70th National Film Awards; ‘ಮಧ್ಯಂತರ’ ಕಿರುಚಿತ್ರಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿ

ನಿರ್ದೇಶಕ ಬಸ್ತಿ ದಿನೇಶ್‌ ಶೆಣೈ ಬಂಟ್ವಾಳ-ಪಾಣೆಮಂಗಳೂರಿನವರು...

Team Udayavani, Aug 17, 2024, 5:27 PM IST

1-aaaa

2022ರಲ್ಲಿ ನಿರ್ಮಾಣ ವಾದ ಮಧ್ಯಂತರ ಕಿರು ಚಿತ್ರಕ್ಕೆ ನಾನ್‌ ಫೀಚರ್‌ ವಿಭಾಗದಲ್ಲಿ ಎರಡು ರಾಷ್ಟ್ರ ಪಶಸ್ತಿಗಳು ಘೋಷಣೆ ಯಾಗಿವೆ. ಚಿತ್ರದ ನಿರ್ದೇಶಕ ದಿನೇಶ್‌ ಶೆಣೈಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಹಾಗೂ ಚಿತ್ರದ ಅತ್ಯುತ್ತಮ ಸಂಕಲನಕ್ಕಾಗಿ ಸುರೇಶ್‌ ಅರಸ್‌ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಮಧ್ಯಂತರ ಕಿರುಚಿತ್ರ ಸಿನೆಮಾ ಜನರಿಗೆ ಅತ್ಯಂತ ಹತ್ತಿರವಾಗುವ ಕಥೆ. 1980ರಲ್ಲಿ ನಡೆಯುವ ಕಥೆಯಿದು. ಹೊಟೇಲ್‌ನಲ್ಲಿ ಕೆಲಸ ಮಾಡುವ ಹುಡುಗರಿಬ್ಬರು ಸಿನೆಮಾ ರಂಗದಲ್ಲಿ ಮಿಂಚಬೇಕೆಂಬ ಆಸೆಯಿಂದ ಲೈಟ್‌ಬಾಯ್‌ಗಳಾಗಿ ಕೆಲಸಕ್ಕೆ ಸೇರುತ್ತಾರೆ. ಮುಂದೆ ಅವರು ಹೇಗೆಲ್ಲ ಬೆಳೆದು, ಚಿತ್ರವನ್ನು ನಿರ್ದೇಶಿಸುವ ಹಂತಕ್ಕೆ ತಲುಪುತ್ತಾಾರೆ ಎಂಬುದೇ ಈ ಚಿತ್ರದ ಜೀವಾಳ. ದಕ್ಷಿಣ ಕನ್ನಡದ ಬಸ್ತಿ ದಿನೇಶ್‌ ಶೆಣೈ ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿರುವುದಲ್ಲದೇ, ಛಾಯಾಗ್ರಹಣವನ್ನೂ ಮಾಡಿದ್ದಾರೆ. ಚಿತ್ರಕ್ಕೆ ಶಶಿಧರ ಅಡಪ ಅವರ ಕಲಾ ನಿರ್ದೇಶನ, ಸಿದ್ಧಾಂತ್‌ ಮಾಥೂರ್‌ ಅವರ ಸಂಗೀತವಿದೆ.

