hearing loss: ಮಕ್ಕಳಲ್ಲಿ ಶ್ರವಣ ದೋಷವನ್ನು ಶೀಘ್ರ ಪತ್ತೆಹಚ್ಚುವಲ್ಲಿ ಶಿಕ್ಷಕರ ಪಾತ್ರ


Team Udayavani, Aug 18, 2024, 1:14 PM IST

6

ವಿದ್ಯಾರ್ಥಿಗಳಲ್ಲಿ ಇರಬಹುದಾದ ಶ್ರವಣ ಶಕ್ತಿ ನಷ್ಟದ ಲಕ್ಷಣಗಳನ್ನು ಅನೇಕ ಬಾರಿ ಶಿಕ್ಷಕರೇ ಮೊದಲು ಗುರುತಿಸುತ್ತಾರೆ. ಮಕ್ಕಳಿಗೆ ಸೂಚನೆಗಳನ್ನು ಪಾಲಿಸಲು ಕಷ್ಟವಾಗುವುದು, ಹೇಳಿದ್ದನ್ನು ಪುನರಾವರ್ತಿಸಲು ಹೇಳುವುದು ಅಥವಾ ಸಂಭಾಷಣೆಯ ಸಂದರ್ಭದಲ್ಲಿ ಹತಾಶೆಯಂತಹ ಲಕ್ಷಣಗಳನ್ನು ಶಿಕ್ಷಕರು ಮೊದಲಾಗಿ ಗಮನಿಸುತ್ತಾರೆ. ಈ ರೀತಿ ಗುರುತಿಸುವುದು ಬಹಳ ಮುಖ್ಯವೇಕೆಂದರೆ ಬೇಗನೆ ಪತ್ತೆ ಹಚ್ಚಿದರೆ ಮಗುವಿನ ಬೆಳವಣಿಗೆ ಮತ್ತು ಶೈಕ್ಷಣಿಕ ಯಶಸ್ಸಿಗೆ ಅಡಚಣೆಯಾಗಬಹುದಾದ ಶ್ರವಣ ಶಕ್ತಿ ದೋಷಕ್ಕೆ ಬೇಗನೆ ಚಿಕಿತ್ಸೆ ಒದಗಿಸುವುದು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಇರಬಹುದಾದ ಶ್ರವಣ ಶಕ್ತಿ ದೋಷವನ್ನು ಬೇಗನೆ ಗುರುತಿಸುವುದರ ಪ್ರಾಮುಖ್ಯವನ್ನು ಈ ಲೇಖನ ಒತ್ತಿ ಹೇಳುತ್ತದೆ.

ಶಾಲಾ ಮಕ್ಕಳಲ್ಲಿ ಶ್ರವಣ ಶಕ್ತಿ ದೋಷಕ್ಕೆ ಏನು ಕಾರಣ?

