ICC ವಿಶ್ವ ಟೆಸ್ಟ್‌  ಚಾಂಪಿಯನ್‌ಶಿಪ್‌: ಭಾರತ, ಆಸ್ಟ್ರೇಲಿಯಕ್ಕೆ ಅವಕಾಶ ಅಧಿಕ

 ಫೈನಲ್‌ ರೇಸ್‌ನಿಂದ ಹೊರಬಿದ್ದ ವೆಸ್ಟ್‌ ಇಂಡೀಸ್‌

Team Udayavani, Aug 20, 2024, 6:20 AM IST

1-test

ದುಬಾೖ: ಮೂರನೇ ಆವೃತ್ತಿಯ, 2023-25ನೇ ಸಾಲಿನ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ನಿಕಟ ಪೈಪೋಟಿ ಕಾಣುವ ಸಾಧ್ಯತೆ ಹೆಚ್ಚಿದೆ. ಆದರೆ ಕ್ರಿಕೆಟ್‌ ವಿಶ್ಲೇಷಕರ ಪ್ರಕಾರ ಭಾರತ ಮತ್ತು ಆಸ್ಟ್ರೇಲಿಯ ತಂಡಗಳಿಗೆ ಫೈನಲ್‌ ಅವಕಾಶ ಹೆಚ್ಚು. ಹಾಗೆಯೇ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕಳೆದುಕೊಂಡ ವೆಸ್ಟ್‌ ಇಂಡೀಸ್‌ ಈಗಾಗಲೇ ಫೈನಲ್‌ ರೇಸ್‌ನಿಂದ ಹೊರಬಿದ್ದಿದೆ.
ಆಗಸ್ಟ್‌ 19ಕ್ಕೆ ಅನ್ವಯಿಸಿ ಹೇಳುವುದಾದರೆ, ಪ್ರಸಕ್ತ ಟೆಸ್ಟ್‌ ಚಾಂಪಿಯನ್‌ಶಿಪ್‌ ಆವೃತ್ತಿಯ ಲ್ಲಿನ್ನೂ 14 ಸರಣಿಗಳು ಬಾಕಿ ಉಳಿದಿವೆ. 9 ತಂಡಗಳೂ ಸೆಣಸಾಡಲಿಕ್ಕಿದೆ.

ನಿನ್ನೆಯಷ್ಟೇ ವೆಸ್ಟ್‌ ಇಂಡೀಸ್‌ ವಿರುದ್ಧ ಸರಣಿ ಗೆದ್ದ ದಕ್ಷಿಣ ಆಫ್ರಿಕಾ 5ನೇ ಸ್ಥಾನದಿಂದ ಮೇಲೆದ್ದಿಲ್ಲ. ಅದರ ಗೆಲುವಿನ ಪ್ರತಿಶತ ಸಾಧನೆ (ಪಿಸಿಟಿ) 38.89 ಮಾತ್ರ. ವೆಸ್ಟ್‌ ಇಂಡೀಸ್‌ 18.52 ಪಿಸಿಟಿಯೊಂದಿಗೆ ಕೊನೆಯ ಸ್ಥಾನಿಯಾಗಿದೆ.

ಭಾರತ ಟೇಬಲ್‌ ಟಾಪರ್‌
ಪ್ರಸ್ತುತ ಭಾರತ ತಂಡ ಅಗ್ರಸ್ಥಾನಿಯಾಗಿದೆ. 9 ಟೆಸ್ಟ್‌ಗಳಲ್ಲಿ ಆರನ್ನು ಗೆದ್ದಿರುವ ಭಾರತ, ಎರಡನ್ನು ಸೋತಿದೆ. ಪಿಸಿಟಿ 68.52. ಆಸ್ಟ್ರೇಲಿಯಕ್ಕೆ ದ್ವಿತೀಯ ಸ್ಥಾನ (62.50). ಅದು 12ರಲ್ಲಿ ಎಂಟನ್ನು ಗೆದ್ದಿದೆ; ಮೂರನ್ನು ಕಳೆದುಕೊಂಡಿದೆ. ನ್ಯೂಜಿಲ್ಯಾಂಡ್‌ 3ನೇ, ಶ್ರೀಲಂಕಾ 4ನೇ ಸ್ಥಾನದಲ್ಲಿವೆ (50.00). ಅನಂತರದ ಸ್ಥಾನದಲ್ಲಿರುವ ತಂಡಗಳೆಂದರೆ ದಕ್ಷಿಣ ಆಫ್ರಿಕಾ (38.89), ಪಾಕಿಸ್ಥಾನ (36.66), ಇಂಗ್ಲೆಂಡ್‌ (36.54) ಮತ್ತು ಬಾಂಗ್ಲಾದೇಶ (25.00).

ಭಾರತವಿನ್ನು ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್‌, ನ್ಯೂಜಿಲ್ಯಾಂಡ್‌ ವಿರುದ್ಧ 3 ಟೆಸ್ಟ್‌, ಆಸ್ಟ್ರೇಲಿಯ ವಿರುದ್ಧ 5 ಟೆಸ್ಟ್‌ ಆಡಲಿಕ್ಕಿದೆ. ಬಾಂಗ್ಲಾ ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧ ತವರಿನಲ್ಲಿ ಆಡುವುದರಿಂದ ಮೇಲುಗೈ ನಿರೀಕ್ಷಿಸಲಡ್ಡಿ ಯಿಲ್ಲ. ಆಗ ಭಾರತದ ಅಗ್ರಸ್ಥಾನಕ್ಕೇನೂ ಧಕ್ಕೆ ಆಗದು. ಆದರೆ ಬೋರ್ಡರ್‌-ಗಾವಸ್ಕರ್‌ ಟ್ರೋಫಿ ಸರಣಿಯ 5 ಪಂದ್ಯಗಳು ಆಸ್ಟ್ರೇಲಿಯದಲ್ಲಿ ನಡೆಯಲಿರುವುದರಿಂದ ಇಲ್ಲಿ ಕಠಿನ ಸವಾಲು ಎದುರಾಗುವ ನಿರೀಕ್ಷೆ ಇದೆ. ಈ ಆವೃತ್ತಿಯಲ್ಲಿ ಆಸ್ಟ್ರೇಲಿಯಕ್ಕೆ ಬೇರೆ ಯಾವುದೇ ಟೆಸ್ಟ್‌ ಸರಣಿಗಳಿಲ್ಲ.

ಟೆಸ್ಟ್‌  ಚಾಂಪಿಯನ್‌ಶಿಪ್‌
ತಂಡ ಪಿಸಿಟಿ
1. ಭಾರತ 68.52
2. ಆಸ್ಟ್ರೇಲಿಯ 62.50
3. ನ್ಯೂಜಿಲ್ಯಾಂಡ್‌ 50.00
4. ಶ್ರೀಲಂಕಾ 50.00
5. ದ.ಆಫ್ರಿಕಾ 38.89
6. ಪಾಕಿಸ್ಥಾನ 36.66
7. ಇಂಗ್ಲೆಂಡ್‌ 36.54
8. ಬಾಂಗ್ಲಾ 25.00
9. ವಿಂಡೀಸ್‌ 18.52

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

1-malavika

China ಓಪನ್‌ ಬ್ಯಾಡ್ಮಿಂಟನ್‌:ಮಾಳವಿಕಾ ಕ್ವಾರ್ಟರ್‌ ಫೈನಲಿಗೆ

1-frrr

Duleep Trophy Cricket: ಸ್ಯಾಮ್ಸನ್‌ ಅರ್ಧಶತಕ; ಭಾರತ ‘ಡಿ’ 5ಕ್ಕೆ 306

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.