Market; ಅಡಿಕೆಯೇ ಅಲ್ಲ, ಒಳಗೆ ಬಿಳಿ ಬಣ್ಣದ ಕಾಯಿಯಿದು! ಮಾರುಕಟ್ಟೆಗೂ ಬಂತು ನಕಲಿ ಅಡಿಕೆ

Team Udayavani, Aug 22, 2024, 6:49 AM IST

Market; ಅಡಿಕೆಯೇ ಅಲ್ಲ, ಒಳಗೆ ಬಿಳಿ ಬಣ್ಣದ ಕಾಯಿಯಿದು! ಮಾರುಕಟ್ಟೆಗೂ ಬಂತು ನಕಲಿ ಅಡಿಕೆ

ಮಂಗಳೂರು: ನಿರಂತರ ಹಲವು ರೀತಿಯ ಆತಂಕ ಎದುರಿಸುತ್ತ ಬಂದಿರುವ ಅಡಿಕೆ ಮಾರುಕಟ್ಟೆಗೆ ಇದು ಹೊಸ ಸವಾಲು!
ಕಲಬೆರಕೆ ಅಡಿಕೆ ಹಳೆ ವಿಷಯ, ಈಗ ನಕಲಿ ಅಡಿಕೆಯೂ ವಿದೇಶಗಳಿಂದ ಭಾರತದ ಮಾರುಕಟ್ಟೆ ಪ್ರವೇಶಿಸತೊಡಗಿದೆ. ಅಡಿಕೆಯನ್ನೇ ಹೋಲುವಂತಹ ನಕಲಿ ಅಡಿಕೆ ಭಾರತದ ಮಾರುಕಟ್ಟೆಯಲ್ಲಿ ಸೇರಿಕೊಂಡಿರುವುದು ಬೆಳೆಗಾರರಿಗೆ, ವ್ಯಾಪಾರಿಗಳಿಗೆ ಹಾಗೂ ಗ್ರಾಹಕರೆಲ್ಲರಲ್ಲೂ ತಲೆನೋವು ಸೃಷ್ಟಿಸಬಹುದು.

ಎರಡು ತಿಂಗಳ ಹಿಂದೆ ಪಶ್ಚಿಮ ಬಂಗಾಲದಲ್ಲಿ ಲಾರಿಯಲ್ಲಿ ಸಾಗಾಟ ಮಾಡುವಾಗ ಈ ಅಡಿಕೆ ಪತ್ತೆಯಾಗಿದೆ. ಸುಮಾರು 950 ಕಿಲೋ ಅಡಿಕೆಯನ್ನು ಕಸ್ಟಂಸ್‌ ಪ್ರಿವೆಂಟಿವ್‌ ಯುನಿಟ್‌ನವರು ಪತ್ತೆ ಮಾಡಿದ್ದು, ಅದರ ಗುಣಮಟ್ಟ ಪರಿಶೀಲನೆಗೆ ಮಾದರಿಯನ್ನು ಮಂಗಳೂರಿನ ಅಡಿಕೆ ಸಂಶೋಧನ ಪ್ರತಿಷ್ಠಾನಕ್ಕೆ ಕಳುಹಿಸಿದ್ದಾರೆ. ಇದರ ಗುಣಮಟ್ಟ ಪರಿಶೀಲನೆಗೆ ತೊಡಗಿಸಿ ಕೊಂಡಾಗ ತಜ್ಞರಿಗೆ ಇದು ನಿಜವಾದ ಅಡಿಕೆಯಲ್ಲ, ಅದನ್ನೇ ಹೋಲುವಂತಹ ನಕಲಿ ಅಡಿಕೆ ಎನ್ನುವುದು ಗೊತ್ತಾಗಿದೆ.

