Cincinnati Open Tennis; ಸಿನ್ನರ್, ಸಬಲೆಂಕಾ ಚಾಂಪಿಯನ್ಸ್
Team Udayavani, Aug 20, 2024, 10:35 PM IST
ಸಿನ್ಸಿನಾಟಿ: “ಸಿನ್ಸಿನಾಟಿ ಓಪನ್’ ಟೆನಿಸ್ ಪಂದ್ಯಾವಳಿಯಲ್ಲಿ ವಿಶ್ವದ ನಂ.1 ಆಟಗಾರ ಇಟಲಿಯ ಜಾನಿಕ್ ಸಿನ್ನರ್ ಮತ್ತು ಬೆಲರೂಸ್ನ ಅರಿನಾ ಸಬಲೆಂಕಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್ನಲ್ಲಿ ಇವರಿಬ್ಬರೂ ಅಮೆರಿಕನ್ ಆಟಗಾರರನ್ನೇ ಸೋಲಿಸಿದ್ದು ವಿಶೇಷ.
ಪುರುಷರ ಫೈನಲ್ನಲ್ಲಿ ಇಟಲಿಯ ಜಾನಿಕ್ ಸಿನ್ನರ್ 7-6 (4), 6-2 ಅಂತರದಿಂದ ಫ್ರಾನ್ಸೆಸ್ ಥಿಯಾಫೊ ಅವರನ್ನು ಮಣಿಸಿದರು. ವನಿತಾ ಸಿಂಗಲ್ಸ್ನಲ್ಲಿ ಅರಿನಾ ಸಬಲೆಂಕಾ 6-3, 7-5ರಿಂದ ಜೆಸ್ಸಿಕಾ ಪೆಗುಲಾ ಆಟವನ್ನು ಕೊನೆಗಾಣಿಸಿದರು.
ವರ್ಷದ 5ನೇ ಪ್ರಶಸ್ತಿ
23 ವರ್ಷದ ಜಾನಿಕ್ ಸಿನ್ನರ್ ಈ ವರ್ಷ ಗೆದ್ದ 5ನೇ ಟೆನಿಸ್ ಪ್ರಶಸ್ತಿ ಇದಾಗಿದೆ. ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿರುವ ಸಿನ್ನರ್, ಸಿನ್ಸಿನಾಟಿಯಲ್ಲಿ ಪ್ರಶಸ್ತಿ ಎತ್ತಿದ್ದು ಕೂಡ ಮೊದಲು.
ದೊಡ್ಡ ಸಾಧನೆ
ಮಾಸನ್ನಲ್ಲಿ ನಡೆದ ವನಿತಾ ಫೈನಲ್ನಲ್ಲಿ ಜೆಸ್ಸಿಕಾ ಪೆಗುಲಾ ಹಾಟ್ ಫೇವರಿಟ್ ಆಗಿದ್ದರು. ಕಳೆದ ವಾರವಷ್ಟೇ ಟೊರೊಂಟೊ ಡಬ್ಲ್ಯುಟಿಎ 1 ,000 ಪ್ರಶಸ್ತಿ ಗೆದ್ದು ಬಂದಿದ್ದರು. ಆದರೆ ಭುಜದ ನೋವಿನಿಂದಾಗಿ ವಿಂಬಲ್ಡನ್ನಿಂದ ಹೊರಗುಳಿದಿದ್ದ ಅರಿನಾ ಸಬಲೆಂಕಾ, ಇಲ್ಲಿ ಹೊಸ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.