Bengaluru: ಕದ್ದ ಒಡವೆಯನ್ನು ಪ್ರೇಯಸಿಗೆ ಕೊಟ್ಟಿದ್ದ ವ್ಯಕ್ತಿ ಸೇರಿ ಇಬ್ಬರ ಸೆರೆ
Team Udayavani, Aug 17, 2024, 1:26 PM IST
ಬೆಂಗಳೂರು: ಮನೆಗಳ್ಳತನ ಮಾಡಿದ ಚಿನ್ನನ್ನು ಪ್ರೇಯಸಿಗೆ ಹಾಗೂ ಸ್ನೇಹಿತನಿಗೆ ನೀಡಿದ್ದ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಿರುವ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು, 31 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಕಾರ್ತಿಕ್ (36) ಹಾಗೂ ಆತನ ಸ್ನೇಹಿತ ರಘು (26) ಬಂಧಿತರು.
ಬಂಧಿತರಿಂದ 31 ಲಕ್ಷ ರೂ. ಮೌಲ್ಯದ 470 ಗ್ರಾಂ ಚಿನ್ನಾಭರಣ ಮತ್ತು 3 ಕೆ.ಜಿ.ಬೆಳ್ಳಿಯ ಗಟ್ಟಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಜು.8ರಂದು ಕೆ.ಎಸ್.ಲೇಔಟ್‌ನ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಕಾರ್ತಿಕ್ ಸಿಕ್ಕಿ ಬಿದ್ದಿದ್ದ. ಆತ ಕೊಟ್ಟ ಮಾಹಿತಿ ಆಧರಿಸಿ ಆತನೊಂದಿಗೆ ಕಳ್ಳತನಕ್ಕೆ ಕೈ ಜೋಡಿಸುತ್ತಿದ್ದ ಆರೋಪಿ ರಘುವನ್ನು ಬಂಧಿಸಿದ್ದಾರೆ.
ಕಳವು ಮಾಡಿದ ಕೆಲವು ಚಿನ್ನಾಭರಣಗಳನ್ನು ಬೆಂಗಳೂರು ನಗರ ಮತ್ತು ಹೈದರಾಬಾದ್‌ನ ವಿವಿಧ ಜ್ಯೂವೆಲ್ಲರಿ ಅಂಗಡಿಗಳಲ್ಲಿ ಅಡಮಾನ ಇಟ್ಟಿದ್ದೆ. ಇನ್ನೂ ಕೆಲವನ್ನು ಪ್ರೇಯಸಿ ಹಾಗೂ ಸ್ನೇಹಿತ ರಘುಗೆ ನೀಡಿರುವುದಾಗಿ ವಿಚಾರಣೆಯಲ್ಲಿ ಕಾರ್ತಿಕ್ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಆರೋಪಿ ರಘು, ಆತನ ಪ್ರೇಯಸಿಯ ಬಳಿಯಿದ್ದ ಚಿನ್ನ, ಅಡವಿಟ್ಟಿದ್ದ ಆಭರಣ ಸೇರಿ ಒಟ್ಟು 470 ಗ್ರಾಂ ಚಿನ್ನಾಭರಣ, 3 ಕೆ.ಜಿ.ಬೆಳ್ಳಿಯನ್ನು ವಶ ಪಡಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ
Kasaragod: 300 ಪವನ್ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ
Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ
Puttur: ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್ ಚೋಲ್‌ಗೆ ಬೇಡಿಕೆ
IPL Auction: ಗುಜರಾತ್ ಟೈಟಾನ್ಸ್ ಪಾಲಾದ ಸಿರಾಜ್; ಆರ್‌ಸಿಬಿಗೆ ಹೃದಯಸ್ಪರ್ಶಿ ಸಂದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.