ಹೇಗಿದೆ ನಕಲಿ ಅಡಿಕೆ?
ಈ ಅಡಿಕೆಗೆ ಕಂದು ರೀತಿಯ ಒಳಭಾಗದ ವಿಶಿಷ್ಟ ರಚನೆ ಇಲ್ಲ, ಒಳಭಾಗ ಪೂರ್ತಿ ಬಿಳಿ ಬಣ್ಣ ಇದೆ ಹಾಗೂ ದೊರಗು ರಚನೆ ಇಲ್ಲ, ಅಡಿಕೆ ಒಳಗೆ ಮಧ್ಯ ಭಾಗ ತಿರುಳೂ ಇಲ್ಲ. ಹೊರಭಾಗಕ್ಕೆ ಅಡಿಕೆ ಚೊಗರಿನಿಂದ ಮುಳುಗಿಸಿ ಒಣಗಿಸಿದ ಹಾಗಿದೆ. ಮೇಲ್ನೋಟಕ್ಕೆ ಇದು ಕೆಂಪಡಿಕೆಯನ್ನೇ ಹೋಲುತ್ತದೆ, ಆದರೆ ಅಡಿಕೆಗಿಂತ ಗಟ್ಟಿಯಾಗಿದೆ. ಹಾಗಾಗಿ ನಮ್ಮ ದೇಶದಲ್ಲಿ ಬೆಳೆಯದ ಬೇರೆಯೇ ಯಾವುದೋ ಕಾಯಿ ಇರಬಹುದು ಎಂದು ಪ್ರತಿಷ್ಠಾನದವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಈ ಮಾದರಿಯನ್ನು ಖ್ಯಾತ ಆಯುರ್ವೇದ ವೈದ್ಯರ ಗಮನಕ್ಕೆ ತರಲಾಗಿದೆ, ಅಡಿಕೆ ತಜ್ಞ ಬದನಾಜೆ ಶಂಕರ ಭಟ್‌ ಅವರಲ್ಲೂ ತೋರಿಸಲಾಗಿದೆ, ಅವರು ಅದರ ರುಚಿಯನ್ನೂ ನೋಡಲು ಯತ್ನಿಸಿದ್ದಾರೆ, ಯಾವುದೇ ರುಚಿ ಗೊತ್ತಾಗಿಲ್ಲ. ಹಾಗಾಗಿ ಯಾರಿಗೂ ಈ ಕಾಯಿ ಯಾವುದರದ್ದು ಎನ್ನುವುದು ಇದುವರೆಗೂ ತಿಳಿದು ಬರದಿರುವುದು ಕುತೂಹಲಕ್ಕೆ ಕಾರಣ. ಬಂದ ಮಾದರಿಯಲ್ಲಿ ತುಸು ಹಳೆಯದಾದ ಕೆಂಪಡಿಕೆಯನ್ನು ಇದು ಹೋಲುತ್ತದೆ, ಬಣ್ಣ ಮಾಸಿಕೊಂಡಿದೆ, ಅಲ್ಲಲ್ಲಿ ಚಿಕ್ಕ ಚಿಕ್ಕ
ರಂಧ್ರಗಳೂ ಇವೆ.

ಬಾಂಗ್ಲಾದಿಂದ ಬಂತೇ ಈ ನಕಲಿ ಅಡಿಕೆ?
ಪ್ರಸ್ತುತ ನಕಲಿ ಅಡಿಕೆಯನ್ನು ಕಸ್ಟಂಸ್‌ನವರು ಪಶ್ಚಿಮ ಬಂಗಾಲದ ಅಲಿಪುರುದ್ವಾರ್‌ ಎಂಬಲ್ಲಿಂದ ವಶಪಡಿಸಿಕೊಂಡಿದ್ದಾರೆ. ಇದು ಉತ್ತರಕ್ಕೆ ಭೂತಾನ್‌, ಪಶ್ಚಿಮಕ್ಕೆ ಬಾಂಗ್ಲಾದೇಶ ಗಡಿಯಾಗಿರುವ ಪ್ರದೇಶ. ಹಾಗಾಗಿ ಪೂರ್ವ ಏಷ್ಯಾದ ಯಾವುದೋ ದೇಶದಿಂದ ಬಾಂಗ್ಲಾ ಮೂಲಕ ಭಾರತ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ತಜ್ಞ ರು ತಿಳಿಸುತ್ತಾರೆ.

ಕಳಪೆ ಗುಣಮಟ್ಟದ ಅಡಿಕೆಯನ್ನು ಒಳ್ಳೆಯದರ ಜತೆ ಸೇರಿಸುವುದು ನೋಡಿದ್ದೇನೆ. ತೀರಾ ಕಳಪೆ ಅಡಿಕೆಯ ಪುಡಿಯನ್ನು ಒಳ್ಳೆಯದರ ಜೊತೆ ಸೇರಿಸುವುದೂ ಇದೆ. ಆದರೆ ಈ ರೀತಿಯ ನಕಲಿ ಅಡಿಕೆ ಬಗ್ಗೆ ನಮಗೆ ಇದುವರೆಗೆ ವರದಿ ಬಂದಿಲ್ಲ. ಇದರ ಬಗ್ಗೆ ಸಂಶೋಧನೆ ಆಗಬೇಕಿದೆ.
-ಡಾ| ಬಾಲಚಂದ್ರ ಹೆಬ್ಬಾರ್‌, ನಿರ್ದೇಶಕರು, ಸಿಪಿಸಿಆರ್‌ಐ ಕಾಸರಗೋಡು

ಅರಣ್ಯ ಇಲಾಖೆ ಸಂಶೋಧಿಸಬೇಕು
ಇದು ಅಡಿಕೆಯೇ ಅಲ್ಲ, ಮೇಲ್ನೋ ಟಕ್ಕೆ ಕೆಂಪಡಿಕೆಯಂತಿದೆ. ಇದನ್ನು ಮೊದಲ ಬಾರಿಗೆ ನೋಡುತ್ತಿರುವುದು. ಇದು ನಮ್ಮ ದೇಶದಲ್ಲಿ ಆಗುವಂತಹ ಯಾವುದೇ ಕಾಯಿಯಂತಿಲ್ಲ, ಆಯುರ್ವೇದ, ಅಡಿಕೆ ತಜ್ಞರು ಪರಿಶೀಲಿಸಿದರೂ ಗೊತ್ತಾಗಲಿಲ್ಲ, ಇನ್ನು ಏನಿದ್ದರೂ ಅರಣ್ಯ ಇಲಾಖೆಯವರು ಈ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕಿದೆ.
-ಕೇಶವ ಭಟ್‌, ಅಡಿಕೆ ಸಂಶೋಧನ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Anwar-Manippady

Mangaluru: ವಕ್ಫ್‌ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ

Pocso

Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ

1-doct

Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.