BIGG BOSS: ಕನ್ನಡ, ತಮಿಳು, ತೆಲುಗು, ಹಿಂದಿ.. ಬಿಗ್‌ಬಾಸ್‌ ಆರಂಭಕ್ಕೆ Countdown ಶುರು

ಯಾವ ಭಾಷೆಯಲ್ಲಿ, ಯಾವಾಗಿನಿಂದ ಶೋ ಆರಂಭ? ಇಲ್ಲಿದೆ ಮಾಹಿತಿ..

Team Udayavani, Aug 21, 2024, 7:24 PM IST

BIGG BOSS: ಕನ್ನಡ, ತಮಿಳು, ತೆಲುಗು, ಹಿಂದಿ.. ಬಿಗ್‌ಬಾಸ್‌ ಆರಂಭಕ್ಕೆ ಕೌನ್‌ ಡೌನ್‌ ಶುರು

ಮುಂಬಯಿ/ಬೆಂಗಳೂರು: ಬಿಗ್‌ ಬಾಸ್(BIGG BOSS) ಕಾರ್ಯಕ್ರಮಕ್ಕೆ ಆಯಾ ಭಾಷೆಯಲ್ಲಿ ಅಪಾರ ವೀಕ್ಷಕರಿದ್ದಾರೆ. ಇತ್ತೀಚೆಗೆ ಮಲಯಾಳಂ ಬಿಗ್ ಬಾಸ್ -6 ಹಾಗೂ ಹಿಂದಿ ಬಿಗ್ ಬಾಸ್‌ ಓಟಿಟಿ -3 ಮುಕ್ತಾಯ ಕಂಡಿದೆ.

ಈಗ ಮತ್ತೊಮ್ಮೆ ಬಿಗ್‌ ಬಾಸ್‌ ಕಾರ್ಯಕ್ರಮದ ಹೊಸ ಸೀಸನ್‌ ಗಳು ಆರಂಭಗೊಳ್ಳಲಿದೆ. ದಕ್ಷಿಣ ಭಾರತದಲ್ಲಿ ಬಿಗ್‌ ಬಾಸ್‌ ಹೊಸ ಸೀಸನ್‌ಗಳು ಆರಂಭಗೊಳ್ಳಲಿದೆ. ತೆಲುಗು, ತಮಿಳು ಮತ್ತು ಕನ್ನಡ ಹಾಗೂ ಹಿಂದಿ ಬಿಗ್‌ ಬಾಸ್‌ ಆರಂಭಕ್ಕೆ ದಿನಗಣನೆ ಶುರುವಾಗಿದ್ದು ಸ್ಪರ್ಧಿಗಳ ಬಗ್ಗೆ ಚರ್ಚೆ ಆರಂಭವಾಗಿದೆ.

‌ ಬಿಗ್‌ಬಾಸ್‌ ಹೊಸ ಸೀಸನ್‌ಗಳು, ಯಾವ ಭಾಷೆಯಲ್ಲಿ ಯಾವಾಗದಿಂದ ಆರಂಭಗೊಳ್ಳಲಿದೆ ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ..

ಬಿಗ್‌ ಬಾಸ್‌ ತೆಲುಗು -8 (Bigg Boss Telugu 8):

ನಾಗಾರ್ಜುನ (Nagarjuna) ನಡೆಸಿಕೊಡುವ ಬಿಗ್‌ ಬಾಸ್‌ ತೆಲುಗು 8ನೇ ಸೀಸನ್‌ ಪ್ರೋಮೊ ಈಗಾಗಲೇ ರಿಲೀಸ್‌ ಆಗಿದೆ. ಪ್ರತಿಬಾರಿಯಂತೆ ಈ ಬಾರಿಯೂ ಸ್ಪರ್ಧಿಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಸಂಭಾವ್ಯ ಸ್ಪರ್ಧಿಗಳು:

