World Photography Day: ಹೆಣ್ಣು ಕ್ಯಾಮರಾ ಕಣ್ಣು!


Team Udayavani, Aug 19, 2024, 8:10 AM IST

10

ಹಕ್ಕಿ ಹಾಡು ಕೇಳಿದೊಡನೆ ಕ್ಲಿಕ್‌ ಕ್ಲಿಕ್‌… ಪುರುಷ ಪಾರಮ್ಯದ ಛಾಯಾಗ್ರಹಣ ಕ್ಷೇತ್ರದಲ್ಲಿ ಮಹಿಳೆಯರೂ ಮಹತ್ಸಾಧನೆ ಮಾಡಿದ್ದಾರೆ ಎನ್ನುವುದು ಖುಷಿಯ, ಹೆಮ್ಮೆಯ ಸಂಗತಿ. ಅಂದಹಾಗೆ, ಈ ಕ್ಷೇತ್ರದಲ್ಲಿ ಮಹಿಳೆಯರಿಗೆ ಇರುವ ಸವಾಲುಗಳೇನು? ಫೋಟೋಗ್ರಫಿ ಮಾಡುವಾಗ ಥ್ರಿಲ್ಲಿಂಗ್‌ ಅನ್ನಿಸಿದ ಸಂದರ್ಭ ಯಾವುದು ಮತ್ತು ಏಕೆ? ತಾವು ಫೋಟೋಗ್ರಾಫ‌ರ್‌ ಆಗಲು ಇದ್ದ ಕಾರಣ ಯಾವುದು? ಫೋಟೋಗ್ರಫಿಯಿಂದ ಆದ ಲಾಭವೇನು ಎಂಬುದರ ಕುರಿತು ನಾಡಿನ ಹೆಸರಾಂತ ಹವ್ಯಾಸಿ ಪಕ್ಷಿ/ವನ್ಯಜೀವಿ ಛಾಯಾಗ್ರಾಹಕಿಯರು ಮಾತಾಡಿದ್ದಾರೆ…

ಮೂರು ದಶಕಗಳ ಕಾಲ ಕನ್ನಡ ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯಳಾಗಿ ಕೆಲಸ ಮಾಡಿದ ನಂತರ 2015ರಲ್ಲಿ ನಿವೃತ್ತಿಯಾದೆ. ನಿವೃತ್ತಿಯ ನಂತರ ಕ್ರಿಯಾಶೀಲವಾಗಿರಬೇಕು ಎಂದೆನಿಸಿತು. ಆಗ, ನನ್ನನ್ನು ಕೈ ಬೀಸಿ ಕರೆದಿದ್ದೇ ಫೋಟೋಗ್ರಫಿ ಹವ್ಯಾಸ. ಅಲ್ಲಿಯವರೆಗೂ ಕಾಲೇಜಿನ ಸಭೆ, ಸಮಾರಂಭಗಳಲ್ಲಿ ಫೋಟೋ ತೆಗೆದಿದ್ದೆನಾದರೂ, ಪೂರ್ಣ ಪ್ರಮಾಣದಲ್ಲಿ ಈ ಕ್ಷೇತ್ರಕ್ಕೆ ಬಂದಿರಲಿಲ್ಲ. ಅರವತ್ತರ ನಂತರ ನಾವು ಮಕ್ಕಳಂತೆ… ಹೊಸ ಆಸೆಗಳು ಹುಟ್ಟಿಕೊಳ್ತವೆ. ಹೀಗೆ ಪಕ್ಷಿ ಪ್ರಪಂಚ ನನ್ನನ್ನು ಸೆಳೆಯಿತು. ಅವುಗಳ ಫೋಟೋ ತೆಗೆಯುವುದೇ ನನ್ನ ಹವ್ಯಾಸವಾಯಿತು. ಇಲ್ಲಿ ಕ್ರಿಯಾಶೀಲತೆಯೂ ಇದೆ, ಸೃಜನಶೀಲತೆಯೂ ಇದೆ.

