Shivanna 131: ಶಿವರಾಜ್ ಕುಮಾರ್ ಶೂಟಿಂಗ್ ಸೆಟ್‌ಗೆ ನಟ ಯಶ್ ಭೇಟಿ; ಫೋಟೋಸ್ ವೈರಲ್
ಒಂದೇ ಸಿನಿಮಾದಲ್ಲಿ ಯಶ್ - ಶಿವಣ್ಣ ನಟನೆ?
Team Udayavani, Aug 19, 2024, 3:14 PM IST
ಬೆಂಗಳೂರು: ಸಾಲು ಸಾಲು ಚಿತ್ರಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivaraj Kumar) ಬ್ಯುಸಿಯಾಗಿದ್ದಾರೆ. ತನ್ನ ಮುಂದಿನ ಪ್ರಾಜೆಕ್ಟ್ ಗಳ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.
ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಅವರೊಂದಿಗೆ ಶಿವಣ್ಣ ಅವರ 131ನೇ(Shivanna 131) ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾದ ಈಗಾಗಲೇ ಸೆಟ್ಟೇರಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಇದನ್ನೂ ಓದಿ: Kollywood: ರಜಿನಿಕಾಂತ್ ʼವೆಟ್ಟೈಯನ್ʼ ರಿಲೀಸ್ ಡೇಟ್ ಔಟ್; ʼಕಂಗುವʼ ಜತೆ ಕ್ಲ್ಯಾಶ್
ಶಿವಣ್ಣ ಅವರ ʼ131ʼ ಸಿನಿಮಾ ಚಿತ್ರೀಕರಣದ ಸೆಟ್ ಗೆ ರಾಕಿಂಗ್ ಸ್ಟಾರ್ ಯಶ್(Actor Yash) ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟ ಯಶ್ ಶಿವರಾಜ್ ಅವರೊಂದಿಗೆ ಆತ್ಮೀಯವಾಗಿ ಕಾಣಿಸಿಕೊಂಡಿದ್ದು, ಕೈ ಕುಲುಕಿಕೊಂಡು ಕಾಣಿಸಿರುವ ಲುಕ್ ಫ್ಯಾನ್ಸ್ ವಲಯದಲ್ಲಿ ವೈರಲ್ ಆಗಿದೆ. ಶಿವಣ್ಣ ಉದ್ದ ಕೂದಲು ಬಿಟ್ಟು ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಯಶ್ ಗಡ್ಡ ಬಿಟ್ಟು ಸ್ಮಾರ್ಟ್ ಆಗಿ ಕಾಣಿಸಿದ್ದಾರೆ.
.@NimmaShivanna x @TheNameIsYash
Rocking Star Yash met Shivanna at #Shivanna131 set today 💥#Shivanna #YashBoss #ToxicTheMovie pic.twitter.com/6sxDJZMaMH
— Bhargavi (@IamHCB) August 19, 2024
ಯಶ್ ಶಿವಣ್ಣ ಅವರ ಸಿನಿಮಾ ಸೆಟ್‌ಗೆ ಭೇಟಿ ನೀಡಿದ ಫೋಟೋಗಳು ವೈರಲ್ ಆಗುತ್ತಿದ್ದಂತೆ ಶಿವಣ್ಣ ಅವರ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಇತ್ತ ಶಿವರಾಜ್ ಕುಮಾರ್ ಸದ್ಯ ʼಭೈರತಿ ರಣಗಲ್ʼ, ಅರ್ಜುನ್ ಜನ್ಯ ಅವರ ʼ45ʼ, ‘ಭೈರವನ ಕೊನೆ ಪಾಠʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯ ಯಶ್ ʼಟಾಕ್ಸಿಕ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದು,ಇತ್ತ ಶಿವರಾಜ್ ಕುಮಾರ್ ಸದ್ಯ ʼಭೈರತಿ ರಣಗಲ್ʼ, ಅರ್ಜುನ್ ಜನ್ಯ ಅವರ ʼ45ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.