Table Tennis; 24ನೇ ವಯಸ್ಸಿನಲ್ಲೇ ಟೇಬಲ್ ಟೆನ್ನಿಸ್ ಗೆ ವಿದಾಯ ಹೇಳಿದ ಅರ್ಚನಾ ಕಾಮತ್
Team Udayavani, Aug 22, 2024, 6:04 PM IST
ಮುಂಬೈ: ಇತ್ತೀಚೆಗಷ್ಟೇ ಮುಗಿದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ (Paris Olympics) ಭಾರತದ ಟೇಬಲ್ ಟೆನ್ನಿಸ್ (Table Tennis) ತಂಡವು ಕ್ವಾರ್ಟರ್ ಫೈನಲ್ ತಲುಪಿ ಇತಿಹಾಸ ಬರೆದಿತ್ತು. ಕ್ವಾರ್ಟರ್ ಫೈನಲ್ ನಲ್ಲಿ ಭಾರತ ಟೇಬಲ್ ಟೆನ್ನಿಸ್ ತಂಡವು ಜರ್ಮನಿ ವಿರುದ್ದ ಸೋಲು ಕಂಡಿತ್ತು. ಈ ತಂಡದಲ್ಲಿದ್ದ ಕನ್ನಡತಿ ಅರ್ಚನಾ ಕಾಮತ್ (Archana Kamath) ಅವರು ಕ್ರೀಡೆಗೆ ವಿದಾಯ ಹೇಳಿದ್ದಾರೆ.
2028 ರ ಲಾಸ್ ಏಂಜಲೀಸ್ ಗೇಮ್ಸ್ ನಲ್ಲಿ ಪದಕದ ಯಾವುದೇ ಗ್ಯಾರಂಟಿ ಇಲ್ಲದಿರುವುದರಿಂದ, ಯುವ ಆಟಗಾರ್ತಿ ವೃತ್ತಿಪರವಾಗಿ ಟೇಬಲ್ ಟೆನಿಸ್ ಅನ್ನು ತ್ಯಜಿಸಲು ಮತ್ತು ಬದಲಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಪ್ಯಾರಿಸ್ ಗೇಮ್ಸ್‌ನಿಂದ ಮನೆಗೆ ಹಿಂದಿರುಗಿದ ನಂತರ, 24 ವರ್ಷ ವಯಸ್ಸಿನ ಕಾಮತ್, ಮುಂದಿನ ಪಂದ್ಯಗಳಲ್ಲಿ ಪದಕ ಗಳಿಸುವ ಸಾಧ್ಯತೆಗಳ ಬಗ್ಗೆ ತನ್ನ ತರಬೇತುದಾರ ಅನ್ಶುಲ್ ಗಾರ್ಗ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
“ಪದಕದ ಅವಕಾಶ ಕಷ್ಟ ಎಂದು ನಾನು ಅವಳಿಗೆ ಹೇಳಿದ್ದೆ. ಅದು ಅತ್ಯಂತ ಕಠಿಣ ಪರಿಶ್ರಮ ಬೇಡುವ ಕೆಲಸ. ಅವಳು ವಿಶ್ವ ರ್ಯಾಂಕಿಂಗ್ ನಲ್ಲಿ 100ಕ್ಕಿಂತ ಹೊರಗಿದ್ದಾಳೆ. ಆದರೆ ಇತ್ತೀಚಿನ ತಿಂಗಳಲ್ಲಿ ಅವಳು ತುಂಬಾ ಸುಧಾರಣೆ ಕಂಡಿದ್ದಾಳೆ. ಆದರೆ ಅವಳು ಅದಾಗಲೇ ನಿರ್ಧಾರ ಮಾಡಿದ್ದಳು. ಒಮ್ಮೆ ನಿರ್ಧಾರ ಮಾಡಿದವರನ್ನು ಮತ್ತೆ ಬದಲಾವಣೆ ಮಾಡುವುದು ಕಷ್ಟದ ಕೆಲಸ” ಎಂದು ಕೋಚ್ ಹೇಳಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಚನಾ ಆಯ್ಕೆಯು ಚರ್ಚೆಯ ಚರ್ಚೆಯಾಗಿತ್ತು, ಅದರಲ್ಲೂ ವಿಶೇಷವಾಗಿ ವಿಶ್ವ ನಂ. 1 ಸನ್ ಯಿಂಗ್ಶಾ ಅವರನ್ನು ಸೋಲಿಸಿದ ಐಹಿಕಾ ಮುಖರ್ಜಿಯ ಬದಲಾಗಿ ಅರ್ಚನಾ ಅವಕಾಶ ಪಡೆದಿದ್ದರು.
ಆರ್ಥಿಕವಾಗಿ ಸುಭದ್ರ
ಉಡುಪಿ ಮೂಲದ ಬೆಂಗಳೂರಿನ ಅರ್ಚನಾ ಕಾಮತ್ ಅವರು ಆರ್ಥಿಕವಾಗಿ ಸುಭದ್ರವಾದ ವೈದ್ಯರ ಕುಟುಂಬದಿಂದ ಬಂದವರು. ಅವರ ಹೆತ್ತವರು ನೇತ್ರಶಾಸ್ತ್ರಜ್ಞರು. ಅವರ ಸಹೋದರ ಪ್ರಸ್ತುತ ಅಮೆರಿಕದಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಕಲಿಯುತ್ತಿದ್ದಾರೆ.
ಇಂಟರ್‌ನ್ಯಾಶನಲ್ ಸಂಬಂಧದ ವಿಷಯದಲ್ಲಿ ಈಗಾಗಲೇ ಸ್ನಾತಕೋತ್ತರ ಪದವಿ ಪಡೆದಿರುವ ಅರ್ಚನಾ ಮಿಚಿಗನ್‌ನಲ್ಲಿ ಇನ್ನೊಂದು ಮಾಸ್ಟರ್ ಪದವಿ ಪಡೆಯಲು ಉತ್ಸುಕರಾಗಿದ್ದಾರೆ.
ಶಾಲಾ ದಿನಗಳಿಂದಲೂ ಓದಿನಲ್ಲಿ ಬಹಳಷ್ಟು ಆಸಕ್ತಿ ವಹಿಸಿದ್ದ ಅವರು 10 ಮತ್ತು 12ನೆ ತರಗತಿಯ ಪರೀಕ್ಷೆಯಲ್ಲಿ ಅನುಕ್ರಮವಾಗಿ ಶೇಕಡಾ 98.7 ಮತು 97 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದರು.
ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದ ಅವರು ಎರಡು ವರ್ಷಗಳ ಅನಂತರ ಅರ್ಥಶಾಸ್ತ್ರಜ್ಞರಾಗಿ ಭಾರತಕ್ಕೆ ಮರಳಲು ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಬಯಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.