ಆ ಪಕ್ಷಿಗಾಗಿ ಎರಡು ದಿನ ಕಾದಿದ್ದೆ: ಪಕ್ಷಿಗಳ ಫೋಟೋಗ್ರಫಿ ಕಾರಣಕ್ಕೆ ಒಡಿಶಾ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಆಸ್ಸಾಂ, ಮಣಿಪುರ, ಅಂಡಮಾನ್‌- ನಿಕೋಬಾರ್‌… ಹೀಗೆ ದೇಶದ 16 ರಾಜ್ಯಗಳಲ್ಲಿ ಸುತ್ತಾಡಿರುವೆ. ಭೂತಾನ್‌ಗೂ ಹತ್ತು ದಿನಗಳ ಪ್ರವಾಸ ಮಾಡಿದ್ದೇನೆ. ಪಕ್ಷಿಗಳನ್ನು ಹುಡುಕುವುದೇ ಒಂದು ಸವಾಲಾದರೆ, ಅದನ್ನು ಹುಡುಕಿಕೊಂಡು ಹೋಗುವ ಮಾರ್ಗ ಇನ್ನೊಂದು ಸವಾಲು. ಅರುಣಾಚಲ ಪ್ರದೇಶದ ಮಿಶ್ಮಿ ಹಿಲ್ಸ್‌ ಪ್ರದೇಶದಲ್ಲಿ ಸ್ಕೆಲಟರ್‌ ಮೊನಾಲ್‌ ಎಂಬ ಪಕ್ಷಿ, ತೀರಾ ಅಪರೂಪಕ್ಕೆ ಕಾಣಸಿಗುತ್ತದೆ. ಅದರ ಫೋಟೋ ತೆಗೆಯಲು ಬೆಳಗ್ಗೆ 4 ಗಂಟೆಗೆ ಹೋಗಿ, ಕ್ಯಾಮರಾ ಹಿಡಿದು ಸನ್ನದ್ಧಳಾಗಿ ಕುಳಿತಿದ್ದೆ. ಒಂದಲ್ಲ, ಎರಡು ದಿನ ಕಾದರೂ ಹಕ್ಕಿ ಕಾಣಿಸಲಿಲ್ಲ. ನನ್ನ ಅದೃಷ್ಟವೇನೋ… ಮೂರನೇ ದಿನ ಆಕಸ್ಮಿಕವಾಗಿ ಸಿಕು¤. ಕೂಡಲೇ ಫೋಟೋ ಕ್ಲಿಕ್ಕಿಸಿದೆ.

