G Boss ಎಂದು ಕರೆಯಬೇಡಿ..: ಫ್ಯಾನ್ಸ್ಗೆ ಗಣೇಶ್ ಮನವಿ
Team Udayavani, Aug 19, 2024, 10:53 AM IST
“ನನ್ನನ್ನು ಜಿ ಬಾಸ್ ಎಂದು ಕರೆಯಬೇಡಿ, ಪ್ರೀತಿಯಿಂದ ಗೋಲ್ಡನ್ಸ್ಟಾರ್ ಅನ್ನಿ ಸಾಕು…’ – ಹೀಗೆ ಹೇಳಿದ್ದು ನಟ ಗಣೇಶ್.
ಇತ್ತೀಚೆಗೆ “ಕೃಷ್ಣಂ ಪ್ರಣಯ ಸಖಿ’ ಚಿತ್ರದ ಬಿಡುಗಡೆ ವೇಳೆ ಅಭಿಮಾನಿ ಗಳು “ಜಿ ಬಾಸ್ ಜಿ ಬಾಸ್’ ಎಂದು ಘೋಷಣೆ ಕೂಗುತ್ತಿದ್ದರು. ಇದು ಗಣೇಶ್ ಅವರ ಕಿವಿಗೆ ಬಿದ್ದಿದೆ. ಇದೇ ಕಾರಣದಿಂದ ಅಭಿಮಾನಿ ಗಳಲ್ಲಿ ಗಣೇಶ್ ಮನವಿ ಮಾಡಿ ಕೊಂಡಿದ್ದು.
“ನನಗೆ ನಿಮ್ಮ ಮನೆ ಹುಡುಗನಾಗಿ, ನಿಮ್ಮ ಪ್ರೀತಿಯ ಗೋಲ್ಡನ್ಸ್ಟಾರ್ ಆಗಿ ಇರಲು ಬಯಸುತ್ತೇನೆ. ಹಾಗಾಗಿ, ಯಾರೂ ನನ್ನನ್ನು “ಜಿ ಬಾಸ್’ ಎಂದು ಕರೆಯಬೇಡಿ’ ಎಂದು ಗಣೇಶ್ ಮನವಿ ಮಾಡಿಕೊಂಡರು.
ಗಣೇಶ್ ಅವರು ನಟಿಸಿರು ʼಕೃಷ್ಣಂ ಪ್ರಣಯ ಸಖಿʼ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಚಿತ್ರದಲ್ಲಿ ಗಣೇಶ್ ಜತೆಗೆ ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ, ರಂಗಾಯಣ ರಘು ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಚಿತ್ರದ ʼದ್ವಾಪರʼ ಹಾಡು ಸೂಪರ್ ಹಿಟ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.