Arshad Warsi: ʼಕಲ್ಕಿʼ ನೋಡಿ ಪ್ರಭಾಸ್‌ನನ್ನು ʼಜೋಕರ್ʼ ಎಂದ ಬಾಲಿವುಡ್ ನಟ
Team Udayavani, Aug 18, 2024, 3:38 PM IST
ಮುಂಬಯಿ: ಪ್ರಭಾಸ್ (Prabhas) ಅಭಿನಯದ ಪ್ಯಾನ್ ಇಂಡಿಯಾ ʼಕಲ್ಕಿ 2898 ಎ.ಡಿʼ(Kalki 2898 AD) ಸಿನಿಮಾ ಈ ವರ್ಷದ ದೊಡ್ಡ ಹಿಟ್‌ಗಳಲ್ಲಿ ಒಂದು. ಬಾಕ್ಸ್ ಆಫೀಸ್‌ನಲ್ಲೂ 1000 ಕೋಟಿಗೂ ಅಧಿಕ ಗಳಿಕೆ ಕಾಣುವ ಮೂಲಕ ಪ್ರಭಾಸ್ ಅವರಿಗೆ ʼಸಲಾರ್ʼ ಬಳಿಕ ಬ್ಯಾಕ್ ಟು ಬ್ಯಾಕ್ ಹಿಟ್ ತಂದುಕೊಟ್ಟಿದೆ.
ಇಷ್ಟು ದೊಡ್ಡ ಹಿಟ್ ಕೊಟ್ಟ ಟಾಲಿವುಡ್ ಸಿನಿಮಾ ʼಕಲ್ಕಿ 2898 ಎಡಿʼ ಹಾಗೂ ಪ್ರಭಾಸ್ ಬಗ್ಗೆ ಬಾಲಿವುಡ್ ನಟನೊಬ್ಬ ಮಾತನಾಡಿದ ರೀತಿಗೆ ಆಕ್ರೋಶ ವ್ಯಕ್ತವಾಗಿದೆ.
ಅನ್ ಫಿಲ್ಟರ್ಡ್ ಬೈ ಸಮದೀಶ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ನಟ ಅರ್ಷದ್ ವಾರ್ಸಿ(Arshad Warsi) ಮಾತನಾಡಿದ್ದಾರೆ.
ಇದನ್ನೂ ಓದಿ: Actor Mohanlal: ಸೂಪರ್ ಸ್ಟಾರ್ ಮೋಹನ್ ಲಾಲ್ ಆಸ್ಪತ್ರೆಗೆ ದಾಖಲು
ನಿಮಗೆ ಇಷ್ಟವಾಗದ ಇತ್ತೀಚೆಗಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ʼಕಲ್ಕಿ ಸಿನಿಮಾ ನೋಡಿದೆ. ನನಗೆ ಅದು ಇಷ್ಟವಾಗಿಲ್ಲ. ಪ್ರಭಾಸ್ ನಾನು ತುಂಬಾ ಬೇಜಾರ್ ಅಲ್ಲಿದ್ದೇನೆ. ನೀವು ಜೋಕರ್ ರೀತಿ ಕಾಣುತ್ತಿದ್ದೀರಿ. ನಾನು ಮ್ಯಾಡ್ ಮ್ಯಾನ್ ನೋಡಲು ಇಷ್ಟಪಡುತ್ತೇನೆ. ಆದರೆ ನೀವು ಅವರನ್ನು ಏನು ಮಾಡಿದ್ದೀರಿ. ನೀವ್ಯಾಕೆ ಈ ರೀತಿ ಮಾಡುತ್ತೀರಿ ಅನ್ನೋದೇ ನನಗೆ ಅರ್ಥ ಆಗಲ್ಲ” ಎಂದು ಅರ್ಷದ್ ಹೇಳಿದ್ದಾರೆ.
Here it is, The real view of #Kalki2898AD from north India. #Prabhas looks like Joker in the film says Arshad. He also added kalki could have been a good film like Mad Max but the actor and director failed to do so.
pic.twitter.com/hbEWMOyyj7— Movie Hub (@Its_Movieshub) August 18, 2024
“ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅದ್ಭುತವಾಗಿ ನಟಿಸಿದ್ದಾರೆ. ಆ ವ್ಯಕ್ತಿಯನ್ನು ನಂಬಲು ಆಗಲ್ಲ. ಅವರಲ್ಲಿರುವ ಸ್ವಲ್ಪ ಪವರ್ ನಮಗೆ ಕೊಟ್ಟರೆ ನಮ್ಮ ಬದುಕು ಕೂಡ ಸೆಟಲ್ ಆಗುತ್ತದೆ” ಎಂದು ಅವರು ಹೇಳಿದ್ದಾರೆ.
ಸದ್ಯ ಪ್ರಭಾಸ್ ನನ್ನು ಜೋಕರ್ ಎಂದ ಅರ್ಷದ್ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ʼಜೋಕರ್ʼ ಎಂದು ಕರೆದದ್ದು ನಟನಿಗೆ ಕೊಟ್ಟ ಅಗೌರವ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ನಾಗ್ ಅಶ್ವಿನ್ ನಿರ್ದೇಶನದ ʼಕಲ್ಕಿʼ ಯಲ್ಲಿ ಪ್ರಭಾಸ್, ಅಮಿತಾಭ್, ದೀಪಿಕಾ, ಕಮಲ್ ಹಾಸನ್ ಸೇರಿದಂತೆ ಇತರೆ ಪ್ರಮುಖರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.