Naryana Guru Jayanthi: ನಾರಾಯಣಗುರು ಈಡಿಗ ನಿಗಮ ರಚನೆಗೆ ಶೀಘ್ರ ಆದೇಶ: ಸಿಎಂ
ಸಮುದಾಯದ ಒಬ್ಬರ ಕೆಪಿಎಸ್‌ಸಿ ಸದಸ್ಯರಾಗಿ ಮಾಡಲು ಸಿದ್ದರಾಮಯ್ಯಗೆ ಬೇಡಿಕೆ
Team Udayavani, Aug 21, 2024, 12:13 AM IST
ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಅಭಿವೃದ್ಧಿ ನಿಗಮದ ಸ್ಥಾಪನೆ ಬಗ್ಗೆ ಹಿಂದಿನ ಸರಕಾರ ಘೋಷಿಸಿದ್ದರೂ ಆದೇಶ ಹೊರಡಿಸಿರಲಿಲ್ಲ. ಈ ಬಗ್ಗೆ ತಮ್ಮ ಸರಕಾರ ಅತಿ ಶೀಘ್ರದಲ್ಲೇ ನಿಗಮ ರಚನೆಯ ಆದೇಶ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯಲ್ಲಿ ಮಾತನಾಡಿ, ಈಡಿಗ ಸಮುದಾಯದ ಮುಖಂಡರು ಅಭಿವೃದ್ಧಿ ನಿಗಮ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದ್ದಾರೆ. ಸಮುದಾಯದ ಒಬ್ಬರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ.
ಈಗಿರುವ ಕೆಪಿಎಸ್‌ಸಿ ಸದಸ್ಯರ ಹುದ್ದೆ ಖಾಲಿಯಾದ ಅನಂತರ ಮೊದಲ ಆದ್ಯತೆ ಈಡಿಗ ಸಮುದಾಯಕ್ಕೆ ನೀಡಲಾಗುವುದು. ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರ ಈಡೇರಿಸಲಿದೆ ಎಂದರು.
ಶಾಲೆಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಜಯಂತಿ:
ಶಿಕ್ಷಣ ಸಚಿವ ಮಧುಬಂಗಾರಪ್ಪ ಮಾತನಾಡಿ, ನಾರಾಯಣ ಗುರುಗಳ ತತ್ವ ಸಂದೇಶ ಎಲ್ಲರಿಗೂ ತಿಳಿಯುವಂತಾಗುವ ನಿಟ್ಟಿನಲ್ಲಿ ಸರಕಾರಿ ಶಾಲೆ, ಕಾಲೇಜುಗಳಲ್ಲಿ ಮತ್ತು ಸರಕಾರಿ ಕಚೇರಿಗಳಲ್ಲಿ ನಾರಾಯಣ ಗುರುಗಳ ಜಯಂತಿ ಆಚರಣೆಗೆ ಮುಖ್ಯಮಂತ್ರಿಗಳು ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.