CCTV Footage: ಲಂಚದ ಹಣ ಹಂಚಿಕೊಂಡು ಕೆಲಸ ಕಳೆದುಕೊಂಡ ಟ್ರಾಫಿಕ್ ಪೊಲೀಸರು…
Team Udayavani, Aug 18, 2024, 10:21 AM IST
ನವದೆಹಲಿ: ವಾಹನ ತಪಾಸಣೆ ನೆಪದಲ್ಲಿ ವಾಹನ ಸವಾರರಿಂದ ಪಡೆದ ಲಂಚದ ಹಣವನ್ನು ಮೂವರು ಟ್ರಾಫಿಕ್ ಪೊಲೀಸರು ಹಂಚಿಕೊಳ್ಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇದರ ಹಿನ್ನೆಲೆಯಲ್ಲಿ ಅಪರಾಧವೆಸಗಿದ ಮೂವರು ಟ್ರಾಫಿಕ್ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಜಿಪುರ ಪೊಲೀಸ್ ಠಾಣೆಯಾ ಎದುರುಭಾಗದಲ್ಲಿ ಇಲ್ಲಿನ ಕಲ್ಯಾಣಪುರಿ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸರು ಸಣ್ಣ ಶೆಡ್ ಮಾಡಿಕೊಂಡು ಅಲ್ಲಿ ವಾಹನ ಸವಾರರನ್ನು ದಾಖಲೆ ಪರಿಶೀಲನೆ ನೆಪದಲ್ಲಿ ಸುಲಿಗೆ ಮಾಡಲಾಗುತ್ತಿದ್ದು ಅದರಲ್ಲಿ ಬಂದ ದುಡ್ಡನ್ನು ಮೂವರು ಸಂಚಾರಿ ಪೊಲೀಸರು ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ ಅಲ್ಲದೆ ಇದಕ್ಕೆ ಪೂರಕ ಎಂಬಂತೆ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಈ ಮೂವರು ಸಂಚಾರಿ ಪೊಲೀಸರು ಹಣ ಹಂಚಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ತನಿಖೆ ನಡೆಸಿದ ಹಿರಿಯ ಪೊಲೀಸ್ ಅಧಿಕಾರಿ ಮೂವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
#Delhi #WATCH गाजीपुर थाने के सामने ट्रैफिक पुलिस वालों ने झौपड़ी को बनाया हुआ था उगाही का अड्डा। देखें कैसे लोगों को वहां लाकर लेते थे रिश्वत, फिर कमाई को आपस में बांट लेते थे। आरोपी ट्रैफिक पुलिसकर्मी कल्याणपुरी सर्कल के हैं।@SandhyaTimes4u @NBTDilli @CPDelhi #DelhiPolice pic.twitter.com/7i7yYR2JlB
— Kunal Kashyap (@kunalkashyap_st) August 17, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ
Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ
Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್ ಡೆಲಿವರಿ ಯುವಕ ಆತ್ಮಹತ್ಯೆ
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.