![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 20, 2024, 12:31 AM IST
ಸಿನ್ಸಿನಾಟಿ: ಸಿನ್ಸಿನಾಟಿ ಓಪನ್ ಟೆನಿಸ್ ಪಂದ್ಯಾವಳಿಯ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ, ಇಟಲಿಯ ಜಾನಿಕ್ ಸಿನ್ನರ್ ಮತ್ತು ಅಮೆರಿಕದ ಫ್ರಾನ್ಸೆಸ್ ಥಿಯಾಫೊ ಮುಖಾಮುಖೀ ಆಗಲಿದ್ದಾರೆ.
ಜಿದ್ದಾಜಿದ್ದಿ ಸೆಮಿಫೈನಲ್‌ನಲ್ಲಿ ಜಾನಿಕ್ ಸಿನ್ನರ್ 7-6 (9), 5-7, 7-6 (4) ಅಂತರದಿಂದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಅವರನ್ನು ಮಣಿಸಿದರು. ಜ್ವೆರೇವ್ ಇಲ್ಲಿ 3 ವರ್ಷಗಳ ಹಿಂದೆ ಚಾಂಪಿಯನ್ ಆಗಿದ್ದರು. ಇಬ್ಬರ ನಡುವೆ 3 ಗಂಟೆ, 7 ನಿಮಿಷಗಳ ಹೋರಾಟ ನಡೆಯಿತು.
ಇನ್ನೊಂದು ಸೆಮಿಫೈನಲ್‌ನಲ್ಲಿ ಯಾವುದೇ ಶ್ರೇಯಾಂಕ ಹೊಂದಿಲ್ಲದ ಫ್ರಾನ್ಸೆಸ್ ಥಿಯಾಫೊ 4-6, 6-1, 7-6 (4) ಅಂತರದಿಂದ ಡೆನ್ಮಾರ್ಕ್‌ನ ಹೋಲ್ಜರ್ ರುನೆ ವಿರುದ್ಧ ಜಯ ಸಾಧಿಸಿದರು. ಥಿಯಾಫೊ 2013ರ ಬಳಿಕ ಸಿನ್ಸಿನಾಟಿ ಫೈನಲ್ ತಲುಪಿದ ಅಮೆರಿಕದ ಮೊದಲ ಆಟಗಾರ. ಅಂದು ಜಾನ್ ಇಸ್ನರ್ ಪ್ರಶಸ್ತಿ ಸುತ್ತಿಗೆ ಏರಿದ್ದರು.
ಸಬಲೆಂಕಾ-ಪೆಗುಲಾ ಫೈನಲ್
ವನಿತಾ ವಿಭಾಗದಲ್ಲಿ ಬೆಲರೂಸ್‌ನ ಅರಿನಾ ಸಬಲೆಂಕಾ ಮತ್ತು ಅಮೆರಿಕದ ಜೆಸ್ಸಿಕಾ ಪೆಗುಲಾ ಎದುರಾಗಲಿದ್ದಾರೆ. ಸಬಲೆಂಕಾ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರನ್ನು 6-3, 6-3 ನೇರ ಸೆಟ್‌ಗಳಿಂದ ಪರಾಭವಗೊಳಿಸಿದರೆ, ಜೆಸ್ಸಿಕಾ ಪೆಗುಲಾ ಸ್ಪೇನ್‌ನ ಪೌಲಾ ಬಡೋಸಾ ವಿರುದ್ಧ 6-2, 6-3, 6-3 ಅಂತರದ ಜಯ ಸಾಧಿಸಿದರು.
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.