Karnataka ರಾಜ್ಯ ಕಾಂಗ್ರೆಸ್ ಸಚಿವ ಸಂಪುಟಕ್ಕೆ ನನ್ನದೇ ಧ್ಯಾನ: ಎಚ್‌ಡಿಕೆ ವ್ಯಂಗ್ಯ
ಸರಕಾರದ ಬೆದರಿಕೆಗೆ ಬಗ್ಗುವುದಿಲ್ಲ: ಕೇಂದ್ರ ಸಚಿವ
Team Udayavani, Aug 19, 2024, 7:10 AM IST
ಬೆಂಗಳೂರು: “ಮುಖ್ಯ ಮಂತ್ರಿ ಆದಿಯಾಗಿ ಇಡೀ ಸಚಿವ ಸಂಪುಟವು ಶನಿವಾರದಿಂದ ಕುಮಾರ ಸ್ವಾಮಿ… ಕುಮಾರಸ್ವಾಮಿ ಎಂದು ನನ್ನದೇ ಧ್ಯಾನ ಮಾಡುತ್ತಿದೆ’ ಎಂದು ವ್ಯಂಗ್ಯವಾಡಿರುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಸರಕಾರ ಹಾಗೂ ಸಚಿವರು ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆಲ್ಲ ಜಗ್ಗುವ ಜಾಯಮಾನ ನನ್ನದಲ್ಲ ಎಂದು ಗುಡುಗಿದ್ದಾರೆ.
“ಜಂತಕಲ್ ಮೈನಿಂಗ್ ಪ್ರಕರಣ 150 ಕೋಟಿ ರೂ.ಗಳದು ಎನ್ನುತ್ತಿದ್ದಾರೆ. ಆದರೆ ಆ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಸಾಯಿ ವೆಂಕಟೇಶ್ವರ ಮೈನಿಂಗ್ ಪ್ರಕರಣ ಮುಂದಿಟ್ಟುಕೊಂಡು ಸರಕಾರ ನನ್ನನ್ನು ಬ್ಲ್ಯಾಕ್‌ವೆುàಲ್ ಮಾಡುತ್ತಿದೆ. ಅದರಲ್ಲಿ ಎಸ್‌ಐಟಿ ಅಭಿಯೋಜನೆಗೆ ಅನುಮತಿ ಕೇಳಿದೆ ಎನ್ನುತ್ತಿದ್ದಾರೆ. ಅಭಿಯೋಜನೆಗೆ ರಾಜ್ಯಪಾಲರಿಂದ ಅನುಮತಿ ತೆಗೆದುಕೊಂಡು ಬನ್ನಿ ಎಂದು ಕೋರ್ಟ್ ಹೇಳಿದೆಯೇ’ ಎಂದು ಪ್ರಶ್ನಿಸಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, “ನನ್ನನ್ನು ಹೆದರಿಸಲು ಇದನ್ನೆಲ್ಲ ಮಾಡು ತ್ತಿದ್ದೀರಿ ಅಲ್ಲವೇ? ಯಾಕೆ ಈ ನಾಟಕಗಳು? ನಿಮ್ಮ ಗೊಡ್ಡು ಬೆದರಿಕೆಗೆ ನಾನು ಹೆದರುತ್ತೇನೆಯೇ? ಅದು ನಿಮ್ಮ ಭ್ರಮೆಯಷ್ಟೇ’ ಎಂದು ತಿರುಗೇಟು ನೀಡಿದರು.
“ಇದನ್ನೆಲ್ಲ ಕೇರ್ ಮಾಡುವ ವ್ಯಕ್ತಿ ನಾನಲ್ಲ. ಈ ಸರಕಾರಕ್ಕೂ ಅದು ಗೊತ್ತಿದೆ. ನನ್ನ ವಿರುದ್ಧ ಅಭಿಯೋಜನೆ ಆವಶ್ಯಕತೆ ಏನಿದೆ? ಸಾಯಿ ವೆಂಕಟೇಶ್ವರ ಮಿನರಲ್ ಪ್ರಕರಣದಲ್ಲಿ ಇವರು ಯಾಕೆ ಸುಪ್ರೀಂ ಕೋರ್ಟ್‌ಗೆ ಹೋಗಿಲ್ಲ? ಈಗ ಶನಿವಾರ ಬೆಳಗ್ಗೆಯಿಂದ ಮುಖ್ಯಮಂತ್ರಿಯಾದಿಯಾಗಿ ಇಡೀ ಮಂತ್ರಿಮಂಡಲ ಕುಮಾರಸ್ವಾಮಿ, ಕುಮಾರಸ್ವಾಮಿ ಎಂದು ಧ್ಯಾನ ಮಾಡುತ್ತಿದೆ’ ಎಂದು ಟೀಕಿಸಿದರು.