ಭಾರತದಲ್ಲಿ ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಲ್ಲಿ ಲಘು ಪ್ರಮಾಣದ ಶ್ರವಣ ಶಕ್ತಿ ನಷ್ಟ ಗಮನಾರ್ಹ ಪ್ರಮಾಣದಲ್ಲಿದೆ. ದೇಶದಲ್ಲಿ ಈ ವಯಸ್ಸಿನ ಮಕ್ಕಳಲ್ಲಿ ಶೇ. 5-10 ಮಂದಿ ಸ್ವಲ್ಪ ಮಟ್ಟಿಗಿನ ಶ್ರವಣ ಶಕ್ತಿ ವೈಫ‌ಲ್ಯವನ್ನು ಹೊಂದಿರುತ್ತಾರೆ; ಈ ಪೈಕಿ ಲಘು ಪ್ರಮಾಣದ ಶ್ರವಣ ಶಕ್ತಿ ನಷ್ಟವು ಹೆಚ್ಚು ಸಾಮಾನ್ಯವಾಗಿರುತ್ತದೆ. ಇದಕ್ಕೆ ಕಾರಣವಾಗುವ ಸಾಮಾನ್ಯ ಅಂಶಗಳಲ್ಲಿ ಕಿವಿಯ ಸಂರಚನೆಗೆ ಹಾನಿ ಉಂಟು ಮಾಡಬಹುದಾದ ದೀರ್ಘ‌ಕಾಲೀನ ಕಿವಿಯ ಸೋಂಕು ಹಾಗೂ ಹೆಡ್‌ಫೋನ್‌ಗಳು ಮತ್ತು ಸದ್ದುಗದ್ದಲದ ಪರಿಸರದಂತಹ ಭಾರೀ ಸದ್ದನ್ನು ಅತಿಯಾಗಿ ಕೇಳಿಸಿಕೊಳ್ಳುವುದು ಸೇರಿವೆ. ಓಟೊಟಾಕ್ಸಿಕ್‌ ಔಷಧಗಳು ಮತ್ತು ತಲೆಗಾದ ಗಾಯಗಳು ಇತರ ಕೆಲವು ಕಾರಣಗಳಾಗಿವೆ. ಪರಿಸರದಲ್ಲಿ ಇರಬಹುದಾದ ವಿಷಾಂಶಗಳಿಗೆ ಒಡ್ಡಿಕೊಂಡಿರುವುದು, ಜನನ ಕಾಲದಲ್ಲಿ ಉಂಟಾದ ಸಂಕೀರ್ಣ ಸಮಸ್ಯೆಗಳು ಕೂಡ ಶ್ರವಣ ಶಕ್ತಿ ದೋಷಕ್ಕೆ ಕೊಡುಗೆ ನೀಡಬಹುದು. ಶ್ರವಣ ಶಕ್ತಿ ದೋಷಕ್ಕೆ ಚಿಕಿತ್ಸೆ ಒದಗಿಸದೆ ಇದ್ದಲ್ಲಿ ಮಗುವಿನ ಶೈಕ್ಷಣಿಕ ಸಾಧನೆ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹು. ಹೀಗಾಗಿ ಶ್ರವಣ ಶಕ್ತಿ ದೋಷವನ್ನು ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ಒದಗಿಸುವುದು ತುಂಬಾ ಮುಖ್ಯವಾಗಿರುತ್ತದೆ.

ಶಾಲಾ ವಿದ್ಯಾರ್ಥಿಗಳಲ್ಲಿ ಶ್ರವಣ ಶಕ್ತಿ ನಷ್ಟದ ಸಾಮಾನ್ಯ ಲಕ್ಷಣಗಳು ಯಾವುವು?

ಸೂಚನೆಗಳನ್ನು ಪಾಲಿಸಲು ಕಷ್ಟಪಡುವುದು, ಪದೇಪದೆ ಪುನರಾವರ್ತ ಮಾಡಲು ಹೇಳುವುದು ಅಥವಾ ತರಗತಿಯ ಚಟುವಟಿಕೆಗಳಲ್ಲಿ ಎದ್ದುತೋರುವ ಅನಾಸಕ್ತಿಯಂತಹ ಲಕ್ಷಣಗಳನ್ನು ಗಮನಿಸುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶ್ರವಣ ಶಕ್ತಿ ನಷ್ಟವನ್ನು ಗುರುತಿಸಬಹುದಾಗಿದೆ. ಶ್ರವಣ ಶಕ್ತಿ ದೋಷವಿರುವ ಮಕ್ಕಳು ಗುಂಪು ಚರ್ಚೆಗಳಲ್ಲಿ ಭಾಗವಹಿಸಲು ತಿಣುಕಾಡಬಹುದು ಅಥವಾ ಸಂಭಾಷಣೆಯ ಸಂದರ್ಭದಲ್ಲಿ ಹತಾಶೆಯ ಲಕ್ಷಣಗಳನ್ನು ಪ್ರದರ್ಶಿಸಬಹುದು. ಯಾವುದೇ ವಿದ್ಯಾರ್ಥಿ ಏಕಾಗ್ರತೆ ಕೊರತೆ ಹೊಂದಿದ್ದರೆ ಅಥವಾ ಮಾತಿನ ಮೂಲಕ ನೀಡಿದ ಸೂಚನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ತೊಂದರೆ ಹೊಂದಿರುವುದು ಕಂಡುಬಂದರೆ ಶಿಕ್ಷಕರು ಈ ಬಗ್ಗೆ ನಿಗಾ ಇರಿಸಬೇಕು. ಮಕ್ಕಳ ಮಾತು ಮತ್ತು ಭಾಷೆ ಹಾಗೂ ಸಾಮಾಜಿಕ ಸಂವಹನದ ಬೆಳವಣಿಗೆಯ ಮೇಲೆ ನಿಗಾ ಹೊಂದಿರುವುದು ಕೂಡ ಶ್ರವಣ ಶಕ್ತಿ ದೋಷದ ಬಗ್ಗೆ ಸುಳಿವುಗಳನ್ನು ನೀಡಬಹುದಾಗಿದೆ. ಶ್ರವಣ ಶಕ್ತಿ ದೋಷವನ್ನು ನಿರ್ವಹಿಸಲು ಆದಷ್ಟು ಬೇಗನೆ ಆರೋಗ್ಯ ಸೇವಾ ವೃತ್ತಿಪರರಿಗೆ ಶಿಫಾರಸು ಮಾಡುವುದು ಬಹಳ ಮುಖ್ಯವಾಗಿದೆ.

