Davanagere: ಭಾರೀ ಮಳೆಗೆ ಕುಸಿದು ಬಿದ್ದ ಮನೆ… ಮೂವರು ಕೂಲಿ ಕಾರ್ಮಿಕರಿಗೆ ಗಾಯ
Team Udayavani, Aug 21, 2024, 5:12 PM IST
ದಾವಣಗೆರೆ: ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಮನೆ ಬಿದ್ದು ಉತ್ತರ ಪ್ರದೇಶ ಮೂಲದ ಮೂವರು ಕೂಲಿ ಕಾರ್ಮಿಕರು ಗಾಯಗೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೋಡಿಹಳ್ಳಿ ಕ್ಯಾಂಪ್‌ನಲ್ಲಿ ಸಂಭವಿಸಿದೆ.
ಉತ್ತರ ಪ್ರದೇಶ ಮೂಲದ ಸುಕುಮಾರ್, ಕೃಷ್ಣ, ಮಂಜಿತ್ ಗಾಯಗೊಂಡವರು. ಮೂವರು ಕೂಲಿ ಕಾರ್ಮಿಕರು ಭತ್ತದ ನಾಟಿ ಕೆಲಸಕ್ಕೆ ಕೋಡಿಹಳ್ಳಿ ಕ್ಯಾಂಪ್‌ಗೆ ಆಗಮಿಸಿದ್ದು, ಬಾಡಿಗೆ ಮನೆಯೊಂದರಲ್ಲಿ ಇದ್ದರು. ಧಾರಾಕಾರವಾಗಿ ಸುರಿದ ಮಳೆಯಿಂದ ಮನೆ ಬಿದ್ದು ಮೂವರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ದಾವಣಗೆರೆಯ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆ ಬಿದ್ದು ಉತ್ತರ ಪ್ರದೇಶದ ಮೂಲದ ಸುಕುಮಾರ್, ಕೃಷ್ಣ, ಮಂಜಿತ್ ಗಾಯಗೊಂಡಿರುವ ಸುದ್ದಿ ತಿಳಿದ ತಕ್ಷಣವೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.
ಇದನ್ನೂ ಓದಿ: Shivamogga: ಬೇಕರಿಯಲ್ಲಿ ಅಗ್ನಿ ಅವಘಡ… ಸ್ಫೋಟಗೊಂಡ ಸಿಲಿಂಡರ್, ದಿಕ್ಕಾಪಾಲಾಗಿ ಓಡಿದ ಜನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere:ಪ್ರತಿಷ್ಠಿತ ಬಡಾವಣೆಯ ಪಹಣಿಯಲ್ಲಿಯೂ ವಕ್ಫ್ ಹೆಸರು!
Covid scam: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಲು ಸಮಿತಿ ಶಿಫಾರಸು
By Poll: ಬಳ್ಳಾರಿಯಲ್ಲಿ ನಿಮ್ಮ ಅಟ್ಟಹಾಸ ಮುರಿದದ್ದು ಸಿದ್ದರಾಮಯ್ಯ ಅನ್ನೋದು ಮರೀಬೇಡಿ: ಸಿಎಂ
Belagavi: ಗ್ರಾಮ ಪಂಚಾಯತ್ ಕಟ್ಟಡಕ್ಕೆ ಕಿಡಿಗೇಡಿಗಳಿಂದ ಪೆಟ್ರೋಲ್ ಬಾಂಬ್ ಎಸೆತ
Hubballi: ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಅನ್ನುವ ಸಂಶಯವಿದೆ… : ಸಂಸದ ಕಾರಜೋಳ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.