“2006ರಲ್ಲಿ ನಾನು ಮುಖ್ಯಮಂತ್ರಿ ಆದ ಎರಡೇ ತಿಂಗಳಿಗೆ ಗಣಿಗಾರಿಕೆ ಮಾಲಕರಿಂದ 150 ಕೋಟಿ ರೂ. ಹಣ ಸಂಗ್ರಹ ಮಾಡಿದ್ದೇನೆ ಎಂದು ಆರೋಪ ಮಾಡಿದ್ದರು. ಜಂತಕಲ್ ಪ್ರಕರಣದಲ್ಲಿ ಇದೇ ಸಿಡಿ ಶಿವು, ಶ್ರೀನಿವಾಸಪುರದವರು ಹೈದರಾಬಾದ್‌ಗೆ ಹೋಗಿಬಂದು ಸಿಡಿ ಶೋ ಮಾಡಿ, ವಿಧಾನಸಭೆ ಕಲಾಪಕ್ಕೆ ಬಂದು ಆಪರೇಶನ್ ಸಕ್ಸಸ್ ಎಂದು ಹೇಳಿದ್ದರು. ನನ್ನ ಬಗ್ಗೆ ವಿಧಾನಸಭೆಯಲ್ಲಿ ದೊಡ್ಡ ಚರ್ಚೆ ನಡೆಯಿತು. ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದೆ . ಸಿದ್ದರಾಮಯ್ಯ ಅವರಿಗೆ ಇದು ನೆನಪಿದೆಯಾ?’ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
“ನನ್ನ ಮೇಲೆ 150 ಕೋಟಿ ರೂ. ಆಪಾದನೆ ಬಂದಾಗ ಅಶೋಕ್, ಅರವಿಂದ ಲಿಂಬಾವಳಿ, ಜಗದೀಶ್ ಶೆಟ್ಟರ್ ನನ್ನ ಬಳಿಗೆ ಬಂದು ಬಳ್ಳಾರಿಯ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವು ದನ್ನು ರದ್ದು ಪಡಿಸಿ. ಮತ್ತೆ ಅವರನ್ನು ಅಲ್ಲಿಗೆ ಮರು ನೇಮಕ ಮಾಡಿ. ಆಗ 150 ಕೋಟಿ ರೂ. ಆರೋಪ ಮಾಡಿದ್ದಕ್ಕೆ ಕ್ಷಮೆ ಕೇಳುತ್ತೇನೆ ಎಂದಿದ್ದರು. ಆದರೆ ನಾನು ನಥಿಂಗ್ ಡೂಯಿಂಗ್ ಎಂದು ಹೇಳಿ, ಮುಖ್ಯಮಂತ್ರಿಯಾಗಿ ವರ್ಗಾವಣೆ ಮಾಡಿದ್ದೇನೆ, ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದೆ ಎಂದು ಕುಮಾರಸ್ವಾಮಿ ಮೆಲುಕು ಹಾಕಿದರು.
ಈಗ ಗಂಗೇನಹಳ್ಳಿ ಪ್ರಕರಣ (ಗಂಗೇನಹಳ್ಳಿಯ ಮಠದ ಬಡಾವಣೆಯಲ್ಲಿ 1.11 ಎಕರೆ ಡಿನೋಟಿಫಿ ಕೇಷನ್ ಮಾಡಲು 2007ರಲ್ಲಿ ಮುಖ್ಯಮಂತ್ರಿ ಪ್ರಯತ್ನಿಸಿದ್ದರು) ಹಿಡಿದುಕೊಂಡು ಏನಾದರೂ ಮಾಡಿ ಎನ್ನುತ್ತಿದ್ದಾರೆ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದರು.
