Iran; ಭೀಕರ ಬಸ್ ಅವಘಡದಲ್ಲಿ ಪಾಕಿಸ್ಥಾನದ 28 ಶಿಯಾ ಯಾತ್ರಿಕರು ಬಲಿ
ಇರಾಕ್ ಗೆ ತೆರಳುತ್ತಿದ್ದ ಬಸ್ ನಲ್ಲಿ 51 ಮಂದಿಯಿದ್ದರು
Team Udayavani, Aug 21, 2024, 2:44 PM IST
ಟೆಹ್ರಾನ್ : ಪಾಕಿಸ್ಥಾನದಿಂದ ಇರಾಕ್‌ಗೆ ಶಿಯಾ ಯಾತ್ರಾರ್ಥಿಗಳನ್ನು(Shiite pilgrims) ಹೊತ್ತೊಯ್ಯುತ್ತಿದ್ದ ಬಸ್ ಮಧ್ಯ ಇರಾನ್‌ನಲ್ಲಿ ಅಪಘಾತಕ್ಕೀಡಾಗಿದ್ದು, ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ. ಭೀಕರ ಅವಘಡ ನಡೆದ ಬಸ್ ನಲ್ಲಿ 51 ಜನರು ಪ್ರಯಾಣಿಸುತ್ತಿದ್ದು 14 ಮಂದಿಯ ಸ್ಥಿತಿ ಗಂಭೀರವಾಗಿದೆ.ಮೃತರು ಪಾಕಿಸ್ಥಾನದ(Pakistan)ದಕ್ಷಿಣ ಸಿಂಧ್ ಪ್ರಾಂತ್ಯದ ಲರ್ಕಾನಾ ನಗರವರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮಧ್ಯ ಇರಾನ್(Iran)ಪ್ರಾಂತ್ಯದ ಯಾಜ್ದ್‌ನಲ್ಲಿ ಮಂಗಳವಾರ(ಆ20) ರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ತುರ್ತು ಅಧಿಕಾರಿ ಮೊಹಮ್ಮದ್ ಅಲಿ ಮಲೆಕ್‌ಜಾಡೆಹ್ ಹೇಳಿದ್ದಾರೆ ಎಂದು ಸರಕಾರಿ ಐಆರ್‌ಎನ್‌ಎ ಸುದ್ದಿ ಸಂಸ್ಥೆ ತಿಳಿಸಿದೆ.
ಇರಾನ್ ರಾಜಧಾನಿ ಟೆಹ್ರಾನ್‌ನಿಂದ ಆಗ್ನೇಯಕ್ಕೆ ಸುಮಾರು 500 ಕಿಲೋಮೀಟರ್ ದೂರದಲ್ಲಿರುವ ಟಾಫ್ಟ್ ನಗರದ ಹೊರಗೆ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ತಲೆಕೆಳಗಾಗಿ ಬಸ್ ಬಿದ್ದಿದ್ದು ಮೇಲ್ಛಾವಣಿ ಒಡೆದು ಅದರ ಎಲ್ಲಾ ಬಾಗಿಲುಗಳು ತೆರೆದು ಕೊಂಡಿವೆ. ಬ್ರೇಕ್ ವೈಫಲ್ಯ ಮತ್ತು ಚಾಲಕನ ಅಜಾಗರೂಕತೆ ಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಮಲೆಕ್‌ಜಾಡೆಹ್ ಆರೋಪಿಸಿದ್ದಾರೆ.
ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ತೀವ್ರ ದುಃಖಿತರಾಗಿದ್ದು ರಾಜತಾಂತ್ರಿಕರು ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.