IPL: ಬಿಸಿಸಿಐಗೆ ಬಂಪರ್ ಲಾಭ
Team Udayavani, Aug 21, 2024, 6:35 AM IST
ಹೊಸದಿಲ್ಲಿ: ಐಪಿಎಲ್ನಿಂದಾಗಿ ಬಿಸಿಸಿಐಗೆ ಭಾರೀ ಲಾಭವಾಗಿದೆ. 2023ರಲ್ಲಿ ಬಿಸಿಸಿಐ ಗಳಿಕೆ 5,120 ಕೋಟಿ ರೂ.ಗೆ ಏರಿಕೆಯಾಗಿದೆ. ಇದನ್ನು 2022ರ ಗಳಿಕೆಗೆ ಹೋಲಿಸಿದರೆ ಶೇ. 116ರಷ್ಟು ಹೆಚ್ಚು!
2022ರ ಐಪಿಎಲ್ನಿಂದ ಬಿಸಿಸಿಗೆ 2,367 ಕೋಟಿ ರೂ. ರಷ್ಟು ಆದಾಯ ಲಭಿಸಿತ್ತು. ಆದರೆ 2023ರಲ್ಲಿ ಈ ಗಳಿಕೆ 5,120 ಕೋಟಿ ರೂ.ಗೆ ಏರಿಕೆಯಾಗಿದೆ. ವರದಿಯ ಪ್ರಕಾರ 2023ರಲ್ಲಿ ಎಲ್ಲ ಮೂಲಗಳಿಂದ ಬಿಸಿಸಿಐಗೆ ಲಭಿಸಿದ ಒಟ್ಟಾರೆ ಆದಾಯ 11,769 ಕೋಟಿ ರೂ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ. 78ರಷ್ಟು ಹೆಚ್ಚು ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಹಕ್ಕುಗಳ ಮಾರಾಟ ಮೌಲ್ಯದಲ್ಲಿನ ಹೆಚ್ಚಳ, ಬೇರೆ ಬೇರೆ ಪ್ರಯೋಜಕತ್ವದಲ್ಲಿನ ಹೆಚ್ಚಳ ಬಿಸಿಸಿಐ ಆದಾಯ ಹೆಚ್ಚಲು ಕಾರಣ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.