ವಿದ್ಯಾರ್ಥಿ ಶ್ರವಣ ಶಕ್ತಿ ದೋಷ ಹೊಂದಿರುವ ಸಂದೇಹ ಉಂಟಾದರೆ ಶಿಕ್ಷಕರು ಏನು ಮಾಡಬೇಕು?

ಯಾವುದೇ ವಿದ್ಯಾರ್ಥಿ ಶ್ರವಣ ಶಕ್ತಿ ದೋಷ ಹೊಂದಿರುವ ಶಂಕೆಯುಂಟಾದರೆ ಹೆತ್ತವರು ಅಥವಾ ಪೋಷಕರ ಬಳಿ ಈ ಬಗ್ಗೆ ಸಮಾಲೋಚನೆ ನಡೆಸಬೇಕು. ವಿದ್ಯಾರ್ಥಿಯ ನಿರ್ದಿಷ್ಟ ಲಕ್ಷಣಗಳನ್ನು, ವರ್ತನೆಗಳನ್ನು ದಾಖಲುಗೊಳಿಸಿ ತರಬೇತಿಯಾದ ಆಡಿಯಾಲಜಿಸ್ಟ್‌ ಬಳಿ ಶ್ರವಣ ಶಕ್ತಿ ತಪಾಸಣೆಗೆ ಒಳಗಾಗುವಂತೆ ಶಿಫಾರಸು ಮಾಡ ಬೇಕು. ಆದಷ್ಟು ಶೀಘ್ರವಾಗಿ ಹೀಗೆ ತಪಾಸ
ಣೆಗೆ ಶಿಫಾರಸು ಮಾಡುವುದು ಬಹಳ ಮುಖ್ಯ ಏಕೆಂದರೆ, ಶ್ರವಣ ಶಕ್ತಿ ನಷ್ಟ ಇದೆ ಅಥವಾ ಇಲ್ಲ ಎಂಬುದನ್ನು ಖಚಿತಪಡಿ
ಸಿಕೊಳ್ಳಲು ಸಮರ್ಪಕವಾದ ಪರೀಕ್ಷೆಗಳನ್ನು ಬೇಗನೆ ನಡೆಸಲು ಸಹಾಯವಾಗುತ್ತದೆ.

ಶ್ರವಣ ಶಕ್ತಿ ನಷ್ಟ ಖಚಿತವಾದ ಬಳಿಕ ಇಂತಹ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಸಹಾಯಕರಾಗಿ ಶಿಕ್ಷಕರ ಪಾತ್ರವೇನು?