8 ಕೆಜಿ ಹೊತ್ತು ನಡೆದಾಗ… ನನಗೀಗ 69 ವಯಸ್ಸು… ಈ ಇಳಿ ವಯಸ್ಸಿನಲ್ಲಿ ಹಕ್ಕಿಗಳನ್ನು ಹುಡುಕಿಕೊಂಡು ನಾನು ಕಾಡುಮೇಡು ಅಲೆಯುವುದನ್ನು ನಂಬಲು ಅನೇಕರಿಗೆ ಕಷ್ಟವಾಗಬಹುದು. ಕೇವಲ ಓಡಾಡುವುದಲ್ಲ. ಕ್ಯಾಮರಾ, 2-3 ಲೆನ್ಸ್‌ಗಳು, ಟ್ರೈಪಾಡ್‌ಗಳು ಇವೆಲ್ಲ ಸೇರಿದರೆ ಬರೋಬ್ಬರಿ 8 ಕೆಜಿ ತೂಕ. ಜತೆಗೆ ನನ್ನ ಬ್ಯಾಗ್‌! ಹಲವಾರು ಕಡೆ ನಾನೊಬ್ಬಳೇ ಇಷ್ಟೆಲ್ಲವನ್ನು ಹೊತ್ತು ಸಾಗಿದ್ದೇನೆ. ಹಕ್ಕಿಯ ಸೆಳೆತದ ಮುಂದೆ ನನ್ನ ವಯಸ್ಸು, ಕ್ಯಾಮರಾದ ಭಾರ ಯಾವುದೂ ಗಣನೆಯಾಗಿಲ್ಲ. ವಿಮಾನ ನಿಲ್ದಾಣಗಳಲ್ಲಿ ಸಿಬ್ಬಂದಿಗಳು ಬ್ಯಾಗ್‌ ಚೆಕ್‌ ಮಾಡುವಾಗ ನನ್ನ ಕ್ಯಾಮರಾ ನೋಡಿ, “ನೀವು ಫೋಟೋಗ್ರಫಿ ಮಾಡ್ತೀರಾ?’ ಎಂದು ಅಚ್ಚರಿಯಿಂದ ಕೇಳಿದ್ದೂ ಉಂಟು. ಕಳೆದ ವರ್ಷ ಐದೂವರೆ ಲಕ್ಷ ರೂ. ಕೊಟ್ಟು ಹೊಸ ಕ್ಯಾನನ್‌ ಆರ್‌5 ಕ್ಯಾಮರಾ ಖರೀದಿಸಿದೆ. ಇದು ನಿಜಕ್ಕೂ ವೆಚ್ಚದಾಯಕ ಹವ್ಯಾಸ.

ಅನುಭವದಿಂದಲೇ ಕಲಿತೆ!

ಕಾಡು, ಕಡಲು, ಬೆಟ್ಟ-ಗುಡ್ಡ, ಹಿಮದಲ್ಲಿ, ದೋಣಿಯಲ್ಲಿ, ತೆಪ್ಪದಲ್ಲಿ ನಿಂತು, ನೆಲದ ಮೇಲೆ ಕುಳಿತು, ಕಾಡಿನಲ್ಲಿ ಅಡ್ಡಾಡುತ್ತಾ, ಜೀಪಿನಲ್ಲಿ ಕುಳಿತು ಫೋಟೋ ತೆಗೆದ ವಿಚಿತ್ರ, ವಿಶಿಷ್ಟ ಅನುಭವಗಳು ನನ್ನ ನೆನಪಿನ ಮೂಟೆಯಲ್ಲಿವೆ. ಛಾಯಾಚಿತ್ರ ತೆಗೆಯಲು ನಾನು ಯಾವುದೇ ತರಬೇತಿ ಪಡೆದಿಲ್ಲ. ಬಹುತೇಕ ಅನುಭವದಿಂದಲೇ ಕಲಿತೆ. ಯು ಟ್ಯೂಬ್‌ನಲ್ಲೂ ಸಾಕಷ್ಟು ವಿಡಿಯೋಗಳನ್ನು ನೋಡಿ, ಬ್ಯಾಕ್‌ಗ್ರೌಂಡ್‌, ಫೋಕಸಿಂಗ್‌ ಪಾಯಿಂಟ್‌, ಅಪಾರ್ಚರ್‌, ಶಟರ್‌ ಸ್ಪೀಡ್‌ ಇವುಗಳ ಬಗ್ಗೆಯೆಲ್ಲ ಕಲಿತಿದ್ದೇನೆ. ಫೋಟೋ ತೆಗೆಯುವುದಲ್ಲದೇ ಕೆಲವು ಅಪರೂಪದ ಫೋಟೋ ಸಂಗ್ರಹವನ್ನೂ ಮಾಡಿರುವೆ. ಮಹಾತ್ಮ ಗಾಂಧಿ, ಕುವೆಂಪು ಅವರೆಂದರೆ ನನಗೆ ಬಹಳ ಇಷ್ಟ. ಅವರ ಸಾವಿ ರಾರು ಅಪರೂಪದ ಫೋಟೋಗಳನ್ನು ಸಂಗ್ರ ಹಿಸಿದ್ದೇನೆ. ಜತೆಗೆ ರವೀಂದ್ರನಾಥ್‌ಟ್ಯಾಗೋರ್‌ ಅವರ ಫೋಟೋಗಳೂ ಇವೆ. 2000 ಅಡಿ ಕೆಳಗೆ ಇಳಿದಾಗ… ದಟ್ಟ ಅಡವಿಯಲ್ಲಿ ಪಕ್ಷಿಗಳನ್ನು ಹುಡುಕಿಕೊಂಡು ಹೋಗುವುದೇ ಒಂದು ರೋಚಕ ಅನುಭವ. ಪಶ್ಚಿಮ ಬಂಗಾಳದ ಲಾಟ್‌ ಪಂಚರ್‌ ಪ್ರದೇಶದಲ್ಲಿ ಹಕ್ಕಿಗಳ ಫೋಟೋ ತೆಗೆಯಲು ಕಾಡಿನಲ್ಲಿ 2000 ಅಡಿ ಕೆಳಗೆ ಇಳಿದು ಹೋಗಿಬಂದಿದ್ದೆ. ಇದು ಎಂದೂ ಮಾಸದ ನೆನಪು. ಈವರೆಗೆ 900 ಬೇರೆ ಬೇರೆ ಬಗೆಯ ಹಕ್ಕಿಗಳ ಫೋಟೋ ತೆಗೆದಿರುವೆ. ಇನ್ನೂ 300 ಹಕ್ಕಿಗಳು ನನ್ನ ಪಟ್ಟಿಯಲ್ಲಿವೆ. ಅವುಗಳ ಫೋಟೋ ತೆಗೆಯಲು ಸೂಕ್ತ ಸಮಯಕ್ಕಾಗಿ ಕಾಯುತ್ತಿರುವೆ.

