Rain ಮೃತ್ಯುಂಜಯ ಹೊಳೆಯಲ್ಲಿ ಉಕ್ಕಿ ಹರಿದ ನೀರು; ಅಂತರ ಪ್ರದೇಶ:ಅಡಿಕೆ ತೋಟ ಜಲಾವೃತ
Team Udayavani, Aug 20, 2024, 11:23 PM IST
ಬೆಳ್ತಂಗಡಿ: ಕಳೆದ ರಾತ್ರಿ ಮಲವಂತಿಗೆ ಮಿತ್ತಬಾಗಿಲು ಪ್ರದೇಶದಲ್ಲಿ ನದಿ ನೀರು ಉಕ್ಕಿ ಹರಿದಿದ್ದು, ಮಂಗಳವಾರ ಚಾರ್ಮಾಡಿ ಗ್ರಾಮದ ಅಂತರ ಪ್ರದೇಶದಲ್ಲಿ ಮೃತ್ಯುಂಜಯ ನದಿ ಉಕ್ಕಿ ಹರಿದ ಪರಿಣಾಮ ಜನ ಆತಂಕಕ್ಕೀಡಾದ ಘಟನೆ ನಡೆದಿದೆ.
ಚಾರ್ಮಾಡಿ ಪ್ರದೇಶದಲ್ಲಿ ಭಾರೀ ಮಳೆಯಾದ ಪರಿಣಾಮ ಮರಮಟ್ಟುಗಳು ತೇಲಿ ಬಂದು ಅಂತರ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ ಪರಿಣಾಮ ಬಹಳಷ್ಟು ನೀರು ಸುತ್ತಮುತ್ತ ಹಬ್ಬಿದೆ. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಬಹಳಷ್ಟು ಮಳೆ ಸುರಿದು ರಸ್ತೆಯಲ್ಲಿ ಸಾಗಲು ಸಾಧ್ಯವಾಗದಷ್ಟು ನೀರು ಬಂದಿದೆ. ಇದನ್ನು ವಾಹನ ಸವಾರರು ವೀಡಿಯೋ ಮಾಡಿ ಸಮಸ್ಯೆಯ ಗಂಭೀರತೆ ಬಗ್ಗೆ ತಿಳಿಸಿದ್ದರು.
ಆದರೆ ಬೆಳ್ತಂಗಡಿ ಪ್ರದೇಶದಲ್ಲಿ ಮಳೆಯಿಲ್ಲದೇ ಕೇವಲ ಘಾಟಿ ಪ್ರದೇಶದಿಂದ ಮಳೆ ತೀವ್ರ ಪ್ರಮಾಣದಲ್ಲಿ ಬರುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು ಅಂತರ ಪ್ರದೇಶದ 20 ಎಕರೆಗೂ ಅಧಿಕ ಅಡಿಕೆ ತೋಟಕ್ಕೆ ನೀರು ನುಗ್ಗಿದೆ.
ಸೋಮವಾರ ಒಂದೇ ತಾಸಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ದಿಡುಪೆ, ಮಿತ್ತಬಾಗಿಲು, ಅರ್ಬಿ ಫಾಲ್ಸ್, ಕಡಮಗುಂಡಿ ಕಡೆಯಿಂದ ಬಂದ ನೀರಿನ ಪ್ರಮಾಣ ನೇತ್ರಾವತಿ ಉಕ್ಕಿ ಹರಿಯುವಂತೆ ಮಾಡಿದ್ದು ಪ್ರವಾಹದ ಭೀತಿ ಎದುರಾಗಿತ್ತು. ಇದೀಗ ಎರಡನೇ ದಿನ ಮೃತ್ಯುಂಜಯ ಸುತ್ತಮುತ್ತ ನದಿ ಪಾತ್ರದ ಜನರನ್ನು ಆತಂಕಕ್ಕೆ ಈಡುಮಾಡಿದೆ. ಜನರಿಗೆ 5 ವರ್ಷದ ಹಿಂದಿನ ಪ್ರವಾಹದ ಭೀತಿ ಎದುರಾಗುವಂತೆ ಮಾಡಿದೆ.
2019ರಲ್ಲಿ
ಕಳೆದುಹೋಗಿದ್ದ ಸ್ಕೂಟಿ ಪತ್ತೆ
ವಿಶೇಷವೆಂದರೆ 2019ರ ಆಗಸ್ಟ್ 9 ರಂದು ಬೆಳ್ತಂಗಡಿಯಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದ ಸಂದರ್ಭದಲ್ಲಿ ಮಲವಂತಿಗೆ ಗ್ರಾಮದ ಅಶೋಕ್ ಕಡ್ತಿಮೇರು ಎಂಬವರು ನದಿ ಬದಿ ತಮ್ಮ ಸ್ಕೂಟಿ ನಿಲ್ಲಿಸಿ ಅನ್ಯಕಾರ್ಯ ನಿಮಿತ್ತ ತೆರಳಿದ್ದರು. ಇದೀಗ ಸೋಮವಾರ ಸುರಿದ ಪ್ರವಾಹದಂತಹ ಮಳೆಗೆ ನದಿ ನೀರಿನಲ್ಲಿ ತುಂಬಿದ್ದ ಕಲ್ಲು ಮರಳು ಕೊಚ್ಚಿಹೋದ ಪರಿಣಾಮ ಕಳೆದು ಹೋಗಿದ್ದ ಸ್ಕೂಟಿ ಸಿಕ್ಕಿದ ಘಟನೆ ಬಾರಿ ಅಚ್ಚರಿಗೆ ಕಾರಣವಾಗಿದೆ. 5 ವರ್ಷಗಳ ಬಳಿಕ ಮರಳಿನಲ್ಲಿ ಹುದುಗಿದ್ದ ಸ್ಕೂಟಿ ಮತ್ತೆ ಮಾಲಕರ ಕೈಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.