Hosanagara: ಶಾಲೆ ಬಿಸಿಯೂಟ ಕೊಠಡಿಯಲ್ಲಿ ಅವಿತಿದ್ದ 9 ಅಡಿ ಉದ್ದದ ಕಾಳಿಂಗ ಸರ್ಪ
Team Udayavani, Aug 20, 2024, 8:07 AM IST
ಹೊಸನಗರ: ತಾಲೂಕಿನ ಸಂಪೆಕಟ್ಟೆಯ ಮತ್ತಿಕೈ ಶಾಲೆಯ ಬಿಸಿಯೂಟ ದಾಸ್ತಾನು ಕೊಠಡಿಯಲ್ಲಿ ಅವಿತಿದ್ದ 9 ಅಡಿ ಗಾತ್ರದ ಕಾಳಿಂಗ ಸರ್ಪವನ್ನು,ಸೋಮವಾರ ಆಗುಂಬೆ ಮಳೆಕಾಡು ಸಂಶೋಧನ ಕೇಂದ್ರದ ಉರಗ ತಜ್ಞ ಅಜಯಗಿರಿ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಕ್ಕೆ ಬಿಟ್ಟರು.
ಸೋಮವಾರ ಬೆಳಿಗ್ಗೆ ಅಡುಗೆ ಸಹಾಯಕಿ ಪ್ರೇಮ, ಅಕ್ಕಿ ಬೇಳೆಗಾಗಿ ಬಿಸಿಯೂಟ ದಾಸ್ತಾನು ಕೊಠಡಿಯ ಬಾಗಿಲು ತೆರೆದಾಗ ಕಾಣಿಸಿಕೊಂಡಿದೆ. ಮಕ್ಕಳು ಕೂಡ ಶಾಲೆಗೆ ಆಗಮಿಸಿದ್ದರು. ತರಗತಿ ಕೊಠಡಿ ನಡುವೆ ಅಂತರವಿರುವ ಕಾರಣ.. ಮಕ್ಕಳು ಬಿಸಿಯೂಟದ ಕೊಠಡಿಯ ಹತ್ತಿರ ಸುಳಿದಿರಲಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಶಿಕ್ಷಕ ಸುಪ್ರಿತ್ ಡಿಸೋಜ ಕೊಠಡಿಯ ಬಾಗಿಲು ಹಾಕಿ ಹಾವನ್ಜು ಬಂಧಿ ಮಾಡಿದರು. ನಂತರ ಪೋಷಕರಿಗೆ ಸುದ್ದಿ ಮುಟ್ಟಿಸಿದರು ಬಳಿಕ ಅರಣ್ಯ ಇಲಾಖೆಯ ಮೂಲಕ ಅಜಯಗಿರಿಯನ್ನು ಸಂಪರ್ಕಿಸಲಾಯಿತು.
ಶನಿವಾರವೇ ಕಾಳಿಂಗ ಸರ್ಪ ಒಳಗಡೆ ಸೇರಿಕೊಂಡಿರಬೇಕು. ಹೊರಗೆ ಹೋಗಲು ಅವಕಾಶವಿಲ್ಲದೇ ಅಲ್ಲೇ ಉಳಿಯುವಂತಾಗಿತ್ತು ಎನ್ನುತ್ತಾರೆ. ಕಾಳಿಂಗ ಸರ್ಪವನ್ನು ಸೆರೆ ಹಿಡಿದ ನಂತರ ಮಕ್ಕಳು ಮತ್ತು ಪೋಷಕರಿಗೆ ಅಜಯಗಿರಿ, ಕಾಳಿಂಗ ಸರ್ಪ ಕಂಡುಬಂದಾಗ ಮುಂಜಾಗ್ರತಾ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ನಗರ ವಲಯ ಅರಣ್ಯಾಧಿಕಾರಿ ಸಂತೋಷ್ ಮಲ್ಲನಗೌಡರ್ ಸೇರಿದಂತೆ ಇಲಾಖೆ ಸಿಬ್ಬಂದಿ ಹಾಜರಿದ್ದರು.
ಇದನ್ನೂ ಓದಿ: Train ಮಾರ್ಗದ ಮಣ್ಣು ತೆರವು ಪೂರ್ಣ: ಮಂಗಳೂರು-ಬೆಂಗಳೂರು ರೈಲು ಸಂಚಾರ ಮತ್ತೆ ಆರಂಭ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.