Special Laddu Recipe; ಈ ಲಾಡು ಬಾಯಲ್ಲಿ ಇಟ್ಟರೆ ಸಾಕು ಹಾಗೇ ಕರಗಿ ಹೋಗುತ್ತೆ…
ಶ್ರೀರಾಮ್ ನಾಯಕ್, Aug 20, 2024, 6:16 PM IST
ನಾಗರ ಪಂಚಮಿ ಕಳೆದರೆ ಸಾಕು ಮತ್ತೆ ಸಾಲು ಸಾಲು ಹಬ್ಬಗಳ ಸರದಿ, ಹಬ್ಬಗಳು ಎಂದಾಕ್ಷಣ ಮನೆಯಲ್ಲಿ ಸಿಹಿ ಇರಲೇ ಬೇಕು ಹಾಗಾಗಿ ಈ ಬಾರಿಯ ಹಬ್ಬಕ್ಕೆ ನೀವೇ ಮನೆಯಲ್ಲಿ ಈ ಲಡ್ಡು ತಯಾರಿಸಿ.
ಹಾಗಾದರೆ ಬನ್ನಿ ನಾವಿಂದು ನಿಮಗಾಗಿ ತುಂಬಾನೇ ಮೃದುವಾಗಿರುವ ಗೋಧಿ ಹಿಟ್ಟಿನ ಲಡ್ಡು ಹೇಗೆ ಮಾಡುವುದು ಎಂಬುವುದರ ಬಗ್ಗೆ ಹೇಳಿಕೊಡುತ್ತೇವೆ. ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಬಹುದು. ಗೋಧಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ. ಕಬ್ಬಿಣಾಂಶ ಹೇರಳವಾಗಿರುವ ಗೋಧಿಯಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
ಗೋಧಿ ಹಿಟ್ಟಿನ ಲಡ್ಡು
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು -2 ಕಪ್,ಸಕ್ಕರೆ ಪುಡಿ – 2 ಕಪ್,ಏಲಕ್ಕಿ ಪುಡಿ – 1 ಟೀಸ್ಪೂನ್,ತುಪ್ಪ -7 ರಿಂದ8 ಚಮಚ,ಗೋಡಂಬಿ – 8-10,ಒಣದ್ರಾಕ್ಷಿ – 10.
ತಯಾರಿಸುವ ವಿಧಾನ
ಮೊದಲಿಗೆ ಒಂದು ಬಾಣಲೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ ನಂತರ ಅದಕ್ಕೆ 2 ಕಪ್ ನಷ್ಟು ಗೋಧಿ ಹಿಟ್ಟು ಸೇರಿಸಿ ಮಧ್ಯಮ ಉರಿಯಲ್ಲಿ ಹುರಿಯಿರಿ. ಈ ಮಿಶ್ರಣವು ಗೋಲ್ಡನ್ ಬ್ರೌನ್ ಬರುವ ತನಕ ಹುರಿಯಿರಿ, ನಿಮಗೆ ಆಹ್ಲಾದಕರ ಪರಿಮಳವನ್ನು ನೀಡಲು ಪ್ರಾರಂಭಿಸುತ್ತದೆ. ಆಗ ಇನ್ನೊಂದು ಪಾತ್ರೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ.ತದನಂತರ ಈ ಮಿಶ್ರಣಕ್ಕೆ 2 ಕಪ್ ಸಕ್ಕರೆ ಪುಡಿ,ಸ್ವಲ್ಪ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.ನಂತರ ತುಪ್ಪದಲ್ಲಿ ಹುರಿದಿಟ್ಟುಕೊಂಡ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹಾಕಿ ಕಲಸಿ ಉಂಡೆ ಕಟ್ಟಿದರೆ ಗೋಧಿ ಹಿಟ್ಟಿನ ಲಡ್ಡು ರೆಡಿ.ಇದು ತುಂಬಾನೇ ಮೃದು ಹಾಗೆಯೇ ರುಚಿಯೂ ಅದ್ಭುತ.ನೀವು ಸಹ ಒಮ್ಮೆ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ…
-ಶ್ರೀರಾಮ್ ಜಿ .ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.