ಹಕ್ಕಿ ಹುಡುಕಿ ಹೋದವಳಿಗೆ ಚಿರತೆ ಸಿಕ್ಕಿತ್ತು! : ಒಮ್ಮೆ ಊಟಿಯಲ್ಲಿ ಪಕ್ಷಿಗಳ ಫೋಟೋ ತೆಗೆದು ವಾಪಸ್‌ ಬರುತ್ತಿದ್ದೆ. ದಾರಿಯುದ್ದಕ್ಕೂ ಬಂಡೀಪುರ ಕಾಡು. ರಸ್ತೆ ಪಕ್ಕದ ಪೊದೆಯಲ್ಲಿ ಚಿರತೆ ಕುಳಿತಿತ್ತು. ಕೂಡಲೇ ಕ್ಯಾಮರಾ ತೆಗೆದು ಒಂದೆರಡು ಫೋಟೋ ಕ್ಲಿಕ್‌ ಮಾಡಿದೆ. ಅದು ಕೆಲಕಾಲ ಹಾಗೇ ಕುಳಿತು, ನಂತರ ಹೋಗಿತ್ತು. ಇನ್ನೊಮ್ಮೆ ಕಬಿನಿಯಲ್ಲಿ ಸಫಾರಿಗೆಂದು ಹೋದಾಗ ಹುಲಿ ಎದುರಾಗಿತ್ತು. ಅದರ ಫೋಟೋವನ್ನೂ ತೆಗೆದಿದ್ದೆ. ಯಾವುದೇ ಕಾಡಿಗೆ ಹೋದರೂ ಹಕ್ಕಿಗಳ ಫೋಟೋ ಮಾತ್ರ ತೆಗೆಯುತ್ತೇನೆ. ಒಮ್ಮೊಮ್ಮೆ ಈ ರೀತಿ ಚಿರತೆ, ಆನೆ, ಹುಲಿ ಎದುರಾದ ಪ್ರಸಂಗಗಳಿವೆ.

-ಲೀಲಾ ಅಪ್ಪಾಜಿ, ಮಂಡ್ಯ

 

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.