ನಟ ಅಭಿನವ ಗೋಮತಮ್,  ಇಂದ್ರಾನಿಯಲ್ ವರ್ಮಾ, ನಟಿ ಶಾನೂರ್ ಸನಾ, ತೇಜಸ್ವಿನಿ ಗೌಡ, ರವಿತೇಜ, ರಿತು ಚೌಧರಿ, ಹಾಸ್ಯನಟ ಬಬ್ಲೂ, ವಿಷ್ಣುಪ್ರಿಯಾ ಭೀಮನೇನಿ, ಪವಿತ್ರಾ ಬತ್ತುಲ, ಅಂಜಲಿ ಪವನ್ ಸೇರಿದಂತೆ ಹಲವರು ಸ್ಪರ್ಧಿಗಳಾಗಿ ದೊಡ್ಮನೆಗೆ ಎಂಟ್ರಿ ಆಗಲಿದ್ದಾರೆ ಎನ್ನಲಾಗುತ್ತಿದೆ.

ಆರಂಭದ ನಿರೀಕ್ಷೆ:- ಸೆ.1

ವಾಹಿನಿ:- ಸ್ಟಾರ್‌ ಮಾ

ಸ್ಟ್ರೀಮಿಂಗ್‌:-  ಡಿಸ್ನಿ+ ಹಾಟ್‌ ಸ್ಟಾರ್‌

ಬಿಗ್ ಬಾಸ್ ತಮಿಳು -8 (Bigg Boss Tamil 8): ಬಿಗ್‌ ಬಾಸ್‌ ತಮಿಳು -8 ಆರಂಭಕ್ಕೂ ಮುನ್ನ ಸುದ್ದಿಯಾಗಿದೆ. ಇಷ್ಟು ವರ್ಷದ ಶೋ ನಡೆಸಿಕೊಡುತ್ತಿದ್ದ ಕಮಲ್‌ ಹಾಸನ್‌ (Kamal Hasan) ಈ ಬಾರಿ ನಿರೂಪಣೆಯಿಂದ ದೂರ ಉಳಿದಿದ್ದು, ಆಯೋಜಕರು ಹೊಸ ನಿರೂಪಕರತ್ತ ಗಮನ ಹರಿಸಿದೆ. ವಿಜಯ್ ಸೇತುಪತಿ, ಸಿಂಬು ಅಥವಾ ಅರವಿಂದ್ ಸ್ವಾಮಿ ನಿರೂಪಕರಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ‌

ಸಂಭಾವ್ಯ ಸ್ಪರ್ಧಿಗಳು:-

ನಟಿ ಜೋಯಾ, ನಟ ರಿಯಾಜ್ ಖಾನ್, ನಟಿ ಪೂನಂ ಬಾಜ್ವಾ, ನಟ ಕಾರ್ತಿಕ್ ಕುಮಾರ್, ಹಿರಿಯ ನಟ ವಿಜಯ್ ಕುಮಾರ್, ಬಬ್ಲೂ ಪೃಥ್ವಿರಾಜ್, ಗಾಯಕಿ ಶ್ವೇತಾ ಮೆನನ್, ಗಾಯಕಿ ಕಲ್ಪನಾ, ಅಮಲಾ ಶಾಜಿ, ಮಕಪಾ ಆನಂದ್, ರೋಬೋ ಶಂಕರ್, ಸೋನಿಯಾ ಅಗರ್ವಾಲ್ ಮತ್ತು ಕಿರಣ್.

