![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Aug 21, 2024, 3:07 PM IST
ಹುಬ್ಬಳ್ಳಿ: ನಾನು ಕಳೆದ 40 ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದೇನೆ, ಆದರೆ ಅವರು ನಮ್ಮ ಮನೆತನದ ಮಾನ-ಮರ್ಯಾದೆ ಹಾಳು ಮಾಡಿದ್ದಾರೆ. ಅವರನ್ನು ಗುಂಡಿಟ್ಟು ಕೊಲ್ಲಿ. ಬೇಕಾದರೆ ಬರೆದುಕೊಡುವೆ ಎಂದು ನಗರದಲ್ಲಿ ತಂದೆಯೊಬ್ಬ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಎದುರು ಕಣ್ಣೀರು ಹಾಕಿದ್ದಾರೆ.ಈ ವಿಡಿಯೋ ಈಗ ವೈರಲ್ ಆಗಿದೆ.
ಹಳೇಹುಬ್ಬಳ್ಳಿ ಸದರಸೋಪಾ ಬ್ಯಾಹಟ್ಟಿ ಪ್ಲಾಟ್ ನಿವಾಸಿ ಗೌಸಸಾಬ ಕರಡಿಗುಡ್ಡ ಎಂಬವರು ಮಕ್ಕಳಿಬ್ಬರ ನಡತೆ ಬಗ್ಗೆ ಪೊಲೀಸ್ ಆಯುಕ್ತರ ಎದುರು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.
ರವಿವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್‌ವಾರ್ ಘಟನೆಗೆ ಸಂಬಂಧಿಸಿ ಕಸಬಾಪೇಟೆ ಪೊಲೀಸರು ಸೋಮವಾರ ಬೆಳಗ್ಗೆ ಬುಡರಸಿಂಗಿ ಬಳಿಯ ರಿಂಗ್ ರಸ್ತೆಯಲ್ಲಿ ಗೌಸಸಾಬ್ ಅವರ ಮಗನಾದ ಅಫ್ತಾಬ್ ಮತ್ತು ಶಾಹಬಾದ್‌ನನ್ನು ವಶಕ್ಕೆ ಪಡೆಯಲು ಹೋದಾಗ ಅಫ್ತಾಬ್‌ನು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.
ಈ ಘಟನೆಗೆ ಸಂಬಂಧಿಸಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಬುಧವಾರ(ಆ21) ಘಟನಾ ಸ್ಥಳ ಪರಿಶೀಲನೆಗೆ ಹೋದಾಗ ಅಫ್ತಾಬ್‌ನ ತಂದೆಯನ್ನು ಭೇಟಿ ಮಾಡಿದಾಗ ಮಕ್ಕಳು ಮಾಡಿದ ಕೃತ್ಯದಿಂದ ಮನನೊಂದು ಆಯುಕ್ತರ ಎದುರು ಕಣ್ಣೀರು ಹಾಕಿದರು.
ಗೌಸಸಾಬ ಕರಡಿಗುಡ್ಡ ಹೊಟೇಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇವರಿಗೆ ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ. ಆದರೆ ಇಬ್ಬರೂ ಮಕ್ಕಳು ಹಾದಿತಪ್ಪಿದ್ದರಿಂದ ಗೌಸಸಾಬ ತೀವ್ರ ನೊಂದಿದ್ದಾರೆ. ಅವರೂ ನನ್ನಂತೆ ಕೂಲಿನಾಲಿ ಮಾಡುವುದು ಬೇಡ. ಉತ್ತಮ ಶಿಕ್ಷಣ ಪಡೆದು ವಿದ್ಯಾವಂತರಾಗಿ ಬೆಳೆದು ಒಳ್ಳೆಯ ನೌಕರರಾಗಲಿ ಎಂದು ಕಷ್ಟಪಟ್ಟು ಬೆಳೆಸಿದೆ. ಆದರೆ ಇಬ್ಬರೂ ಮಾತು ಕೇಳದೆ ಮನೆತನದ ಗೌರವವನ್ನೇ ಹಾಳು ಮಾಡಿದ್ದಾರೆ. ಅವರಿಬ್ಬರು ಇದ್ದರೆಷ್ಟು, ಬಿಟ್ಟರೆಷ್ಟು. ಕೊಂದು ಬಿಡಿ ಎಂದು ಆಯುಕ್ತರ ಎದುರು ಅಲವತ್ತುಕೊಂಡಿದ್ದಾರೆ.
ಆಯುಕ್ತರು ಅವರಿಗೆ ಹತಾಶರಾಗಬೇಡಿ. ಧೈರ್ಯವಾಗಿರಿ. ನಾವು ಅವರನ್ನು ಒಳ್ಳೆಯ ಹಾದಿಗೆ ತರುತ್ತೇವೆ ಎಂದು ಹೇಳಿ ಸಂತೈಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.