![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 22, 2024, 1:04 AM IST
ಪುಂಜಾಲಕಟ್ಟೆ: ವಾಮದಪದವಿವು ಸಮೀಪದ ಪಾಂಗಲ್ಪಾಡಿಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ದಾಂಧಲೆ ನಡೆಸಿ ಬಾರ್‌ನ ಕಾರ್ಮಿಕನಿಗೂ ಹಲ್ಲೆ ನಡೆಸಿದ ಆರೋಪಿಗಳನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೂಲತಃ ಬಂಟ್ವಾಳ ನಿವಾಸಿಗಳಾದ ಸಂತೋಷ್ ಮತ್ತು ವಿಶ್ವನಾಥ ಬಂಧಿತರು.
ಆ.4ರಂದು ಪ್ರಭಾಕರ ಶೆಟ್ಟಿ ಮಾಲಕತ್ವದ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ವಿಶ್ವನಾಥ, ಸಂತೋಷ್ ಎಂಬವರು ಕುಡಿದು ಬಳಿಕ ಅದೇ ಬಾರ್ ನಲ್ಲಿ ಸೋಡಾ ಬಾಟಲಿ ಹಾಗೂ ರಾಡ್‌ಗಳಿಂದ ದಾಂಧಲೆ ನಡೆಸಿದ್ದಲ್ಲದೆ ಕಂಪ್ಯೂಟರ್ ಒಡೆದು ಹಾಕಿದ್ದರು. ಅಡುಗೆ ಕೋಣೆಯಿಂದ ಬಂದ ಕಾರ್ಮಿಕ ವಸಂತ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದು, ಬಳಿಕ ತಲೆಮರೆಸಿಕೊಂಡಿದ್ದರು.
ಘಟನೆಯಿಂದ ಸುಮಾರು 2.50 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಬಾರ್ ಮಾಲಕರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದರು. ಆರೋಪಿಗಳ ಪೈಕಿ ಸಂತೋಷ್ ಕೊಲೆಯತ್ನ ಆರೋಪದಲ್ಲಿ ಜೈಲುಪಾಲಾಗಿದ್ದು, ಜಾಮೀನಿನಲ್ಲಿ ಹೊರಗಡೆ ಬಂದಿದ್ದ. ಬಂಟ್ವಾಳ ಠಾಣೆಯಲ್ಲಿ ಈತನ ಮೇಲೆ ರೌಡಿಶೀಟರ್ ತೆರೆಯಲಾಗಿತ್ತು.
You seem to have an Ad Blocker on.
To continue reading, please turn it off or whitelist Udayavani.