Emergency ನಂತರ ಭಾರತೀಯರು ಜನಸಂಖ್ಯೆ ನಿಯಂತ್ರಣಕ್ಕೆ ಗಮನ ಕೊಟ್ಟಿಲ್ಲ: ನಾರಾಯಣಮೂರ್ತಿ
ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದು ನಿಜವಾದ ವೃತ್ತಿಪರರ ಹೊಣೆಗಾರಿಕೆಯಾಗಿದೆ
Team Udayavani, Aug 19, 2024, 4:00 PM IST
ಪ್ರಯಾಗ್ ರಾಜ್(ಉತ್ತರಪ್ರದೇಶ): ಭಾರತದಲ್ಲಿ ಹೆಚ್ಚಳವಾಗುತ್ತಿರುವ ಜನಸಂಖ್ಯೆ ಕುರಿತು ಕಳವಳ ವ್ಯಕ್ತಪಡಿಸಿರುವ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು, ತುರ್ತು ಪರಿಸ್ಥಿತಿಯ ನಂತರ ಭಾರತೀಯರು ಜನಸಂಖ್ಯೆ ನಿಯಂತ್ರಣ ಮಾಡಲು ಯಾವುದೇ ಗಮನಹರಿಸಿಲ್ಲ ಎಂದು ಹೇಳಿದರು.
ಅವರು ಭಾನುವಾರ (ಆ.18) ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮೋತಿಲಾಲ್ ನೆಹರು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವೇಳೆ ಈ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಭಾರತವು ಜನಸಂಖ್ಯೆ ಹೆಚ್ಚಳದಿಂದ ಗುರುತರ ಸಮಸ್ಯೆಯನ್ನು ಎದುರಿಸುವಂತಾಗಿದೆ, ತಲಾದಾಯ ಭೂಮಿ ಲಭ್ಯತೆ ಹಾಗೂ ಆರೋಗ್ಯ ಸೇವೆಯ ಅಗತ್ಯದ ಕೊರತೆ ಎದುರಿಸುತ್ತಿದೆ ಎಂದು ನಾರಾಯಣಮೂರ್ತಿ ತಿಳಿಸಿದರು.
“ತುರ್ತು ಪರಿಸ್ಥಿತಿ ಸಮಯದಿಂದ ಈವರೆಗೂ ನಾವು ಭಾರತೀಯರು ಜನಸಂಖ್ಯೆ ನಿಯಂತ್ರಣದ ಬಗ್ಗೆ ಗಮನ ಹರಿಸಿಲ್ಲ. ಇದರಿಂದಾಗಿ ನಮ್ಮ ದೇಶದ ಅಭಿವೃದ್ಧಿಗೆ ಸಮಸ್ಯೆಯಾಗಲಿದೆ. ಉದಾಹರಣೆಗೆ ಅಮೆರಿಕ, ಬ್ರೆಜಿಲ್ ಹಾಗೂ ಚೀನಾದ ತಲಾದಾಯ ಭೂಮಿ ಲಭ್ಯತೆ ಅಧಿಕ ಪ್ರಮಾಣದಲ್ಲಿದೆ. ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದು ನಿಜವಾದ ವೃತ್ತಿಪರರ ಹೊಣೆಗಾರಿಕೆಯಾಗಿದೆ” ಎಂದು ನಾರಾಯಣ ಮೂರ್ತಿ ಹೇಳಿದರು.
ಮುಂದಿನ ತಲೆಮಾರಿನ ಬದುಕು ಸುಧಾರಣೆಯಾಗಲು ಒಂದು ಜನರೇಶನ್ ಹಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ನನ್ನ ತಂದೆ, ತಾಯಿ, ಸಹೋದರರು, ಶಿಕ್ಷಕರು ನನ್ನ ಏಳಿಗೆಗಾಗಿ ಗಮನಾರ್ಹ ತ್ಯಾಗ ಮಾಡಿದ್ದರು. ಅವರ ತ್ಯಾಗ ವ್ಯರ್ಥವಾಗಲಿಲ್ಲ ಎನ್ನುವುದಕ್ಕೆ ನಾನು ಇಂದು ನಿಮ್ಮ ಮುಂದೆ ಮುಖ್ಯ ಅತಿಥಿಯಾಗಿ ನಿಂತಿರುವುದೇ ಸಾಕ್ಷಿಯಾಗಿದೆ ಎಂದು ನಾರಾಯಣಮೂರ್ತಿ ಸಲಹೆ ನೀಡಿದರು.
ಇದನ್ನೂ ಓದಿ:Shivanna 131: ಶಿವರಾಜ್ ಕುಮಾರ್ ಶೂಟಿಂಗ್ ಸೆಟ್‌ಗೆ ನಟ ಯಶ್ ಭೇಟಿ; ಫೋಟೋಸ್ ವೈರಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
ಹವಾಮಾನ ಹಣಕಾಸು ಪ್ಯಾಕೇಜ್ ತಿರಸ್ಕರಿಸಿದ ಭಾರತ
Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.