ಸಿದ್ದುಗೆ “ಬಂಡೆ’ ಅಪಾಯ
ಯಾರೋ ಒಬ್ಬರು ಸಿದ್ದರಾಮಯ್ಯನವರ ಜತೆ ಬಂಡೆಯಂತೆ ನಿಲ್ಲುವೆ ಎಂದು ಸೋಗು ಹಾಕು ತ್ತಿದ್ದಾರೆ. ಆ ಬಂಡೆಯಿಂದಲೇ ಸಿದ್ದರಾಮಯ್ಯ ಅವ ರಿಗೆ ಅಪಾಯ. ಆ ಬಂಡೆಯಿಂದಲೇ ಸಿದ್ದರಾಮಯ್ಯ ಅವರಿಗೆ ಈ ಗತಿ ಬಂದಿದೆ ಎಂದು ಎಚ್‌ಡಿಕೆ ಹೇಳಿದರು.
ನಮಗೆ ಬೇರೆ ಕೆಲಸ ಇಲ್ಲವೇ?
ದೇವೇಗೌಡರು, ಕುಮಾರಸ್ವಾಮಿ ಹಟ ಹಿಡಿದು ಮೋದಿ, ಅಮಿತ್ ಶಾ ಅವರ ಮೇಲೆ ಒತ್ತಡ ಹೇರಿ ರಾಜ್ಯಪಾಲರಿಂದ ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ಕೊಡಿಸಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಮಗೇನು ಬೇರೆ ಕೆಲಸ ಇಲ್ಲವೇ? ಅವರ ಪಕ್ಷದ ಪಿತೂರಿಗೆ ಸಿದ್ದರಾಮಯ್ಯ ಅವರು ಬಲಿಯಾಗುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಏನಿದು ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣ?
ಕುಮಾರಸ್ವಾಮಿ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದಾಗ 2007ರಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಅಕ್ರಮವಾಗಿ 550 ಎಕ್ರೆ ಗಣಿ ಗುತ್ತಿಗೆ ಮಂಜೂರು ಮಾಡಿದ್ದಾರೆ ಎಂದು ಆಗ ಲೋಕಾಯುಕ್ತರಾಗಿದ್ದ ನ್ಯಾಣ ಸಂತೋಷ್ ಹೆಗ್ಡೆ ಅವರು ವರದಿಯಲ್ಲಿ ಉಲ್ಲೇಖಿಸಿದ್ದರು. ಈ ವರದಿಯ ಆಧಾರದಲ್ಲಿ ವಿಶೇಷ ತನಿಖಾ ದಳ ದೂರು ದಾಖಲಿಸಿತ್ತು. ಈ ಪ್ರಕರಣ ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ವಿವಿಧ ಹಂತದ ಕಾನೂನು ಹೋರಾಟಗಳನ್ನು ಕಂಡಿದೆ. 2023ರ ನವೆಂಬರ್‌ನಲ್ಲಿ ಲೋಕಾಯುಕ್ತ ಪೊಲೀಸರು ಕುಮಾರಸ್ವಾಮಿ ಅವರ ಅಭಿಯೋಜನೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಈ ಪ್ರಕರಣದಲ್ಲಿ 2015ರಲ್ಲಿ ಕುಮಾರಸ್ವಾಮಿ ಅವರನ್ನು ವಿಶೇಷ ತನಿಖಾ ದಳ ವಶಕ್ಕೆ ತೆಗೆದುಕೊಂಡಿತ್ತು. ಬಳಿಕ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಕೇಳಿಲ್ಲ. ಅವರು ರಾಜೀನಾಮೆ ಕೊಡುವುದೂ ಇಲ್ಲ, ಅದು ನನಗೆ ಗೊತ್ತಿದೆ. ಕಾನೂನು ಎಂಬುದೊಂದಿದೆ. ಯಾವ ಹಂತದಲ್ಲಿ ಏನು ತೀರ್ಮಾನ ಆಗಬೇಕೋ ಅದು ಆಗುತ್ತದೆ.
– ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.