯಾದ ಅನಂತರ ಶ್ರೀಕೃಷ್ಣ ತನ್ನ ತಂಗಿ ಸುಭದ್ರೆಯ ಮನೆಗೆ ಬರುತ್ತಾನೆ. ದಣಿದು ಬಂದವನನ್ನು ಆದರದಿಂದ ಸ್ವಾಗತಿಸಿ, ಹೂವುಗಳು ಮತ್ತು ಗಂಧದೃವ್ಯಗಳೇ ಮೊದಲಾದ ಅಲಂಕಾರ ವಸ್ತುಗಳಿಂದ ಅವನನ್ನು ಸಿಂಗರಿಸಿ, ಸಿಹಿತಿಂಡಿಗಳನ್ನು ನೀಡಿ ಅನಂತರ ಹಣೆಗೆ ತಿಲಕವನ್ನು ಇಡುತ್ತಾಳೆ. ಈ ಶುಭ ಸಂದರ್ಭವೇ ಭಾಯಿ ದೂಜ್‌ ಎಂಬ ಹಬ್ಬಕ್ಕೆ ನಾಂದಿಯಾಯಿತು ಎಂಬ ನಂಬಿಕೆ ಇದೆ.

ಈ ಹಬ್ಬಕ್ಕೆ ನಾನಾ ಹೆಸರುಗಳೂ ಇದೆ. ಭಗಿನಿ ಹಸ್ತ ಭೋಜನಮು ಎಂದು ಆಂಧ್ರದಲ್ಲೂ, ಯಮ-ಯಮುನೆಯರ ಭೇಟಿಯ ಸಂಕೇತವಾಗಿ ಯಮ ದ್ವಿತೀಯ ಎಂಬ ಹೆಸರಲ್ಲೂ ಮಿಕ್ಕ ವಿವಿಧ ನಾಮದಿಂದ ಗೋವಾ, ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕದಲ್ಲಿ ಆಚರಣೆ ನಡೆಯುತ್ತದೆ. ಬಿಹಾರ ಮೊದಲಾದ ಸ್ಥಳಗಳಲ್ಲಿ, ಒಡಹುಟ್ಟಿದ ಅಣ್ಣ-ತಮ್ಮಂದಿರು ಇರದ ಹೆಣ್ಣುಗಳು ಚಂದ್ರನನ್ನೇ ಪೂಜಿಸುತ್ತಾರೆ. ಹಾಗಾಗಿ ತಾಯಿ ತನ್ನ ಮಕ್ಕಳಿಗೆ ಚಂದ್ರನನ್ನು ತೋರಿಸಿ “ಚಂದಮಾಮ’ ಎಂದಿರಬಹುದೇ?

ಎಲ್ಲಕ್ಕಿಂತ ಭಿನ್ನವಾದ ಮಗದೊಂದು ಆಚರಣೆ ಇದೆ. ದೇಶವನ್ನು ಸಂರಕ್ಷಣೆ ಮಾಡುವವರನ್ನು ಅಣ್ಣ-ತಮ್ಮಂದಿರೆಂದು ಭಾವಿಸಿ ಅವರ ಕೈಗೆ ರಾಖಿ ಕಟ್ಟುವ ಈ ಆಚರಣೆ ಒಂದು ಉತ್ತಮ ಸಂಪ್ರದಾಯ. ರಾಜಕೀಯ ನಾಯಕರೂ ಹೀಗೆ ರಕ್ಷಾಬಂಧನವನ್ನು ಕಟ್ಟಿಸಿಕೊಳ್ಳುತ್ತಾರೆ. ತಮಗೆ ರಕ್ಷಣೆ ನೀಡುವವರಿಗೆ, ನಾಗರಿಕರನ್ನು ರಕ್ಷಿಸಿದವರಿಗೆ, ದೇಶವನ್ನು ರಕ್ಷಿಸಿದವರಿಗೆ ರಾಖಿ ಬಂಧನದಿಂದ ಸ್ನೇಹ ಬಾಂಧವ್ಯದಲ್ಲಿ ಬೆಸೆಯುವ ಆಚರಣೆಯನ್ನು ಯಾವ ಪ್ರಾಂತದವರು ಮಾಡಿದರೇನು? ಉದ್ದೇಶವಂತೂ ಒಳಿತೇ ತಾನೇ? ಬಾಂಧವ್ಯ ಉಳಿಸಿಕೊಳ್ಳುವ ಯತ್ನವನ್ನು ದಿನನಿತ್ಯದಲ್ಲಿ ಮಾಡೋಣ.

ಟಾಪ್ ನ್ಯೂಸ್

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.