Thalaiva..!; ಸಿಎಸ್ ಕೆಯಲ್ಲಿ ಧೋನಿ ಜಾಗಕ್ಕೆ ಬರಲಿದ್ದಾರಾ ರಿಷಭ್ ಪಂತ್?
Team Udayavani, Aug 21, 2024, 10:37 AM IST
ಚೆನ್ನೈ: ಐಪಿಎಲ್ (IPL) ಕ್ರಿಕೆಟ್ ನಲ್ಲಿ ಹರಾಜು ಯಾವಾಗಲೂ ಭಾರೀ ನಿರೀಕ್ಷೆ ಹುಟ್ಟು ಹಾಕುವುದು ಸಹಜ. ಮೆಗಾ-ಹರಾಜು ಬಂದಾಗಲೆಲ್ಲಾ ಅದರ ವಿಚಾರದ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರವಾಗಿ ಹೆಚ್ಚುತ್ತದೆ.
ಸದ್ಯ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ರಿಷಭ್ ಪಂತ್(Rishabh Pant) ಅವರು ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಕಾರಣವಾಗಿದ್ದು ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದಿಗ್ಗಜ ಮಹೇಂದ್ರ ಸಿಂಗ್ ಧೋನಿ(MS Dhoni)ಅವರ ಜಾಗಕ್ಕೆ ಬರಲಿದ್ದಾರಾ ಎನ್ನುವ ವದಂತಿಗಳು ಹರಿದಾಡುತ್ತಿವೆ. ಇದಕ್ಕೆ ಇಂಬು ನೀಡುವಂತೆ ಪಂತ್ ಮಂಗಳವಾರ(ಆ.20) ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ಸೂಪರ್ಸ್ಟಾರ್ ರಜನಿಕಾಂತ್(Rajnikanth) ಅವರ ಪೋಸ್ ಅನುಕರಿಸಿದ್ದಾರೆ. “ತಲೈವಾ” ಎಂದು 26 ರ ಹರೆಯದ ಕ್ರಿಕೆಟಿಗ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
ಪಂತ್ ನಾಯಕತ್ವದ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಸಂತುಷ್ಟವಾಗಿಲ್ಲ ಎನ್ನಲಾಗಿದೆ. ಇದೆ ವೇಳೆ ಚೆನ್ನೈ ಸೂಪರ್ ಕಿಂಗ್ಸ್ (CSK) ಮಾಜಿ ನಾಯಕ ಈ ವರ್ಷ 43 ವರ್ಷಕ್ಕೆ ಕಾಲಿಡಲಿದ್ದಾರೆ. ಕಳೆದ ಋತುವಿನ ಉದ್ದಕ್ಕೂ ಮೊಣಕಾಲಿನ ಗಮನಾರ್ಹ ಸಮಸ್ಯೆಗಳೊಂದಿಗೆ ಹೋರಾಡಿದ್ದರು, ಆಗಾಗ್ಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ವಿಶೇಷವೆಂದರೆ ಧೋನಿ ಅವರ ವಿಕೆಟ್ ಕೀಪಿಂಗ್ ಮಾನದಂಡಗಳು ಎಂದಿಗೂ ಕುಸಿದಿಲ್ಲ.ತಂಡದಲ್ಲಿ ತಮ್ಮ ಜಾಗ ಯುವ ಕ್ರಿಕೆಟಿಗನಿಗೆ ಬಿಟ್ಟು ಕೊಡಲಿದ್ದಾರೆಯೇ ಎನ್ನುವ ಪ್ರಶ್ನೆಗಳು ಮೂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.