Kaup: 91 ಬೀದಿ ದೀಪಗಳಲ್ಲಿ ಒಂದೂ ಉರಿಯುತ್ತಿಲ್ಲ !

ಎರ್ಮಾಳು-ಉಚ್ಚಿಲ-ಮೂಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕತ್ತಲಲ್ಲಿ

Team Udayavani, Aug 18, 2024, 3:51 PM IST

18

ಕಾಪು: ಮಂಗಳೂರು – ಉಡುಪಿ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು – ಉಚ್ಚಿಲ – ಮೂಳೂರು ನಡುವಿನ ಹೆದ್ದಾರಿ ಬೀದಿ ದೀಪಗಳು ಉರಿಯದೆ ತಿಂಗಳುಗಳೇ ಕಳೆದಿವೆ. ಹೀಗಾಗಿ ಚತುಷ್ಪಥ ಹೆದ್ದಾರಿ ಮೇಲಿನ ಪಯಣ ಭಯದ ನಡಿಗೆಯಾಗುತ್ತಿದೆ.

ಅಪಘಾತ ಹೆಚ್ಚಳ

ಹೆದ್ದಾರಿ ಬದಿಯಲ್ಲಿ ದೀಪಗಳು ಉರಿಯದೇ ಪಾದಚಾರಿಗಳು ಮತ್ತು ವಾಹನ ಸವಾರರು ಕತ್ತಲಲ್ಲೇ ಸಂಚರಿಸುವಂತಾಗಿದೆ. ಈ ಹೆದ್ದಾರಿಯಲ್ಲಿ ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿದ್ದು ಕೆಲವರು ಪ್ರಾಣ ಕಳೆದುಕೊಂಡಿದ್ದರೆ, ಹಲವರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ದಿನನಿತ್ಯದ ಅಪಘಾತದ ಸಂಖ್ಯೆ ಏರುತ್ತಲೇ ಇದೆ. ಆದರೂ ಇಲ್ಲಿನ ನರ ಗೋಳು ಮಾತ್ರ ಇನ್ನೂ ಬಗೆಹರಿದಿಲ್ಲ.

ಹೆಸರಿಗಷ್ಟೇ ವಿದ್ಯುತ್‌ ಕಂಬ

ರಾ. ಹೆ. 66ರ ಮೂಳೂರು ಡೈವರ್ಷನ್‌ ಬಳಿಯಿಂದ ಎರ್ಮಾಳು ಡೈವರ್ಷನ್‌ವರೆಗಿನ ಡಿವೈಡರ್‌ ಮಧ್ಯದಲ್ಲಿ 44 ಕಂಬಗಳಲ್ಲಿ 88 ಲೈಟ್‌ಗಳಿವೆ, ಉಚ್ಚಿಲ ಪೇಟೆಯಲ್ಲಿ ಮೂರು ಲೈಟ್‌ ಕಂಬಗಳಿವೆ. ಒಟ್ಟು 91 ಲೈಟ್‌ಗಳಲ್ಲಿ ಒಂದು ಲೈಟ್‌ ಕೂಡಾ ಉರಿಯುತ್ತಿಲ್ಲ. ಇದರ ತೆಗೆ ಕಾಪುವಿನಿಂದ ಪಡುಬಿದ್ರಿಯವರೆಗೆ ಅಲ್ಲಲ್ಲಿ ಹಲವು ಲೈಟ್‌ಗಳು ಉರಿಯುತ್ತಿಲ್ಲ.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಪದೇಪದೇ ಪ್ರಶ್ನಿಸಿದ ಪರಿಣಾಮ ಕಾಪು-ಮೂಳೂರು ನಡುವಿನ ಲೈಟ್‌ಗಳನ್ನು ದುರಸ್ತಿಪಡಿಸಿದ್ದಾರಾದರೂ, ಮೂಳೂರು- ಉಚ್ಚಿಲ-ಎರ್ಮಾಳು ನಡುವಿನ ದೀಪಗಳಿಗೆ ಇನ್ನೂ ದುರಸ್ತಿಗೊಂಡು, ಪ್ರಕಾಶಿಸುವ ಯೋಗವೇ ಸಿಕ್ಕಿಲ್ಲ.

ಕತ್ತಲ ಕೂಪದಲ್ಲಿ ಹಲವು ಸಮಸ್ಯೆ

ಪಡುಬಿದ್ರಿ – ಉಚ್ಚಿಲ – ಉದ್ಯಾವರದ ನಡುವಿನ ಹೆದ್ದಾರಿಯುದ್ದಕ್ಕೂ ಹೊಂಡ ಬಿದ್ದಿದೆ. ಹೊಂಡದ ಅರಿವಿರದ ಹೊರ ರಾಜ್ಯಗಳ ಸವಾರರು ಹೊಂಡ ತಪ್ಪಿಸಲು ಹೋಗಿ ಡಿವೈಡರ್‌ ಮೇಲೇರಿದ, ರಸ್ತೆ ಬದಿಯ ಗುಂಡಿಗೆ ಬಿದ್ದ ಹಲವು ನಿದರ್ಶನಗಳಿವೆ.