ಆರಂಭದ ನಿರೀಕ್ಷೆ:- ಸೆಪ್ಟೆಂಬರ್ 29 ಅಥವಾ ಅಕ್ಟೋಬರ್ 6

ವಾಹಿನಿ:- ವಿಜಯ್‌ ಟಿವಿ

ಸ್ಟ್ರೀಮಿಂಗ್:-‌  ಡಿಸ್ನಿ+ ಹಾಟ್‌ ಸ್ಟಾರ್‌

ಬಿಗ್‌ ಬಾಸ್‌ ಕನ್ನಡ 11: (Bigg Boss Kannada 11) : ಕನ್ನಡ ಬಿಗ್‌ ಬಾಸ್‌ ಸೀಸನ್‌  -10 ಭಾರೀ ಸದ್ದು ಮಾಡಿತ್ತು. ಈ ಭಾರೀ ಶೋ ಆರಂಭಕ್ಕೂ ಮುನ್ನ ನಿರೂಪಕ ಯಾರೆನ್ನುವ ಪ್ರಶ್ನೆ ಕಾಡಿದೆ. ಕಿಚ್ಚ ಸುದೀಪ್‌ (Kiccha Sudeep) ಅವರೇ ಶೋ ನಡೆಸಿಕೊಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಬೇರೆ ಅವರ ಹೆಸರೂ ಕೂಡ ಇದರಲ್ಲಿ ಕೇಳಿ ಬರುತ್ತಿದೆ. ಶೀಘ್ರ ಪ್ರೋಮೊ ರಿಲೀಸ್‌ ಆಗಲಿದೆ ಎನ್ನಲಾಗಿದೆ.

ಸಂಭಾವ್ಯ ಸ್ಪರ್ಧಿಗಳು:-

ಬಿಗ್‌ ಬಾಸ್‌ ಸೀಸನ್ 11 ಆರಂಭವಾಗಲಿದೆ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಸ್ಪರ್ಧಿಗಳು ಯಾರು ಎನ್ನುವುದರ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ. ʼಮಜಾಭಾರತʼ ಖ್ಯಾತಿಯ ರಾಘವೇಂದ್ರ, ಯೂಟ್ಯೂಬರ್‌ ವರ್ಷಾ ಕಾವೇರಿ, ನಟ ತ್ರಿವಿಕ್ರಮ್‌ ,‘ಬೃಂದಾವನ’ ಧಾರಾವಾಹಿ ನಟ ವರುಣ್ ಆರಾಧ್ಯ, ತುಕಾಲಿ ಸಂತು ಪತ್ನಿ ಮಾನಸಾ, ಸುನೀಲ್ ರಾವ್, ಭವ್ಯಾ ಗೌಡ, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಸೇರಿದಂತೆ ಇತರರ ಹೆಸರು ಕೂಡ ಈ ಬಾರಿಯ ಬಿಗ್‌ ಬಾಸ್‌ ಸ್ಪರ್ಧಿಗಳ ಲಿಸ್ಟ್‌ ನಲ್ಲಿ ಕೇಳಿ ಬರುತ್ತಿದೆ.

ಆರಂಭದ ನಿರೀಕ್ಷೆ:- ಅಕ್ಟೋಬರ್ 3ನೇ ವಾರ

ವಾಹಿನಿ:- ಕಲರ್ಸ್‌ ಕನ್ನಡ

ಸ್ಟ್ರೀಮಿಂಗ್:-‌  ಜೀಯೋ ಸಿನಿಮಾ

ಬಿಗ್‌ ಬಾಸ್‌ ಹಿಂದಿ -18: (Bigg Boss Hindi 18):- ಬಿಗ್‌ ಬಾಸ್‌ ಓಟಿಟಿ ಸೀಸನ್‌ -3 ಮುಕ್ತಾಯ ಕಂಡ ಬಳಿಕ ಬಿಗ್‌ ಬಾಸ್‌ ಹಿಂದಿ ಸೀಸನ್‌ -18 ಆರಂಭದ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಾರಿಯೂ ಸಲ್ಮಾನ್‌ ಖಾನ್‌ ಶೋ ನಡೆಸಿಕೊಡಲಿದ್ದಾರೆ ಎನ್ನಲಾಗುತ್ತಿದೆ.

