Kasaragod ಅಪರಾಧ ಸುದ್ದಿಗಳು
Team Udayavani, Aug 21, 2024, 8:24 PM IST
ಖೋಟಾನೋಟು; ಪೊಲೀಸರಿಂದ ತನಿಖೆ
ಕಾಸರಗೋಡು: ಖೋಟಾ ನೋಟುಗಳನ್ನು ಮುದ್ರಿಸಿದ ಚೆರ್ಕಳದ ಪ್ರಿಂಟಿಂಗ್ ಪ್ರಸ್‌ನಲ್ಲಿ ಪೊಲೀಸರು ತನಿಖೆ ನಡೆಸಿದರು. ಪ್ರಸ್‌ನಿಂದ ಪ್ರಿಂಟರ್, ಕಂಪ್ಯೂಟರ್‌ಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ.
ಎಂಡೋಸಲ್ಫಾನ್ ಸಂತ್ರಸ್ತ ಸಾವು
ಬದಿಯಡ್ಕ: ಚಿಕಿತ್ಸೆ ಪಡೆಯುತ್ತಿದ್ದ ಎಂಡೋಸಲ್ಫಾನ್ ಸಂತ್ರಸ್ತ ಕಾಡಮನೆ ಬಳಿಯ ಕರಿಂಬಿಲ ನಿವಾಸಿ ಪ್ರಶಾಂತ್(37) ಸಾವಿಗೀಡಾದರು. ಕಿಡ್ನಿ ಸಂಬಂಧ ರೋಗದಿಂದ ಬಳಲುತ್ತಿದ್ದರು. ಇವರು ಎಂಡೋ ಸಂತ್ರಸ್ತ ಯಾದಿಯಲ್ಲಿ ಸೇರ್ಪಡೆಗೊಂಡಿದ್ದರು.
ಹುಚ್ಚು ನರಿಯ ದಾಳಿ : ಹಲವರಿಗೆ ಗಾಯ
ಕಾಸರಗೋಡು: ಹುಚ್ಚು ನರಿಯೊಂದು 20 ಮಂದಿಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.
ಪಯ್ಯನ್ನೂರು ಕುಂಞಿಮಂಗಲದಲ್ಲಿ ಹುಚ್ಚು ನರಿ ದಾಳಿ ನಡೆಸಿ ಹಲವರ ಕೈಗೆ, ಕಾಲಿಗೆ ಕಡಿದು ಗಾಯಗೊಳಿಸಿದೆ. ಗಾಯಾಳುಗಳನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಸಿದು ಬಿದ್ದು ಸಾವು
ಕುಂಬಳೆ: ಕುಂಬಳೆ ನಿವಾಸಿ, ಪ್ರಸ್ತುತ ಮೇಲ್ಪರಂಬ ಕಟ್ಟಕ್ಕಾಲ್‌ನಲ್ಲಿ ವಾಸಿಸುವ ಶಾಫಿ(63) ಮನೆಯ ಬಾತ್ ರೂಂನಲ್ಲಿ ಕುಸಿದು ಬಿದ್ದು ಸಾವಿಗೀಡಾದ ಘಟನೆ ನಡೆದಿದೆ.
ಬಾವಿಗೆ ಬಿದ್ದ ಮಹಿಳೆ ಸಹಿತ ಮೂವರನ್ನುರಕ್ಷಿಸಿದ ಅಗ್ನಿಶಾಮಕ ದಳ
ಕಾಸರಗೋಡು: ಬಾವಿಗೆಬಿದ್ದ ಮಹಿಳೆ ಸಹಿತ ಮೂವರನ್ನು ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ನಡೆದಿದೆ.
ಚೆರ್ಕಳ ಪಾಡಿ ರಸ್ತೆಯ ಬಿ.ಕೆ.ಆಮು ಅವರ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಸಿ.ನೀಲಮ್ಮ(55) ಕಟ್ಟೆ ಇಲ್ಲದ ಬಾವಿಗೆ ಬಿದ್ದಿದ್ದು, ಅದನ್ನು ಕಂಡ ಬಂಬ್ರಾಣಿ ನಗರದ ಅಬೂಬಕರ್ ಸಿದ್ದಿಕ್ ತತ್‌ಕ್ಷಣ ಬಾವಿಗೆ ಇಳಿದು ನೀಲಮ್ಮ ಅವರನ್ನು ರಕ್ಷಿಸಲು ಯತ್ನಿಸಿದರು. ಆದರೆ ನೀಲಮ್ಮ ಅವರೊಂದಿಗೆ ಮೇಲಕ್ಕೇರಲು ಸಾಧ್ಯವಾಗಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಇಬ್ಬರನ್ನು ಮೇಲಕ್ಕೆತ್ತಿ ರಕ್ಷಿಸಿದೆ.
ತೆಕ್ಕಿಲ್ ಕಾನತ್ತುಕುಂಡುನಲ್ಲಿ ಕಟ್ಟೆ ಇಲ್ಲದ ಬಾವಿಗೆ ಬಿದ್ದ ತೃಕ್ಕನ್ನಾಡು ಮಲಾಂಕುನ್ನು ಮುದಿಯಕ್ಕಾಲ್ ನಿವಾಸಿ ಕೇಬಲ್ ಕಾರ್ಮಿಕ ಕರುಣಾಕರನ್ (48) ಅವರನ್ನು ಅಗ್ನಿಶಾಮಕ ದಳ ರಕ್ಷಿಸಿದೆ.
ಭಾರತ್ ಬಂದ್ ನೀರಸ ಪ್ರತಿಕ್ರಿಯೆ
ಕಾಸರಗೊಡು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪನ್ನು ಪ್ರತಿಭಟಿಸಿ ಮೀಸಲಾತಿ ಬಚಾವೋ ಸಂಘರ್ಷ ಸಮಿತಿ ನೀಡಿದ ಭಾರತ್ ಬಂದ್ ಕರೆಗೆ ಕೇರಳದಲ್ಲಿ ನೀರಸ ಪ್ರತಿಕ್ರಿಯೆ ಉಂಟಾಗಿದೆ. ಬಂದ್‌ನಿಂದ ಕೇರಳದಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ರಾಜ್ಯದ ಎಲ್ಲಾ ಕಾರ್ಯಾಚಟುವಟಿಕೆಗಳು ಎಂದಿನಂತೆ ನಡೆದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.