ಕೆಲವು ಸಲ ವಿರುದ್ಧ ದಿಕ್ಕಿನಲ್ಲಿ ಬರುವ ಭಾರೀ ವಾಹನಗಳ ಪ್ರಖರ ಹೈಡ್‌ಲೈಟ್‌ನಿಂದ ಎದುರಿನ ವಾಹನಗಳು ಕಾಣಿಸದೇ ಬೈಕ್‌, ರಿಕ್ಷಾ ಮತ್ತು ಕಾರು ಚಾಲಕರು ತಾವಾಗಿಯೇ ಘನ ವಾಹನಗಳಿಗೆ ಢಿಕ್ಕಿ ಹೊಡೆಯುತ್ತಾರೆ.

ಕತ್ತಲೆ ಇರುವುದರಿಂದ ಮದ್ಯ, ಗಾಂಜಾ ಸೇವನೆಯಂಥ ಅಕ್ರಮ ಚಟುವಟಿಕೆಗಳಿಗೆ ದಾರಿಯಾಗಿದೆ. ಮದ್ಯದ ಬಾಟಲಿಗಳನ್ನು ರಸ್ತೆಗೇ ಎಸೆಯುವುದೂ ಇದೆ.

ಕತ್ತಲಲ್ಲಿ ಕಾರು ನಿಲ್ಲಿಸಿ ಅನೈತಿಕ ಚಟುವಟಿಕೆಗಳೂ ನಡೆಯುತ್ತಿವೆ.

ಹೆದ್ದಾರಿಯಲ್ಲಿ ಸರಗಳ್ಳತನ, ಒಂಟಿ ವಾಹನ ಚಾಲಕರ ದರೋಡೆ, ಮಹಿಳೆಯರಿಗೆ ಕಿರುಕುಳ ಮೊದಲಾದ ಘಟನೆಗಳು ನಡೆಯುತ್ತಿವೆ.

ಮಳೆ ನಿಂತಿದೆ, ಬೇಗ ಸರಿಪಡಿಸಿ

ಕತ್ತಲು ಆವರಿಸಿರುವ ಬಗ್ಗೆ ಮತ್ತು ಹೊಂಡಗಳು ಬಿದ್ದಿರುವ ಬಗ್ಗೆ ಹೆದ್ದಾರಿ ಇಲಾಖೆ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ಟೋಲ್‌ ನಿರ್ವಹಿಸುವವರೇ ಇದನ್ನು ನಿರ್ವಹಿಸಬೇಕಿದ್ದು ಸಂಸದರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲೂ ಹೆದ್ದಾರಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ತುರ್ತಾಗಿ ಇದನ್ನು ಸರಿಪಡಿಸುವಂತೆ ಸೂಚನೆ ನೀಡಲಾಗಿದೆ. ಇಲ್ಲಿವರೆಗೆ ಮಳೆ ಕಾರಣ ನೀಡುತ್ತಿದ್ದರು. ಈಗ ಮಳೆ ಬಿಟ್ಟಿದ್ದು ಶೀಘ್ರ ಹೆದ್ದಾರಿ ದಾರಿ ದೀಪಗಳ ದುರಸ್ತಿಗೆ ಮತ್ತೆ ಸೂಚನೆ ನೀಡಲಾಗುವುದು.
-ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು

ಎಷ್ಟು ದೂರು ನೀಡಿದರೂ ಸ್ಪಂದನೆ ಇಲ್ಲ

ದೀಪಗಳನ್ನು  ಸರಿಪಡಿಸುವಂತೆ ಗ್ರಾ.ಪಂ. ಮೂಲಕ ಹೈವೇ ಇಲಾಖೆ, ತಾಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಡಿಸಿ  ಜನ ಸ್ಪಂದನ ಸಭೆಯಲ್ಲೂ ದೂರು ನೀಡಲಾಗಿದೆ. ನರ ಸಮಸ್ಯೆ ಸರಿಪಡಿಸುವಂತೆ ಶಾಸಕರು, ಸಂಸದರು ಕೂಡ ಜಿಲ್ಲಾಡಳಿತ, ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆ ದಾರರಿಗೆ ಸೂಚನೆ ನೀಡಿದ್ದಾರೆ. ಆದರೂ ಇದಕ್ಕೆ ಇನ್ನೂ ಸ್ಪಂದನೆಯೇ ಸಿಕ್ಕಿಲ್ಲ.
-ಚಂದ್ರಶೇಖರ್‌ ಕೋಟ್ಯಾನ್‌, ಮಾಜಿ ಅಧ್ಯಕ್ಷರು, ಬಡಾ ಗ್ರಾ.ಪಂ.

– ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

2

Kadalekai Parishe: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.