ಸಂಭಾವ್ಯ ಸ್ಪರ್ಧಿಗಳು:- ಶೋಯೆಬ್ ಇಬ್ರಾಹಿಂ, ಸಮೀರಾ ರೆಡ್ಡಿ, ಕಾಶಿಶ್ ಕಪೂರ್, ಝೈನ್ ಸೈಫಿ, ಪೂಜಾ ಶರ್ಮಾ, ಡಾಲಿ ಚೈವಾಲಾ, ಫೈಸೆಲ್ ಶೇಖ್ (ಮಿ. ಫೈಸು), ಫುಕ್ರಾ ಇನ್ಸಾನ್ (ಅಭಿಷೇಕ್ ಮಲ್ಹಾನ್), ಶೀಜಾನ್ ಖಾನ್, ದಲ್ಜೀತ್ ಕೌರ್, ದೀಪಿಕಾ ಆರ್ಯ, ನುಸ್ರತ್ ಜಹಾನ್, ಹರ್ಲಿಸ್ ಕೌಶ್ನಿಕ್ ,ಕರಣ್ ಪಟೇಲ್, ಕರಣ್ ಪಟೇಲ್,

ಆರಂಭದ ನಿರೀಕ್ಷೆ:- ಅಕ್ಟೋಬರ್ 5

ವಾಹಿನಿ:- ಕಲರ್ಸ್‌ ಟಿವಿ

ಸ್ಟ್ರೀಮಿಂಗ್:-‌  ಜೀಯೋ ಸಿನಿಮಾ

ಟಾಪ್ ನ್ಯೂಸ್

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ

Payan

Movie Release: ರಾಜ್ಯಾದ್ಯಂತ “ಪಯಣ್‌’ ಸಿನೆಮಾ ಸೆ.20ರಂದು ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bigg Boss18: ಸ್ಪರ್ಧಿಗಳ ಭವಿಷ್ಯ ನೋಡಲಿದ್ದಾರೆ ʼಬಿಗ್‌ಬಾಸ್‌ʼ; ಕುತೂಹಲ ಹುಟ್ಟಿಸಿದ ಪ್ರೋಮೊ

Bigg Boss18: ಸ್ಪರ್ಧಿಗಳ ಭವಿಷ್ಯ ನೋಡಲಿದ್ದಾರೆ ʼಬಿಗ್‌ಬಾಸ್‌ʼ; ಕುತೂಹಲ ಹುಟ್ಟಿಸಿದ ಪ್ರೋಮೊ

9

BBK11: ಈ ಬಾರಿ ಬಿಗ್‌ ಬಾಸ್‌ ಮನೆಯೊಳಗೆ ಹೋಗೋರು ಇವರೇ? ಇಲ್ಲಿದೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ

BBK-11: ಕೊನೆಗೂ ಬಿಗ್‌ ಬಾಸ್‌ ಆ್ಯಂಕರ್ ಮುಖ ರಿವೀಲ್…‌ ಶೋ ಆರಂಭಕ್ಕೆ ಡೇಟ್‌ ಪಿಕ್ಸ್

BBK-11: ಕೊನೆಗೂ ಬಿಗ್‌ ಬಾಸ್‌ ಆ್ಯಂಕರ್ ಮುಖ ರಿವೀಲ್…‌ ಶೋ ಆರಂಭಕ್ಕೆ ಡೇಟ್‌ ಫಿಕ್ಸ್

Bigg Boss 18: ಬಿಗ್‌ಬಾಸ್‌ನಲ್ಲಿ ಭಾಗಿಯಾಗಲು ನಟನಿಗೆ 5 ಕೋಟಿ ಆಫರ್; ಯಾರೀತ?

Bigg Boss 18: ಬಿಗ್‌ಬಾಸ್‌ನಲ್ಲಿ ಭಾಗಿಯಾಗಲು ನಟನಿಗೆ 5 ಕೋಟಿ ಆಫರ್; ಯಾರೀತ?

1

Tv Actor Varun: ಪ್ರೀತಿಸಿ ದ್ರೋಹ, ಧಮ್ಕಿ; ನಟ ವರುಣ್‌ ಮೇಲೆ ಕೇಸ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.