![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 18, 2024, 6:18 AM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ 3.0 ಸರಕಾರವು ಆಡಳಿತ ವ್ಯವಸ್ಥೆಯ ಪುನಾ ರಚನೆಗೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಮಟ್ಟದಲ್ಲಿ ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸ ಲಾಗಿದೆ.
ಕೇರಳ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಆರ್.ಕೆ. ಸಿಂಗ್ ಅವರನ್ನು ರಕ್ಷಣ ಕಾರ್ಯದರ್ಶಿಯ ನ್ನಾಗಿ 2 ವರ್ಷಗಳ ಅವಧಿಗೆ ನಿಯೋಜಿಸಲಾಗಿದೆ. ಹಾಲಿ ಕಾರ್ಯದರ್ಶಿ ಗಿರಿಧರ್ ಅರಮನೆ ಅಕ್ಟೋಬರ್‌ನಲ್ಲಿ ನಿವೃತ್ತಿಯಾಗಲಿದ್ದಾರೆ. ಆರೋಗ್ಯ ಸೇರಿದಂತೆ ವಿವಿಧ ಸಚಿವಾಲಯಗಳಿಗೆ 18 ಮಂದಿ ಹಿರಿಯ ಐಎಎಸ್ ಅಧಿಕಾರಿಗಳನ್ನು ಕಾರ್ಯದರ್ಶಿಗಳನ್ನಾಗಿ ನೇಮಿಸ ಲಾಗಿದೆ. ಪುಣ್ಯ ಸಾಲಿಯಾ ಶ್ರೀವಾಸ್ತವ ಅವರನ್ನು ಪಿಎಂ ಕಚೇರಿಯಿಂದ ಆರೋಗ್ಯ ಕಾರ್ಯದರ್ಶಿ ಯನ್ನಾಗಿ ನೇಮಿಸಲಾಗಿದೆ.
ಕಾರ್ಪೋರೇಟ್ ಸಚಿವಾಲಯದ ಕಾರ್ಯದರ್ಶಿ ಮನೋಜ್ ಗೋವಿಲ್‌ರನ್ನು ವೆಚ್ಚ ಇಲಾಖೆ ಕಾರ್ಯದರ್ಶಿಯಾಗಿ ಹಾಗೂ ಆ ಇಲಾಖೆಯ ಹಾಲಿ ಕಾರ್ಯದರ್ಶಿ ಟಿ.ವಿ.ಸೋಮನಾಥ್ ಅವರನ್ನು ಸಂಪುಟ ಕಾರ್ಯದರ್ಶಿಯಾಗಿ ನೇಮಿಸ ಲಾಗಿದೆ. ಕೆಲವು ಸಚಿವಾಲಯಗಳ ಕಾರ್ಯದರ್ಶಿ ಹುದ್ದೆ ಗಳು ತೆರವಾಗಿದ್ದರಿಂದ ಈ ನೇಮಕ ಮಾಡಲಾಗಿದೆ.
ಪರಿಣತರ ನೇಮಕಕ್ಕೆ ಕೇಂದ್ರ ಸರಕಾರದ ಚಿಂತನೆ?
ಹಣಕಾಸು ಖಾತೆ, ಆರೋಗ್ಯ ಸೇರಿದಂತೆ ವಿವಿಧ ಸಚಿವಾಲಯಗಳಲ್ಲಿ ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಮತ್ತು ನಿರ್ದೇಶಕರ ಸ್ಥಾನಗಳಿಗೆ ಕ್ಷೇತ್ರ ಪರಿಣತರನ್ನು ನೇಮಿಸಲು ಸರಕಾರ ಯೋಜಿಸಿದೆ. ಒಟ್ಟು 45 ಮಂದಿ ಕ್ಷೇತ್ರ ಪರಿಣತರಿಗೆ ಅವಕಾಶ ಒದಗಿಸಲು ಚಿಂತಿಸಲಾಗಿದೆ. ಈ ಪೈಕಿ ಜಂಟಿ ಕಾರ್ಯದರ್ಶಿಯಾಗಿ 10 ಹುದ್ದೆ, ಹಣಕಾಸು, ಕೃಷಿ, ಪರಿಸರ ಸಚಿವಾಲಯ ಸೇರಿ ವಿವಿಧ ಸಚಿವಾಲಯಗಳ ಉಪ ಕಾರ್ಯದರ್ಶಿ ಮತ್ತು ನಿರ್ದೇ ಶಕರ ಸ್ಥಾನಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರೀಯ ಲೋಕಸೇವಾ ಆಯೋಗ ತಿಳಿಸಿದೆ.
Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.