ಕೋವಿಡ್‌ ಸಮಯದಲ್ಲಿ ಹೊಳೆದ ಕಥೆ!
ಚಿತ್ರದ ಕಥೆ ಹೊಳೆದ ಬಗೆ ಮಾತನಾಡುವ ನಿರ್ದೇಶಕ ದಿನೇಶ್‌, ಕೋವಿಡ್‌ ಸಮಯದಲ್ಲಿ ಕೆಲಸವಿರಲಿಲ್ಲ. ನಾನು ಸಾಹಿತ್ಯ ಪ್ರೇಮಿ. ಸಾಕಷ್ಟು ಕಾದಂಬರಿಗಳನ್ನು ಓದಿದೆ. ಜತೆಗೆ ಸಿನೆಮಾ ಕ್ಷೇತ್ರದ ಹಳೆಯ ಕಲಾವಿದರು, ತಂತ್ರಜ್ಞರನ್ನು ಸಂದರ್ಶಿಸುವ ಕೆಲವು ಯುಟ್ಯೂಬ್‌ ಚಾನೆಲ್‌ಗ‌ಳನ್ನು ವೀಕ್ಷಿಸುತ್ತಿದ್ದೆ. ಈ ಸಮಯದಲ್ಲೇ “ಮಧ್ಯಂತರ’ದ ಕಲ್ಪನೆ ಹುಟ್ಟಿಕೊಂಡಿತು. ಒಂದು ವರ್ಷ ಕಾಲ ಇದೇ ವಿಷಯದ ಬಗ್ಗೆ ಸಂಶೋಧನೆ ನಡೆಸಿ, ಈ ಕಲ್ಪನೆಯನ್ನು ಅಭಿವೃದ್ಧಿ ಪಡಿಸಿದೆ. ನನ್ನ ಪರಿಕಲ್ಪನೆಯನ್ನು ಇನ್ನೊಬ್ಬ ನಿರ್ದೇಶಕನ ಮೂಲಕ ಹೇಳಿಸುವುದು ಕಷ್ಟವೆನಿಸಿತು. ಅದಕ್ಕೆ ನಾನೇ ನಿರ್ದೇಶನದ ಹೊಣೆ ಹೊತ್ತೆ ಎಂದರು.

ಚಿತ್ರಕ್ಕಿದೆ ಕ್ರೌಡ್‌ ಫಂಡಿಂಗ್
ಚಿತ್ರಕ್ಕಾಗಿ 20 ಜನರಿಂದ ಹಣ ಸಂಗ್ರಹಿಸಿ, 40 ಲಕ್ಷ ರೂ. ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಿದೆ. ಈ ಚಿತ್ರಕ್ಕೆ ನುರಿತ ಹಿರಿಯ ತಂತ್ರಜ್ಞರು ಕೈ ಜೋಡಿಸಿದ್ದು ಪೂರಕವಾಯಿತು. ಕೆಲವು ತಂತ್ರಜ್ಞರು ಕಡಿಮೆ ಹಾಗೂ ಏನೂ ಸಂಭಾವನೆ ತೆಗೆದುಕೊಳ್ಳದೇ ಕೆಲಸ ಮಾಡಿಕೊಟ್ಟರು. ಇದರಿಂದ ಸಾಕಷ್ಟು ಅನುಕೂಲ ವಾಯಿತು. 16 ಎಂಎಂ ಕೆಮರಾದಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಿದ್ದು ಮತ್ತೂಂದು ವಿಶೇಷ. ಯಾವುದೇ ಪ್ರಶಸ್ತಿಗಾಗಿ ಮಾಡಿದ ಸಿನೆಮಾ ಇದಲ್ಲ. ನನ್ನ ಕಲ್ಪನೆಯನ್ನು ಚಿತ್ರದ ಮೂಲಕ ತೋರಿಸುವ ಉದ್ದೇಶ ಮಾತ್ರ ಇತ್ತು. ನನ್ನ 2 ದಶಕಗಳ ಸಿನೆ ಅನುಭವ ಈ ಚಿತ್ರ ಮಾಡುವುದಕ್ಕೆ ಸಹಕಾರಿಯಾಯಿತು. ಸಿನೆಮಾ ಬಗ್ಗೆ ಇದ್ದ ಒಲವು ನನ್ನನ್ನು “ಮಧ್ಯಂತರ’ ಕಿರುಚಿತ್ರ ಮಾಡಲು ಪ್ರೇರೇಪಿಸಿತು ಎಂದು ದಿನೇಶ್‌ ಮಧ್ಯಂತರ ಚಿತ್ರದ ಹಿನ್ನೆಲೆಯನ್ನು ಹಂಚಿಕೊಂಡರು.