ಶ್ರವಣ ಶಕ್ತಿ ದೋಷವನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಪೂರಕವಾದ ಕಲಿಕೆಯ ವಾತಾವರಣವನ್ನು ಸೃಷ್ಟಿಸುವಲ್ಲಿ ಶಿಕ್ಷಕರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಆದ್ಯತೆಯ ಆಸನ (ತರಗತಿ ಎದುರು ಭಾಗದಲ್ಲಿ ಕುಳಿತುಕೊಳ್ಳಿಸುವುದು), ಹಿನ್ನೆಲೆ ಸದ್ದುಗದ್ದಲವನ್ನು ಕಡಿಮೆ ಮಾಡುವುದು, ದೃಶ್ಯಾತ್ಮಕ ಕಲಿಕಾ ಸಾಮಗ್ರಿಗಳ ಬಳಕೆ ಮತ್ತು ತುಟಿಯ ಚಲನೆಯನ್ನು ವಿದ್ಯಾರ್ಥಿಗಳು ಸರಿಯಾಗಿ ಗಮನಿಸುವುದಕ್ಕೆ ಅನುಕೂಲವಾಗುವಂತಹ ಉತ್ತಮ ಬೆಳಕಿನ ವ್ಯವಸ್ಥೆ ಇತ್ಯಾದಿಗಳು ಇಂತಹ ಪೂರಕ ವಾತಾವರಣ ನಿರ್ಮಾಣದಲ್ಲಿ ಸೇರಿವೆ. ಮಾತನಾಡುವಾಗ ಶ್ರವಣ ಶಕ್ತಿ ದೋಷವುಳ್ಳ ಮಗುವಿನ ಮುಖ ನೋಡಿ ಮಾತನಾಡುವುದು, ಸ್ಪಷ್ಟ ಮತ್ತು ಗಟ್ಟಿ ಧ್ವನಿಯಲ್ಲಿ ಮಾತು ಮತ್ತು ಸಾಧ್ಯವಿದ್ದಾಗಲೆಲ್ಲ ಬರವಣಿಗೆಯಲ್ಲಿ ಸೂಚನೆ ನೀಡುವುದು ಇತ್ಯಾದಿಗಳ ಮೂಲಕ ಶಿಕ್ಷಕರು ಶ್ರವಣ ಶಕ್ತಿ ದೋಷವುಳ್ಳ ವಿದ್ಯಾರ್ಥಿಗಳಿಗೆ ಸಹಾಯವಾಗಬಲ್ಲಂತಹ ಸಂವಹನ ಕಾರ್ಯತಂತ್ರಗಳನ್ನು ಸೃಷ್ಟಿಸಬಹುದಾಗಿದೆ.

ಶ್ರವಣ ಶಕ್ತಿ ದೋಷ ಹೊಂದಿರುವ ವಿದ್ಯಾರ್ಥಿಗಳ ಅತ್ಯುತ್ತಮ ಫ‌ಲಿತಾಂಶಕ್ಕಾಗಿ ಶಿಕ್ಷಕರು ಆಡಿಯಾಲಜಿಸ್ಟ್‌ಗಳು ಮತ್ತು ಇತರ ವೃತ್ತಿಪರರ ಜತೆಗೆ ಹೇಗೆ ಕಾರ್ಯಸಂಯೋಜನೆ ಮಾಡಿಕೊಳ್ಳಬೇಕು?

ಶಾಲಾ ತರಗತಿ ವ್ಯವಸ್ಥೆಯಲ್ಲಿ ಶ್ರವಣ ಶಕ್ತಿ ದೋಷ ಹೊಂದಿರುವ ಮಕ್ಕಳ ಸಮಗ್ರ ನಿರ್ವಹಣೆ ಮತ್ತು ಬೆಳವಣಿಗೆಗಾಗಿ ಶಿಕ್ಷಕರು ಮತ್ತು ವಿವಿಧ ಆರೋಗ್ಯ ಸೇವಾವೃತ್ತಿಪರರ ನಡುವೆ ಕಾರ್ಯಸಂಯೋಜನೆ ಅತ್ಯಗತ್ಯವಾಗಿದೆ. ಆಡಿಯಾಲಜಿಸ್ಟ್‌ಗಳು, ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ಗಳು ಮತ್ತು ಶಿಕ್ಷಣ ತಜ್ಞರ ಜತೆಗೆ ಶಿಕ್ಷಕರು ನಿಕಟವಾಗಿ ಕಾರ್ಯನಿರ್ವಹಿಸುವ ಮೂಲಕ ವ್ಯಕ್ತಿನಿರ್ದಿಷ್ಟ ಕಲಿಕಾ ಯೋಜನೆ (ಐಇಪಿಗಳು)ಗಳನ್ನು ಅಥವಾ ಪ್ರತೀ ವಿದ್ಯಾರ್ಥಿಯ ಅಗತ್ಯಗಳಿಗೆ ತಕ್ಕುದಾದ ಯೋಜನೆಗಳನ್ನು ರೂಪಿಸಲು ಶ್ರಮಿಸಬೇಕು. ನಿಯಮಿತವಾದ ಸಂವಹನ ಮತ್ತು ಪ್ರಗತಿ ವಿವರಗಳನ್ನು ಹಂಚಿಕೊಳ್ಳುವುದರಿಂದ ಅನ್ವಯಿಸಿಕೊಳ್ಳಲಾಗಿರುವ ಕಾರ್ಯತಂತ್ರಗಳು ಮತ್ತು ಯೋಜನೆಗಳು ಪರಿಣಾಮಕಾರಿಯಾಗಿವೆ ಮತ್ತು ಪ್ರತೀ ವಿದ್ಯಾರ್ಥಿಯ ಕಲಿಕೆ ಹಾಗೂ ಸಾಮಾಜಿಕ ಭಾಗವಹಿಸುವಿಕೆಗೆ ಪೂರಕವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳು ಹೊಂದಿರಬಹುದಾದ ಶ್ರವಣ ಶಕ್ತಿ ದೋಷವನ್ನು ಆದಷ್ಟು ಬೇಗನೆ ಗುರುತಿಸಿ ಸಮಗ್ರ ನಿರ್ವಹಣೆಗೆ ಒಳಪಡಿಸುವುದು ಅವರ ತರಗತಿಯೊಳಗಿನ ಕಲಿಕೆ ಮತ್ತು ಸಾಮಾಜಿಕ ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಶ್ರವಣ ಶಕ್ತಿ ದೋಷವನ್ನು ಆದಷ್ಟು ಶೀಘ್ರವಾಗಿ ಗುರುತಿಸಿ ಚಿಕಿತ್ಸೆಗೆ ಒಳಪಡಿಸುವಲ್ಲಿ ಶಿಕ್ಷಕರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಶ್ರವಣ ಶಕ್ತಿ ದೋಷವುಳ್ಳ ಮಕ್ಕಳ ಬದುಕಿನಲ್ಲಿ ಶಿಕ್ಷಕರ ಸಕ್ರಿಯ ಕಾರ್ಯನಿರ್ವಹಣೆಯು ಗಮನಾರ್ಹ ಬದಲಾವಣೆಯನ್ನು ತರಬಹುದಾಗಿದೆ. ಶಿಕ್ಷಕರು ಲಭ್ಯವಿರುವ ಸಂಪನ್ಮೂಲಗಳು ಮತ್ತು ವೃತ್ತಿಪರ ಅಭಿವೃದ್ಧಿಯನ್ನು ಬಳಕೆ ಮಾಡಿಕೊಳ್ಳುವುದರಿಂದ ಇಂತಹ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಸಹಾಯ ಮಾಡಲು, ಶೈಕ್ಷಣಿಕವಾಗಿ ಅವರ ಫ‌ಲಿತಾಂಶವು ಉತ್ತಮವಾಗಿರಲು ಮತ್ತು ಅವರ ಒಟ್ಟಾರೆ ಕಲ್ಯಾಣ ಸಾಧಿತವಾಗಲು ಸಾಧ್ಯವಾಗುತ್ತದೆ.

ಡಾ| ಮಯೂರ್‌ ಭಟ್‌ ಅಸಿಸ್ಟೆಂಟ್‌ ಪ್ರೊಫೆಸರ್‌ ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ ಕೆಎಂಸಿ, ಮಂಗಳೂರು
ಅಕ್ಷತಾ ಎವಿಟಿ ಥೆರಪಿಸ್ಟ್‌ ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ ಕೆಎಂಸಿ, ಮಂಗಳೂರು

ಟಾಪ್ ನ್ಯೂಸ್

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ

Payan

Movie Release: ರಾಜ್ಯಾದ್ಯಂತ “ಪಯಣ್‌’ ಸಿನೆಮಾ ಸೆ.20ರಂದು ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-redmeat

Red Meat: ಮಧುಮೇಹ ಉಂಟಾಗುವ ಅಪಾಯ ಮತ್ತು ಕೆಂಪು ಮಾಂಸ ಸೇವನೆಗಿರುವ ಸಂಬಂಧ

5-body-weight

Body Weight: ಕ್ರೀಡಾಳುಗಳ ಸಾಧನೆಯ ಮೇಲೆ ಕ್ಷಿಪ್ರ ದೇಹತೂಕ ಏರಿಳಿತದ ಪರಿಣಾಮಗಳು

4-female-health

Females Health: ಲಘು ರಕ್ತಸ್ರಾವ ಮತ್ತು ಋತುಸ್ರಾವ್ರ ವ್ಯತ್ಯಾಸ ತಿಳಿಯಿರಿ

19

Health: ಬಿಸಿಲಿನ ತಾಪದಿಂದ ಆರೋಗ್ಯ ಅಪಾಯ ತಡೆಯಲು ಏನು ಮಾಡ ಬೇಕು?

16

Health: ಸ್ತನ ಕಸಿ ಮತ್ತು ಕ್ಯಾನ್ಸರ್‌ ಪರಸ್ಪರ ಸಂಬಂಧ ಇದೆಯೇ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.