ಶ್ರಮದ ಪ್ರತಿಫ‌ಲ
ನಿಜವಾಗಲೂ ಖುಷಿಯಾಗುತ್ತಿದೆ. ಈ ಪ್ರಶಸ್ತಿ ಪ್ರದಾನ ಮಾಡುವ ವಿಜಾ°ನ ಭವನದಲ್ಲಿನ ಪ್ರಶಸ್ತಿ ಪ್ರದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಫೋಟೋ ತೆಗೆಯಲು ವೃತ್ತಿಪರನಾಗಿ ಹೋಗುತ್ತಿದ್ದೆ. ಈಗ ಅದೇ ಭವನದಲ್ಲಿ ನಾನು ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ. ಮತ್ತೂಬ್ಬರ ಕ್ಯಾಮೆರಾಗೆ ವಸ್ತುವಾಗುತ್ತಿದ್ದೇನೆ. ಇದೇ ನನ್ನ ಬದುಕಿನ ಅಚ್ಚರಿ ಕ್ಷಣ ಎನಿಸಿದೆ.
ದಿನೇಶ್‌ ಶೆಣೈ, ಸಿನೆಮಾ ನಿರ್ದೇಶಕರು

25 ವರ್ಷಗಳ ಅನುಭವ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ-ಪಾಣೆಮಂಗಳೂರಿನ ಬಸ್ತಿ ದಿನೇಶ್‌ ಶೆಣೈ ಅವರು ಚಿತ್ರರಂಗದಲ್ಲಿ 25 ವರ್ಷಗಳ ಅನುಭವ ಹೊಂದಿದ್ದಾರೆ. ಬಂಟ್ವಾಳ ಸಹಿತ ವಿವಿಧ ಕಡೆಯಲ್ಲಿ ಶಿಕ್ಷಣ ಪಡೆದ ಅವರು ಬಳಿಕ ಕುಟುಂಬದ ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಆ ಬಳಿಕ ಹೊಸದಿಲ್ಲಿಯಲ್ಲಿ ಸಿನೆಮಾ ಅಧ್ಯಯನ ಕೈಗೊಂಡ ಅವರು ಸುದೀರ್ಘ‌ ಕಾಲ ಸಿನೆಮಾ ಕ್ಷೇತ್ರದ ವಿವಿಧ ಆಯಾಮದಲ್ಲಿ ತೊಡಗಿಸಿಕೊಂಡರು. ಛಾಯಾಚಿತ್ರಗ್ರಾಹಕ, ನಿರ್ದೇಶಕ ಸಹಿತ ಎಲ್ಲ ವಿಭಾಗದಲ್ಲಿಯೂ ತೊಡಗಿಸಿಕೊಂಡ ಅನುಭವ ಹೊಂದಿದ್ದಾರೆ. “ಮಧ್ಯಂತರ’ ಎಂಬ ಕಿರುಸಿನೆಮಾದ ನಿರ್ದೇಶನ ಸಹಿತ ಎಲ್ಲ ಹಂತದಲ್ಲಿಯೂ ಅವರು ತೊಡಗಿಸಿಕೊಂಡಿದ್ದರು.

ನಿರೀಕ್ಷೆ ಮಾಡಿರಲಿಲ್ಲ..
ನಾನ್‌ ಫೀಚರ್‌ ವಿಭಾಗದಲ್ಲಿ “ಮಧ್ಯಂತರ’ ಚಿತ್ರದ ಅತ್ಯುತ್ತಮ ಸಂಕಲನಕ್ಕಾಗಿ ನನಗೆ ಪ್ರಶಸ್ತಿ ಬಂದಿದೆ. ಇದನ್ನು ನಿರೀಕ್ಷಿಸಿರಲಿಲ್ಲ. ಇದು ಅಚ್ಚರಿ ಹಾಗೂ ಖುಷಿ ತಂದಿದೆ. 1995ರಲ್ಲೂ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದೆ. ಅದಾದ 29 ವರ್ಷಗಳ ಬಳಿಕ ಮತ್ತೆ ಪ್ರಶಸ್ತಿ ಬಂದಿದೆ.


ಸುರೇಶ್‌ ಅರಸ್‌, ಸಂಕಲನಕಾರ, ಮಧ್ಯಂತರ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.